ಹದಿನಾಲ್ಕು ದಿನದಲ್ಲಿ ರೈತರಿಗೆ ಕಾರ್ಖಾನೆಗಳು ಕಬ್ಬಿನ ಬಿಲ್ ಪೂರೈಸಲು ಒತ್ತಾಯ
ಅಥಣಿ 18: ದೇಶದ ಬೆನ್ನೆಲುಬಾಗಿರುವ ರೈತನ ಶೋಷಣೆ ನಿಲ್ಲಬೇಕು ಕೇಂದ್ರ ಸರಕಾರ ಕೈಗೊಂಡಿರುವ ರೈತ ವಿರೋಧಿ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು. ಹದಿನಾಲ್ಕು ದಿನದಲ್ಲಿ ರೈತರಿಗೆ ಕಾರ್ಖಾನೆಗಳು ಕಬ್ಬಿನ ಬಿಲ್ ಪೂರೈಸಬೇಕು ಎಂದು ಅಥಣಿ ತಾಲೂಕ ರೈತಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಥಣಿ ತಾಲೂಕಾ ರೈತ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತಾ ಕಬ್ಬು ಕಳಿಸಿದ ಹದಿನಾಲ್ಕು ದಿನದಲ್ಲಿ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬೀಲ ಪೂರೈಸುವುದಾಗಿ ಲಿಖಿತವಾಗಿ ಬರೆದು ಕೊಡುತ್ತವೆ ಆದರೆ ಅದನ್ನು ಜಾರಿಗೆ ತರುವಲ್ಲಿ ಮಾತ್ರ ಕಿಂಚಿತ್ತೂ ಪಾಲನೆ ಮಾಡುವುದಿಲ್ಲ ಹೀಗೆ ರೈತರನ್ನು ಶೋಷಣೆ ಮಾಡಿದರೆ ರೈತ ಬದುಕುವುದಾದರೂ ಹೇಗೆಎಂದು ಪ್ರಶ್ನಿಸಿದ ಅವರು ಕಳೆದ ಎರಡು ವರ್ಷಗಳಿಂದಲೂ ಜಿಲ್ಲೆಯ ಬಹುತೇಕ ಎಲ್ಲಾ ಕಾರ್ಖಾನೆಯಲ್ಲಿ ಪ್ರತಿ ಟನ್ ಕಬ್ಬಿನ 200 ರಿಂದ 350 ರ ವರೆಗಿನ ಬಿಲ್ ಗಳನ್ನ ಇನ್ನು ಪಾವತಿ ಮಾಡಿಲ್ಲ. ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಇದರಿಂದ ರೈತರಿಗೆ ಬರಬೇಕಾದ ಬಾಕಿ ಇನ್ನು ಹಾಗೆ ಉಳಿದಿದೆ.ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುವ ಜಾಯಮಾನ ಬಿಟ್ಟು ಸ್ವತಃ ತಾವೇ ಕಾರ್ಖಾನೆಗಳು ಕೂಡಲೆ ಬಾಕಿ ನೀಡುವಂತೆ ಸರ್ಕಾರ ಸೂಚಿಸಬೇಕು ಎಂದು ಮಹಾದೇವ ಮಡಿವಾಳ ಒತ್ತಾಯಿಸಿದ್ದಾರೆ.
ತಾಲ್ಲೂಕಿನಲ್ಲಿ ಪೂರ್ವ ಭಾಗದ ಕೇವಲ ಹದಿನೈದು ಕಿಲೋ ಮೀಟರ್ ದೂರವಿರುವ ಐದಾರು ಹಳ್ಳಿಗಳಿಗೆ ಸುತ್ತುಬಳಸಿ 72ಕಿಲೋ ಮೀಟರ್ ಕ್ರಮಿಸಿ ಕಾಲುವೆ ನೀರು ಹೋಗುವ ಪರಿಸ್ಥಿತಿಯಿದೆ ಐಗಳಿ ಗ್ರಾಮದ ಸುತ್ತಮುತ್ತ ಅರಟಾಳ, ಬಾಡಗಿ ಮುಂತಾದ ಗ್ರಾಮಗಳಿಗೆ ನೇರವಾಗಿ ಕಾಲುವೆ ನಿರ್ಮಿಸುವ ಮೂಲಕ ಬೇಗ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು ಹಾಗೂ ಈಗಾಗಲೇ ಕೆರೆ ತುಂಬುವ ಯೋಜನೆ ಘೋಷಣೆ ಮಾಡಿದ್ದು ಹದಿನೆಂಟು ಕೆರೆ ತುಂಬುವ ಕಾರ್ಯ ಶೀಘ್ರ ಪ್ರಾರಂಭವಾಗ ಬೇಕು.ಆಮೆಗತಿಯಲ್ಲಿ ಸಾಗುತ್ತಿರುವ ಬಸವೇಶ್ವರ ಯಾತ ನೀರಾವರಿ ಯೋಜನೆ ಶೀಘ್ರ ಲೋಕಾರ್ಪಣೆಗೆuಟಿಜeಜಿiಟಿeಜಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ನೂತನವಾಗಿ ರೈತ ಸಂಘಕ್ಕೆ ಸೇರ್ಪಡೆಯಾದ ನೂರಾರು ಜನರಿಗೆ ಶಾಲು ಹೊದಿಸಿ ಶಾಲು ದೀಕ್ಷೆ ಪ್ರಮಾಣ ವಚನ ನೀಡಲಾಯಿತು. ಈ ವೇಳೆ ಅಥಣಿ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಬಾಗಲಕೋಟ ಜಿಲ್ಲಾ ರೈತಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಹಾಗೂ ತಾಲ್ಲೂಕು ಉಪಾಧ್ಯಕ್ಷ ಪಾರಿಶ ಯಳಗೂಡ ಹಾಗೂ ಮಹಾದೇವ ಕುಚ್ಚನೂರ, ಜಗದೀಶ ಪಾರಶೆಟ್ಟಿ, ದುಂಡಪ್ಪ ತನ0ಗಿ, ಸಂಗಪ್ಪ ಕರಿಗಾರ, ನಿಂಗಪ್ಪ ಮಂಟೂರ ,ಚನಗೌಡ ಇಮಗೌಡರ, ಪಿಂಟು ಕಬಾಡಗಿ, ಮಹಾದೇವ ಹೊನಮಾನೆ, ಈರಪ್ಪ ಅಂಗಡಿ, ಕಿರಣ ಮಿಸಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.