ರಾಣೆಬೆನ್ನೂರ

ರೈತರ ಜಮೀನುಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಒತ್ತಾಯ

ರೈತರ ಜಮೀನುಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಒತ್ತಾಯ

      ರೈತರ ಜಮೀನುಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಒತ್ತಾಯ 

ರಾಣಿಬೆನ್ನೂರ:4 ಕೆಲ ರೈತರ ಜಮೀನುಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಅನೇಕ ಮುಖಂಡರು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ಥಾವನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ, ಆತಂಕಕ್ಕೆ ಒಳಗಾಗಿರುವ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಆರ್‌.ಎಚ್‌. ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.   

    ಪ್ರತಿಭಟನಾ ಮೆರವಣಿಗೆಯು ನಗರದ ಶ್ರೀಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನಿವಿಧಾನ ಸೌಧದ ಬಳಿ ಜಮಾವಣೆಗೊಂಡು ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರರ ಮೂಲಕ ಸರ್ಕಾರ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

   ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆಲ ರೈತರ ಜಮೀನುಗಳಲ್ಲಿ ವಕ್ಪ್‌ ಆಸ್ತಿ ಎಂದು ಪಹಣಿಯಲ್ಲಿ ಹೆಸರು ನೊಂದಾವಣೆಯಾಗಿರುವುದು ರೈತರ ಆಕ್ರೋಶಕ್ಕೆ, ಆತಂಕಕ್ಕೆ ಮೂಲ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಕ್ಪ್‌ ಆಸ್ತಿಯ ಸರ್ವೆ ನಂಬರಗಳಲ್ಲಿ ತಮ್ಮ ಜಮೀನಿನ ಸರ್ವೆ ನಂಬರ ನಮೂದಾಗಿರುವದು ರೈತರ ಆತಂಕ ಇಮ್ಮಡಿಗೊಳಿಸಿದೆ. ಈಗಾಗಲೇ ಈ ಆಸ್ತಿಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಅನೇಕ ಮುಖಂಡರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆಂದು ಹೇಳಲಾಗಿದ್ದು, ಈ ಪ್ರಸ್ಥಾವನೆ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ. 

       ನಗರ ಸೇರಿದಂತೆ ಗಂಗಾಜಲ ತಾಂಡಾ, ಕವಲೆತ್ತು, ಹಲಗೇರಿ, ಮೇಡ್ಲೇರಿ,  ಕುಪ್ಪೇಲೂರ, ಐರಣಿ  ಮತ್ತಿತರ ಸ್ಥಳಗಳಲ್ಲಿ ಅಂದಾಜು ಸಹಸ್ರಕ್ಕೂ ಅಧಿಕ ಎಕರೆ ವಿಸ್ತೀರ್ಣದ ಆಸ್ತಿಗಳು ವಕ್ಪ್‌ಗೆ ಸೇರಿಸಲಾಗಿದೆ ಆದಕಾರಣ ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಅನೇಕ ಮುಖಂಡರು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ಥಾವನೆ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

   ರೈತ ಮುಖಂಡ ಪ್ರಭುಸ್ವಾಮಿ ಕರ್ಜಗಿಮಠ, ಹನುಮಂತಪ್ಪ ಕಬ್ಬಾರ ಬಾಬಣ್ಣ ಕೊಪ್ಪದ, ರೇವಣಸಿದ್ದಯ್ಯ ನೂರಂದೇವರಮಠ, ಕೊಟ್ಟಪ್ಪ ಸಿದ್ದಾಳಿ, ಪ್ರಶಾಂತ ಹಿತ್ತಲಮನಿ,  ಬಸವರಾಜ ಗೌಳಿ,  ಮಂಜುನಾಥ ಗೌಳಿ, ಶಂಭು  ಹಿತ್ತಲಮನಿ, ವೆಂಕಟೇಶ ಹುಬ್ಬಳ್ಳಿ, ಬಿದ್ದಾಡೆಪ್ಪ ಚಕ್ರಸಾಲಿ, ಮಂಜಣ್ಣ ಪಾಮೇನಹಳ್ಳಿ, ಭರಮಪ್ಪ ದುಮಳಗಿ, ಗಣೇಶ ಮೂಲಿಮನಿ, ಮಲ್ಲಪ್ಪ ನಾಳಗಿ, ನಾಗರಾಜ ರೋಖಡೆ, ಬೀಮಪ್ಪ ಮಾಳಗಿ,ಉಜ್ಜಪ್ಪ ಗೌರಕ್ಕಳವರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಫೋಟೊ:4ಆರ್‌ಎನ್‌ಆರ್05ರಾಣಿಬೆನ್ನೂರ: ರೈತರ ಜಮೀನುಗಳನ್ನು ವಕ್ಪ್‌ ಬೋರ್ಡಿಗೆ ಸೇರಿಸಬೇಕೆಂದು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ಥಾವನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ, ರೈತರು ತಹಶೀಲ್ದಾರಆರ್‌.ಎಚ್‌. ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ