ಗುಳೇಗುಡ್ಡ

ಸದಾಶಿವ ವರದಿ ಜಾರಿಗೆ ಒತ್ತಾಯ : ಹಿರಿಯಪ್ಪ ಮಾದರ

ಸದಾಶಿವ ವರದಿ  ಜಾರಿಗೆ ಒತ್ತಾಯ : ಹಿರಿಯಪ್ಪ ಮಾದರ
ಗುಳೇದಗುಡ್ಡದಲ್ಲಿ ಕರ್ನಾಟಕ ಬಹುಜನ ಚಳವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಮಾತನಾಡಿದರು.

ಗುಳೇದಗುಡ್ಡ.23: ರಾಜ್ಯದಲ್ಲಿ ಮಾದಿಗ ಸಮಾಜ ಅತ್ಯಂತ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಸಂವಿಧಾನದ ಆಶಯದಂತೆ ಮಾದಿಗ ಸಮುದಾಯ ಅರ್ಥಿಕವಾಗಿ ಮುಂದೆ ಬರಲು ಸದಾಶಿವ ವರದಿ ಅನುಷ್ಠಾನ ಅಗತ್ಯವಾಗಿದ್ದೂ, ಅದನ್ನು ಆದಷ್ಟು ಬೇಗ ಜಾರಿಗೊಳಿಸಬೇಕೆಂದು ಕರ್ನಾಟಕ ಬಹುಜನ ಚಳವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಒತ್ತಾಯಿಸಿದ್ದಾರೆ.  

ಶುಕ್ರವಾರ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಸದಶಿವ ಆಯೋಗದ ವರದಿಯನ್ನು ಜಾರಿಗೆ ಮಾಡದಿದ್ದರೆ ಮುಂದಿನ ದಿನಮಾನದಲ್ಲಿ ಸರ್ಕಾರಕ್ಕೆ ಪೆಟ್ಟು ಬೀಳುವುದು ಖಂಡಿತ. ಕಾರಣ ಅತೀ ಶೀಘ್ರದಲ್ಲಿ ವರದಿ ಜಾರಿಗೆ ಮಾಡಬೇಕು. ಅಂಬೇಡ್ಕರ್ ನಿಗಮ ನಮಗೆ ಸಾಲ ಮಂಜೂರಿ ಮಾಡಿದರೂ ಬ್ಯಾಂಕಿನವರು ಸಾಲ ಕೊಡುತ್ತಿಲ್ಲ. ಇಷ್ಟೆಲ್ಲ ತೊಂದರೆ ಅನುಭವಿಸುವ ನಮ್ಮ ಸಮಾಜಕ್ಕೆ ಸದಾಶಿವ ವರದಿ ಅನುಷ್ಠಾನ ಅಗತ್ಯವಾಗಿದೆ ಎಂದರು. 

ಗುಳೇದಗುಡ್ಡ ತಾಲೂಕು ಕೇಂದ್ರವಾದರೂ ಇಲ್ಲಿ ಅಂಬೇಡ್ಕರ್ ಸರ್ಕಲ್ ಅಗಲಿ, ಅವರ ಮೂರ್ತಿ ಸ್ಥಾಪನೆ ಆಗಲಿ ಮಾಡಿಲ್ಲ. ಆದಷ್ಟು ಬೇಗ ಅವರ ಸರ್ಕಲ್ ಹಾಗೂ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಹಿರಿಯಪ್ಪ ಮಾದರ ಒತ್ತಾಯಿಸಿದರು.   

ಈ ಸಂದರ್ಭದಲ್ಲಿ ಫಕೀರಪ್ಪ ಕೋಟಿಕಲ್, ಯಲ್ಲಪ್ಪ ಮಂಗಳಗುಡ್ಡ, ರಾಚಪ್ಪ ಮಂಗಳಗುಡ್ಡ, ಸತ್ಯಪ್ಪ ನಾಗರಾಳ, ಹಣಮಂತ ಪರ್ವತಿ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ