ರಾಣೆಬೆನ್ನೂರ

ಅತೀ ಹಿಂದುಳಿದಿರು ಸಮಾಜವನ್ನು (ಎಸ್‌ಟಿ) ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯ

ಅತೀ ಹಿಂದುಳಿದಿರು ಸಮಾಜವನ್ನು (ಎಸ್‌ಟಿ) ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯ

ರಾಣಿಬೆನ್ನೂರ 28:  ಬೆಸ್ತ, ಬೋವಿ, ಅಂಬಿಗ, ಸುಣಗಾರ, ಜಾಡಮಲಿ, ಕೋಲಕಾರ,  ಮೊಗವೀರ, ತಳವಾರ, ಪರಿವಾರ, ಬಾರ್ಕಿ, ಗಂಗಾಮತ, ಕೋಳಿ, ಟೋಕರಿಕೋಳಿ ಸ್ಭೆರಿದಂತೆ 26 ಪರಾ​‍್ಯಯ ಪದಗಳನ್ನು ಹೊಂದಿರುವ ಹಾಗೂ ಅತೀ ಹಿಂದುಳಿದಿರು ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಲು, ಹೋರಾಟ ಸಮಿತಿ ರಚಿಸಲು ಒಂದು ವಾರದೊಳಗೆ ಗಂಗಾಮತ ಸಮಾಜದ ಸಭೆಯಲ್ಲಿ ಸರ್ವವರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ತಾಲೂಕಾ ಗಂಗಾಮತ ಸಮಾಜದ ಅಧ್ಯಕ್ಷ ರಾಜು ಜಡಮಲಿ ಹೇಳಿದರು. 

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಸಭೆಗೆ ಸಮಾಜ ಬಾಂದವರು ಆಗಮಿಸಿ ಸಭೆ ಯಶಸ್ವಿಗೊಳಿಸಬೇಕು. ಸಾವಿರಾರು ಸರ್ವಗಳಿಂದಲೂ ಬಡತನದಲ್ಲಿಯೇ ಜೀವನ ಸಾಗಿಸುತ್ತಾ ಬಂದಿರುವ ಗಂಗಾಮತ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಇಂತಹ ಸಮಾಜಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳು ಗತಿಸಿದರೂ ಪರಿಶಿಷ್ಟ ಪಂಗಡ ಮೀಸಲಾತಿಯಿಂದ ವಂಚಿತರಾಗಿದ್ದೇವೆ ಇದು ಈಬಡ ಸಮಾಜದದ ುರಂತವಾಗಿದೆ ಎಂದರು. 

ನಮ್ಮ ಸಂವಿಧಾನದಲ್ಲಿ ತುಳಿತಕ್ಕೆ ಒಳಗಾದ ಹಾಗೂ ಬಡ ಸಮಾಜವನ್ನು ಸಮಾನತೆಗಾಗಿ ತರುವ ಉದ್ದೇಶವಿದೆ. ಅದನ್ನು ಎಲ್ಲ ರಾಜಕೀಯ ಪಕ್ಷಗಳು ಗಾಳಿಗೆ ತೂರಿ ಮತಗಳಿಕೆಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗಂಗಾಮತ ಸಮಾಜವು ಇನ್ನು ಮುಂದೆ ಸುಮ್ಮನೆ ಇರಲು ಸಾಧ್ಯವಿಲ್ಲ. ತಕ್ಷಣ ಕೇಂದ್ರ ಸರ್ಕಾರ ಎಸ್‌ಟಿ ಮೀಸಲಾತಿ ಘೋಷಿಸಬೇಕು ಎಂದು ಒತ್ತಾಯಿಸಿದರು. 

 ಈ ಸಮಾಜಕ್ಕೆ ರಾಜ್ಯದಲ್ಲಿ ಏಕೈಕ ಪೀಠವಾಗಿರುವ ಹಾವೇರಿ ತಾಲೂಕಿನ ನರಶೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠವಾಗಿದೆ. ಶ್ರೀ ಪೀಠದ ಮಾರ್ಗದರ್ಶನದಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸಮಾಜದ ಜನರು ಪಕ್ಷ ಬೇಧ ಪರೆತು ಸಂಘಟಿತರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದರು.  

ಆದಾಗ್ಯ ಮೀಸಲಾತಿ ಘೋಸಣೆ ಮಾಡದಿದ್ದರೆ ರಾಜ್ಯದ ಪ್ರತಿ ಜಲ್ಲೆ ಮತ್ತು ಪ್ರತಿ ತಾಲೂಕಿನಲ್ಲಿಯೂ ಪ್ರತಿಭಟನೆ ನಡೆಸುವ ಮೂಲಕ ಹಕ್ಕೋತ್ತಾಯ ಮಾಡಲಾಗುವುದು. ಒಂದು ವಾರದೊಳಗಾಗಿ ಸಭೆ ಕರೆದು ತೀರ್ಮಾನಿಸಲಾಗುವುದು. ನಾವು ತಿಳಿಸುವ ದಿನದಂದು ಎಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ತಿಳಿಸಬೇಕು ಎಂದು ಮನವಿ ಮಾಡಿದರು.  

 ಸಮಾಜದ ಮುಖಂಡರಾದ ಆರ್‌.ಎಚ್‌. ಐರಣಿ, ನ್ಯಾಯವಾದಿ ಹೊನ್ನಪ್ಪ ತಿಮ್ಮೇನಹಳ್ಳಿ, ಕೊಟೇಶಪ್ಪ ಕುದರಿಹಾಳ ಸಂಘಟನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕರಬಸಪ್ಪ ಬಾರ್ಕಿ, ಕಾಳಪ್ಪ ಅಂಬಿಗೇರ, ರಾಜು ರಟ್ಟಿಹಳ್ಳಿ, ಹೊನ್ನಪ್ಪ ಹರವಿ, ಮೂರ್ತಿ ಸುಣಗಾರ ಮತ್ತಿತರರು ಇದ್ದರು.  


ಸುದ್ದಿ ಓದಿ