ರಾಣೆಬೆನ್ನೂರ

ದಸರಾ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ: ಇಂದು ಉತ್ಸವ ಮೂರ್ತಿ ಮೆರವಣಿಗೆ

ದಸರಾ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ: ಇಂದು ಉತ್ಸವ ಮೂರ್ತಿ ಮೆರವಣಿಗೆ

ರಾಣೆಬೆನ್ನೂರು 29:  ಇಲ್ಲಿನ  ದುರ್ಗಾ ವೃತ್ತದಲ್ಲಿ,, ದಸರಾ ಉತ್ಸವ ಸಮಿತಿಯು ಪ್ರತಿವರ್ಷದಂತೆ ಈ ವರ್ಷವೂ ಸಹ, ದಸರಾ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಿದೆ. ಐದು ದಿವಸಗಳ ಕಾಲ ಪ್ರತಿಷ್ಠಾಪಿಸಲಾಗುವ ಮೂರ್ತಿಯ ಮೆರವಣಿಗೆಯು ಸೆಪ್ಟೆಂಬರ್ 30ರಂದು ಶುಕ್ರವಾರ 3:00 ಗಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹೊರಡಲಿದೆ. ದೇವಸ್ಥಾನ ಸಭಾಂಗಣದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಹೊರಡುವ ದೇವಿಯ ಉತ್ಸವ ಮೆರವಣಿಗೆಯು, ಪುರಜನರು  ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡುವರು. ನಗರದ ಪ್ರಮುಖ ಬೀದಿಗಳಲ್ಲಿ   ಸಂಚರಿಸಿ 30 ರಂದು ಮಧ್ಯರಾತ್ರಿ ಜನತಾ ಬಜಾರ್ ಬಳಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಶ್ರೀದೇವಿ ಪ್ರತಿಷ್ಠಾಪನೆಗೊಳ್ಳುವಳು. ಶನಿವಾರದಿಂದ ನಿತ್ಯವು ಸಾವಿರಾರು ಭಕ್ತರಿಗೆ ಶ್ರೀದೇವಿ ದರ್ಶನಾಶೀರ್ವಾದ ನೀಡುವಳು. ಸಂಜೆ ಸಾರ್ವಜನಿಕವಾಗಿ ಪ್ರಸಾದ ವಿತರಣೆ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ