ಕಾಗವಾಡ

ರಾಷ್ಟ್ರ ಪುರುಷರಿಗೆ ಅವಮಾನ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ರಾಷ್ಟ್ರ ಪುರುಷರಿಗೆ ಅವಮಾನ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಲೋಕದರ್ಶನ ವರದಿ 

ಕಾಗವಾಡ 22: ಇತ್ತಿಚಿಗೆ ರಾಷ್ಟ್ರ ಪುರುಷರಾದ ಛತ್ರಪತಿ ಶಿವಾಜಿ ಮಹಾರಾಜರು, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಹಾಗೂ ವಿಶ್ವಗುರು ಬಸವೇಶ್ವರ ಪ್ರತಿಮೆಗಳಿಗೆ ಅವಮಾನ ಖಂಡಿಸಿ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿಯ ಮರಾಠಾ ಸಮಾಜ ಬಾಂಧವರ ವತಿಯಿಂದ ಪ್ರತಿಭಟಿಸಿ ಸಮಾಜ ಕಂಟಕರನ್ನು ಬಂಧಿಸಿ ಕ್ರಮ ಜರುಗಿಸಲು ಆಗ್ರಹಿಸಿದರು. 

ಮಂಗಳವಾರ ದಿ. 21ರಂದು ಸಂಜೆ ಉಗಾರ ಖುರ್ದ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಪುತಳಿ ಮುಂಭಾಗದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ವಿಶ್ವನಾಥ ಶಿರಸಾಟ, ಪ್ರಫೂಲ ಥೋರುಶೆ ಇವರ ಮುಂದಾಳತೆಯಲ್ಲಿ ಸಮಾಜ ಬಾಂಧವರು ಒಂದುಗೂಡಿ ಛತ್ರಪತಿ ಶಿವಾಜಿ ಮಹಾರಾಜರ ಪುತಳಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. 

ರಾಷ್ಟ್ರ ಪುರುಷರಿಗೆ ಅವಮಾನವನ್ನು ಮಾಡಿದವರನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು. 

ಮರಾಠಾ ಸಮಾಜದ ಅಧ್ಯಕ್ಷ ವಿಶ್ವನಾಥ ಶಿರಸಾಟ, ಉಪಾಧ್ಯಕ್ಷ ವಿಜಯ ಥೋರುಶೆ, ಪ್ರಫೂಲ ಥೋರುಶೆ, ದೀಲೀಪ ಶಿಂಧೆ, ವಿಕ್ರಂ ಭೋಸಲೆ, ಸುರೇಶ ದೇಸಾಯಿ, ಕುಮಾರ ಜಗತಾಪ, ಕಿರಣ ಮೋರೆ, ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ