ಶಿಗ್ಗಾವ್

ಪ್ರಸ್ತುತದ ಸಂಪುಟದಲ್ಲು ಕೆಂಗಲ್ ಹನುಮಂತಯ್ಯನವರನ್ನು ಸಚಿವರನ್ನಾಗಿ ನೇಮಿಸುವಂತೆ ಒತ್ತಾಯ

ಪ್ರಸ್ತುತದ ಸಂಪುಟದಲ್ಲು ಕೆಂಗಲ್ ಹನುಮಂತಯ್ಯನವರನ್ನು ಸಚಿವರನ್ನಾಗಿ ನೇಮಿಸುವಂತೆ ಒತ್ತಾಯ

ಶಿಗ್ಗಾವಿ : ಕಲೆ, ಸಾಹಿತ್ಯ, ಸಾಂಸ್ಕೃತೀಕ ಪರಂಪರೆಯ ಸಂಸ್ಕೃತಿಗೆ ಪ್ರತ್ಯೇಕ ಇಲಾಖೆಯೊಂದು ಇರುವುದಾದರೇ ದೇಶದಲ್ಲೆ ಕರ್ನಾಟಕದಲ್ಲಿ ಮಾತ್ರ, ಕೆಂಗಲ್ ಹನುಮಂತಯ್ಯನವರ ದೂರದೃಷ್ಠಿತ್ವದಿಂದ ಅವರು ಕನ್ನಡ ಭಾಷೆ, ನಾಡಿನ ವೈವಿದ್ಯದ ಮೇಲಿನ ಪ್ರೀತಿಯಿಂದ ಸ್ಥಾಪಿತವಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಸಚಿವರನ್ನು ಕಂಡಿದೆ, ಹಿಂದೆ ಇಲಾಖೆಯನ್ನು ಮುನ್ನಡೆಸಿದ್ದ ಅನೇಕ ಮಹನೀಯ ಸಚಿವರು ಇಲಾಖೆಗೊಂದು ಹೊಸತನ ತಂದುಕೊಟ್ಟ ಕಾರಣ ಪ್ರಸ್ತುತದ ಸಂಪುಟದಲ್ಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸುವಂತೆ ರಂಗಭೂಮಿ ನೇಪಥ್ಯ ಕಲಾವಿದ ಶಂಕರ ಅರ್ಕಸಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನ ಪತ್ರ ಮುಖೇನ ಒತ್ತಾಯಿಸಿದ್ದಾರೆ,  

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕಾರ್ಯವನ್ನು ಇಲಾಖೆ ಮಾಡುತ್ತಾ ಬಂದಿದೆ, ಕನ್ನಡ ಭಾಷೆ, ನಾಡಿನ ಎಲ್ಲ ಕಲಾ ಪ್ರಾಕಾರಗಳ ಪ್ರದರ್ಶಕ ಕಲೆ, ಕಲಾವಿದರ ಬಗ್ಗೆ ಒಲವುಳ್ಳ ಸಚಿವರು ನೇಮಕವಾಗಬೇಕು, ಕನ್ನಡ ನಾಡಿನ ನೆಲಮೂಲದ ಜನಪದಿಯ ಕಲೆಯಿಂದ ಬಂದ ಕಲಾವಿದರು ನಾಡಿನ ಸಾಂಸ್ಕೃತೀಕ ರಾಯಭಾರಿಗಳಾಗಿದ್ದಾರೆ, ಅವರುಗಳ ಕಷ,್ಟ ಸುಖಗಳ ಬಗ್ಗೆ ಸಚಿವರು ಆಸಕ್ತಿ ವಹಿಸುವಂತಾಗಬೇಕು, ಇಲಾಖೆಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳಾದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳಿಗೆ ಸರ್ಕಾರ ನಿಗದಿತ ಅನುದಾನ ನೀಡುವಂತಾಗಬೇಕು, ಕಲಾವಿದರುಗಳಿಗೆ ಯಾವುದೇ ಆರ್ಥಿಕ ಭದ್ರತೆ ಇರದ ಕಾರಣ ಯುವ ಜನತೆಯು ಕಲೆಗಳತ್ತ ಮುಖಮಾಡುತ್ತಿಲ್ಲ,  ಕಲಾವಿದರ ಭವಿಷತ್ತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದರು. 

 ಯುವಶಕ್ತಿ ಕಲೆಯನ್ನು ಅಪ್ಪಿಕೊಂಡಿದ್ದಾದರೆ ನಾಡಿನ ಕಲೆಗಳಿಗೆ ಮರುಜೀವ ಬರಲು ಸಾಧ್ಯ, ಇಲಾಖೆ ಕಲಾವಿದರಿಗೆ ನೀಡುತ್ತಿರುವ ಮಾಹಿಯಾನ ಮಾಶಾಸನ  ಎರಡು ಸಾವಿರ ರೂ, ಇಂದಿನ ದುಬಾರಿ ಕಾಲದಲ್ಲಿ ಯಾತಕ್ಕೂ ಸಾಲದ ಕಾರಣ ಕನಿಷ್ಠ ಐದು ಸಾವಿರಕ್ಕೆ ಹೆಚ್ಚಿಸಬೇಕು. ಇಗಿರುವ ಮಾಶಾಸನ  ಐವತ್ತೆಂಟು ವರ್ಷ ವಯೋಮಿತಿಯನ್ನು ಐವತ್ತು ವರ್ಷಕ್ಕೆ ನಿಗದಿಪಡಿಸಬೇಕು, ಪ್ರಾಥಮಿಕ ಹಂತದ ಶಾಲಾ ಪಠ್ಯ ಪುಸ್ತಕಗಳಲ್ಲಿ ಜಾನಪದ, ರಂಗಕಲೆ, ಸಂಗೀತ, ನಾಟ್ಯಶಾಸ್ತ್ರಗಳ ಬಗ್ಗೆ ಪಾಠಗಳನ್ನು ಅಳವಡಿಸುವಂತಾಗಬೇಕು, ಇನ್ನು ನಾಡಿನ ಪ್ರಾಚೀನ ಶಿಲ್ಪಕಲಾ ವೈಭವದಿಂದ ಜಗತ್ತಿನ ಗಮನ ಸೆಳೆಯುತ್ತಿರುವ ದೇವಾಲಯ, ಸ್ಮಾರಕಗಳನ್ನು ಪುನಃಶ್ಚೇತನಗೋಳಿಸಿ, ಅವುಗಳಿಗೆ ಧ್ವನಿ ಬೆಳಕು, ಕಾರಂಜಿ, ಉದ್ಯಾನವನಗಳಂತ ವ್ಯವಸ್ಥೆ ಅಳವಡಿಕೆ ಆಗುವಂತಾಗಿ ಇಲಾಖೆಯ ಬಗೆಗೆ ಕಾಳಜಿ ಮತ್ತು ಕಳಕಳಿ ಹೊಂದಿರುವ ಇಲಾಖೆಯ ಆಡಳಿತವನ್ನು ಚುರುಕುಗೊಳಿಸುವ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿದ್ದಾದರೇ ಸರ್ಕಾರಕ್ಕೆ ಒಂದೊಳ್ಳೆ ಹೆಸರು ಬರಲು ಸಾಧ್ಯವಾಗಬಹುದೆಂಬ ಆಶಾಭಾವನೆಯನ್ನ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ