ಶಿಗ್ಗಾವ್

ನಿಗಮದ ನಾಮ ನಿರ್ದೇಶಕ ಸದಸ್ಯರಿಗೆ ಗೌರವ ಸನ್ಮಾನ

ನಿಗಮದ ನಾಮ ನಿರ್ದೇಶಕ ಸದಸ್ಯರಿಗೆ ಗೌರವ ಸನ್ಮಾನ

ಶಿಗ್ಗಾವಿ :ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯದ ಡಾ.ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕರಾಗಿ ಆಯ್ಕೆಯಾದ ತಾಲೂಕಿನದಲಿತ ಸಮಾಜದ ಹಿರಿಯ ಮುಖಂಡ ಕರಿಯಪ್ಪ ಕಟ್ಟಿಮನಿ ರವರಿಗೆ ಹಾಗೂ ಡಾ. ಬಿ.ಆರ್‌ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ವಕೀಲ ಡಾ.ಮಲ್ಲೇಶಪ್ಪ ಹರಿಜನರವರಿಗೆ ತಾಲೂಕ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಹರಿಜನರವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  

ಮಾಜಿ ತಾ.ಪಂ ಸದಸ್ಯರುಗಳಾದ ನಿಂಗಣ್ಣ ಹರಿಜನ, ಮಲ್ಲೇಶಪ್ಪ ದೊಡ್ಡಮನಿ, ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹರಿಜನ, ಯಲ್ಲಪ್ಪ ದೊಡ್ಡಮನಿ. ಬಿಜೆಪಿ ಎಸ್ ಸಿ ಮೋರ್ಚಾ ಸಹಕಾರ್ಯದರ್ಶಿ ಸುರೇಶ ಮುಡೆಣ್ಣವರ. ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಸಂಜುಕುಮಾರ ತೆಳಗೇರಿ. ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಮಾದರ. ಬಿಜೆಪಿ ಎಸ್ ಸಿ ಮೋರ್ಚಾ ಕೋಶ್ಯಾಧ್ಯಕ್ಷ ಸಂತೋಷ ಕಟ್ಟಿಮನಿ. ಪ್ರಕಾಶ ಬಾವಿಕಟ್ಟಿ ,ವೀರಪಾಕ್ಷಪ್ಪ ಮಡ್ಲಿ, ನೀಲಪ್ಪಕೆಳಗೇರಿ, ಗುರುಶಾಂತಪ್ಪ ಶಿಡ್ಲಾಪುರ, ಧರ್ಮಣ್ಣ ಹರಿಜನ, ಕರೆಪ್ಪ ಮಾದರ, ನೀಲಪ್ಪ ಹಳೆಮನಿ, ದುರ್ಗಪ್ಪ ಮೋಟಳ್ಳಿ, ಇನ್ನುಳಿದ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ