ಡಿಪ್ಲೋಮಾ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ
ಧಾರವಾಡ 29: ಜನತಾ ಶಿಕ್ಷಣ ಸಮಿತಿಯ ಕೆಎಚ್ ಕಬ್ಬುರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ, ಪ್ರಥಮ ವರ್ಷ ಡಿಪ್ಲೋಮಾ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ಸಂಘ ಹಾಗೂ ಲೇಡೀಸ್ ಅಸೋಸಿಯೇಷನ್ ವಿದ್ಯಾರ್ಥಿಗಳ ಉದ್ಯೋಗಕ್ಕೆ ಸಂದರ್ಶನ ಏರಿ್ಡಸುವ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ವೆಲ್ದೊಮಾಕ್ ಲಿಮಿಟೆಡ್ ಧಾರವಾಡ ಪ್ಲಾಂಟ್ ಮುಖ್ಯಸ್ಥರಾದ ಪ್ರವೀಣ್. ಕೆ. ಬಿ ಹಾಗೂ ಎಚ್. ಆರ್. ಅಡ್ಮಿನ್ ಬಸವರಾಜ್ ಮತ್ತು ಪ್ರತಿಷ್ಠಿತ ಟಾಟಾ ಮೋಟರ್ಸ್ ಲಿಮಿಟೆಡ್ ಸೀನಿಯರ್ ಮ್ಯಾನೇಜರ್ ನಾಗರಾಜ್ ಹಟ್ಟಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರವೃತ್ತಿಯನ್ನು ಹೇಗೆ ನಿರ್ಮಿಸಬೇಕು ಮತ್ತು ಯಾವ ರೀತಿಯಲ್ಲಿ ಡಿಪ್ಲೋಮಾ ಶಿಕ್ಷಣದ ನಂತರ ವೃತ್ತಿಯಲ್ಲಿ ಹೇಗೆ ಮುಂದುವರೆಯಬೇಕು ಎಂಬುದನ್ನು ವಿಸ್ತಾರವಾಗಿ ಮತ್ತು ತಮ್ಮ ವೃತ್ತಿ ಜೀವನದಲ್ಲಿ ಕಂಪನಿಗಳಲ್ಲಿ ಹೇಗೆ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಬೇಕು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಮಲ್ಲಿಕಾರ್ಜುನಪ್ಪ. ಸಿ. ವಹಿಸಿದ್ದರು. ವೇದಿಕೆಯ ಮೇಲೆ ಗೀರೀಶ್ ಬೆಳಗಾವ್ಕರ್, ಜಿ ಬಿ ಜಗದ, ವೆಂಕಟೇಶ್ ಪೂಜಾರ, ನೀಲಕಂಠ ಬೆನಕಲ್ ಮತ್ತು ಅರ್ಚನಾ ಕುರಪಿ ಹಾಗೂ ಸುಜಾತ, ಈರ್ಪ ಪತ್ತಾರ್ ಹಾಗೂ ವಸಂತ ಐಹೊಳೆ, ಮಂಜುನಾಥ ಗಜಾಕೋಶ್ ಹಾಗೂ ಗಣೇಶ್ ಪಾಟೀಲ್ ಉಪಸ್ಥಿತರಿದ್ದರು. ವೀಣಾ ಹಂಪಿಹೊಳಿ ಕಾರ್ಯಕ್ರಮವನ್ನು ನಿರೂಪಿಸಿದರು.