ಕಾಗವಾಡ

ಬಂಜೆತನ ತಪಾಸಣೆ ಶಿಬಿರ: ಲಾಭ ಪಡೆದ ನೂರಾರು ದಂಪತಿಗಳು

ಬಂಜೆತನ ತಪಾಸಣೆ ಶಿಬಿರ: ಲಾಭ ಪಡೆದ ನೂರಾರು ದಂಪತಿಗಳು

ಶೇಡಬಾಳ 23: ಮಿರಜದ ಸಚಿನ ಹಾಸ್ಪಿಟಲ್ ಟೆಸ್ಟ್‌ ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಉಚಿತ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವು ರವಿವಾರ ದಿ. 21 ರಂದು ಯಶಸ್ವಿಯಾಗಿ ಜರುಗಿತು. 

ಡಾ. ಸಚಿನ ಸುಗಣ್ಣವರ ಹಾಗೂ ಡಾ. ನೇಹಾ ಸುಗಣ್ಣವರ ದೀಪ ಬೆಳಗುವದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಡಾ. ಸಚಿನ ಸುಗಣ್ಣವರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರು ಒಂದಿಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವುಗಳಲ್ಲಿ ಬಂಜೆತನ ಸಮಸ್ಯೆಯು ಒಂದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಮೂಡನಂಬಿಕೆಗೆ ಒಳಗಾಗಿ ಕಂಡ ಕಂಡ ದೇವರುಗಳಿಗೆ ಹರಕೆ ಹೊತ್ತು ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುವ ದೃಶ್ಯ ಸಾಮಾನ್ಯವಾಗಿದೆ. ಸ್ತ್ರೀ ರೋಗ ತಜ್ಞರು ಅವರ ಮನ ಪರಿವರ್ತಿಸಿ ಆಧುನಿಕ ಪದ್ದತಿಯ ಉಪಚಾರ ನೀಡಿದಾಗ ಬಂಜೆತನದಿಂದ ಕೊರಗಿನಿಂದ ಕೊರಗುತ್ತಿರುವ ದಂಪತಿಗಳಿಗೆ ಮಕ್ಕಳ ಭಾಗ್ಯ ಪಡೆಯಲು ಸಾಧ್ಯವೆಂದು ಹೇಳಿದರು. 

ಈ ಶಿಬಿರದಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ನೂರಾರು ದಂಪತಿಗಳು ಭಾಗವಹಿಸಿ ಶಿಬಿರದ ಲಾಭ ಪಡೆದುಕೊಂಡರು. 


ಸುದ್ದಿ ಓದಿ