ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ಗುಳೇದಗುಡ್ಡ, 25:ದೇವಾಂಗ ಸಮಾಜದವರು ಸೂಕ್ತ ರಾಜಕೀಯ ಪ್ರಾಥಿನಿಧ್ಯದ ಕೊರತೆ ಅನುಭವಿಸುತ್ತಿದ್ದು, ಸಮಾಜಕ್ಕೆ ಯಾವುದೇ ಮೀಸಲಾತಿ ಸೌಲಭ್ಯಗಳಿಲ್ಲದಿರುವುದರಿಂದ ಸಮಾಜದ ಜನತೆ ಆರ್ಥಿಕ, ಶೈಕ್ಷಣಿಕ, ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಂಧ್ರಪ್ರದೇಶದ ಮಾದರಿಯಲ್ಲಿ ದೇವಾಂಗ ಅಭಿವೃದ್ಧಿ ನಿಗಮವನ್ನು ರಾಜ್ಯದಲ್ಲಿಯೂ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಜಿ.ಎಂ. ಕುಲಕರ್ಣಿ ಅವರಿಗೆ ಪಟ್ಟಣದ ದೇವಾಂಗ ಸಮಾಜ ಬಾಂಧವರು ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 27 ಲಕ್ಷ ಜನಸಂಖ್ಯೆ ಹೊಂದಿರುವ ದೇವಾಂಗ ಸಮಾಜವು ನಾಡಿನ ಸಾಮಾಜಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ತನ್ನದೇಯಾದ ಕೊಡುಗೆಯನ್ನು ನೀಡುತ್ತ ಬಂದಿದೆ. ಆದರೆ ಮೂಲೋಧ್ಯೋಗ ನೇಕಾರಿಕೆ ವೃತ್ತಿಯನ್ನೇ ಅವಲಂಭಿಸಿದ ಸಮಾಜದ ಬಹುಸಂಖ್ಯಾತ ಜನತೆ ಆರ್ಥಿಕ ಮತ್ತು ಸಾಮಜಿಕ ಸ್ಥಿತ್ಯಂತರಗಳಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುಂತಾಗಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ್ದಾರೆ. ದೇವಾಂಗ ಸಮಾಜದ ಸಂಖ್ಯೆ ಗಣನೀಯವಾಗಿದ್ದರೂ ಈ ಸಮಾಜದ ಜನರು ಸೂಕ್ತ ರಾಜಕೀಯ ಪ್ರಾತಿನಿಧ್ಯ ಕೊರತೆ ಅನುಭವಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಯಾವುದೇ ವಿಶೇಷ ಮೀಸಲಾತಿ ಸೌಲಭ್ಯಗಳಿಲ್ಲದೇ ಸಮಾಜದ ಜನತೆ ಆರ್ಥಿಕ, ಶೈಕ್ಷಣಿಕ, ಸಾಮಜಿಕ, ರಾಜಕೀಯವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಿಲ್ಲ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡಳಿಯ ಯೋಜನೆಗಳಲ್ಲಿ ದೇವಾಂಗ ಸಮಾಜಕ್ಕೆ ಮೀಸಲಾತಿಯಿತ್ತಾದರೂ 4-5 ವರ್ಷಗಳ ಹಿಂದೆ ಅದನ್ನು ರದ್ದು ಪಡಿಸಲಾಗಿದೆ. ಇದು ಸಮಾಜದ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ. ಹಾಗೆÀಯೇ ದೇವಾಂಗ ಸಮಾಜದ ಜನರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಲು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ದಿ ಹೊಂದಲು ವಿಶೇಷ ಕಾರ್ಯಕ್ರಮಗಳುನ್ನು ಹಮ್ಮಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.
ಮುಖಂಡ ರಂಗಪ್ಪ ಶೇಬಿನಕಟ್ಟಿ ಮನವಿ ಓದಿದರು. ನಂತರ ದೇವಾಂಗ ಸಮಾಜ ಬಾಂಧವರು ತಹಶೀಲ್ದಾರ ಅವÀರಿಗೆ ಮನವಿ ಸಲ್ಲಿಸಿದರು.
ಸಮಾಜದ ಹಿರಿಯರಾದ ಅಮಾತೆಪ್ಪ ಕೊಪ್ಪಳ, ಬುದ್ದವಂತಪ್ಪ ಕಾಳಗಿ, ರಾಮಚಂದ್ರ ಹಾನಾಪೂರ, ಶಂಕ್ರಣ್ಣ ಮೇಡಿ, ರಂಗಪ್ಪ ಶೇಬಿನಕಟ್ಟಿ, ವಿಠ್ಠಲ ಕಳಸಾ, ಈರಪ್ಪ ಶೇಬಿನಕಟಿ, ವಾಸಪ್ಪ ತೆಗ್ಗಿನಮನಿ, ಪಾಂಡಪ್ಪ ಕಳಸಾ, ಶಂಕ್ರಪ್ಪ ಬಳಿಗೇರಿ, ಮುಕುಂದಪ್ಪ ದೊಡಮನಿ ಸೇರಿದಂತೆ ಇತರರು ಇದ್ದರು.