ಕಾಲುವೆಗೆ ನೀರು ಹರಿಸುವಂತೆ ಮನಗೂಳಿ ಆಗ್ರಹ
ಸಿಂದಗಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸದ ಕಾರಣದ ಯೋಜನೆಯಿಂದ ವಿಜಾಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕಿನ 37 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಬೆಳೆದ ಬೆಳೆಗೆ ನೀರಿಲ್ಲದಂತಾಗೆ ಬೆಳೆ ಒಣಗುತ್ತಿವೆ. ಸದ್ಯ ರೈತರು ಆತಂಕ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಕೂಡಲೇ ಕಾಲುವೆಗೆ ನೀರು ಹರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ರವಿವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಸಾಮಾನ್ಯವಾಗಿ ದುರಸ್ತಿ ಕಾರ್ಯಗಳನ್ನು ಬೇಸಿಗೆಯಲ್ಲಿ ಮಾಡಿ ಮುಗಿಸಿ ಜೂನ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಲು ಸಜ್ಜುಗೊಳಿಸಲಾಗುತ್ತದೆ. ಆದರೆ ಈಗ ಬೆಳೆಗಳು ಬೆಳೆದು ನಿಂತಿವೆ. ಬೆಳೆಗಳಿಗೆ ನೀರಿನ ಅವಶ್ಯಕತೆಯಿದೆ. ಕಳೆದ ಒಂದು ತಿಂಗಳಿಗಿಂತ ಹೆಚ್ಚು ದಿನಗಳಿಂದ ಕಾಲುವಿಗೆ ನೀರು ಹರಿಸಿಲ್ಲ. ಅಧಿಕಾರಿಗಳಿಗೆ ಕೇಳಿದರು ಯಂತ್ರ ದುರಸ್ಥಿಯಲ್ಲಿವೆ. ಟೆಂಡರ್ ಕರೆಯಲಾಗಿದೆ ಎಂಬ ಹರಕೆ ಉತ್ತರ ನೀಡುತ್ತಾರೆ. ಮುಂಚಿತವಾಗಿ ಯಂತ್ರ ದುರಸ್ತಿ ಕೆಗೆತ್ತಿಕೊಳ್ಳದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ದುರಸ್ತಿ ಮಾಡಿ ಕಾಲುವೆಗೆ ನೀರು ಹರಿಸುವದು ಯಾವಾಗ ಎಂಬುದು ರೆತರ ಆಕ್ರೋಶವಾಗಿದೆ ಎಂದು ಆಕ್ರೋಶವ್ಯಕ್ತ ಪಡೆಸಿದ್ದಾರೆ.
ಜಾಕವೆಲ್ ವಾರ್ಷಿಕ ನಿರ್ವಹಣೆಗಾಗಿ ನಿಗಮವು ಕೋಟ್ಯಂತರ ರೂ.ಗುತ್ತಿಗೆ ನೀಡುತ್ತದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ವಹಣೆ ಮಾಡದೇ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಯಂತ್ರಗಳು ಕೂಡಲೇ ದುರಸ್ತಿಗೊಳಿಸಿ ಕಾಲುವೆ ಪ್ರಾರಂಭದಿಂದ ಕೊನೆಯವರೆಗೂ ನೀರು ಸರಬರಾಜು ಮಾಡುವ ಮೂಲಕ ರೈತರಿಗೆ ನೆರವಾಗದಿದ್ದರೆ ಹೋರಾಟ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.