ಭಾರತ ಅನೇಕ ಮಿಸೈಲ್ಗಳನ್ನು ತಯಾರಿಸುವಲ್ಲಿ ಯಶಸ್ವಿ: ಪಾಟೀಲ
ಇಂಡಿ18: ಭಾರತ ಅನೇಕ ಮಿಸೈಲ್ಗಳನ್ನು ತಯಾರಿಸುವಲ್ಲಿ ಯಶಸ್ವಿಯಾಯಿತು. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು ದೃಢ ವಿಶ್ವಾಸ ನಮ್ಮಿಲ್ಲಿಯೇ ಇರಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಅಟಲ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು. ಸ್ಯಾಮುವೆಲ್ ಪ್ಲಾಯಿಂಗ ಮಶೀನು ಕಂಡು ಹಿಡಿಯುವ ವಿಚಾರ ಮಾಡಿದರು. ಆದರೆ ದೃಢ ಸಂಕಲ್ಪ ಇರಲಿಲ್ಲ, ರೈಟ ಸಹೋದರರು ಮಾಡಿ ತೋರಿಸಿದರು, ಸೋಜರ್ ಲೇನಸ್ಟರ 4 ನಿಮಿಷ್ಯದಲ್ಲಿ ಒಂದು ಕೀ.ಮಿ ಓಡುವ ದೃಢ ಸಂಕಲ್ಪ ಮಾಡಿ ಅದರಲ್ಲಿ ಯಶಸ್ವಿಯಾದರು. ಈಗ 60 ಸಾವಿರಕ್ಕೂ ಹೆಚ್ಚು ಯುವಕರು ಓಡಿದ್ದಾರೆ. ಅವರಿಗೆ ಸೋಜರರ ದೃಢ ಸಂಕಲ್ಪ ಮಾದರಿಯಾಯಿತು. ಅಬ್ದುಲ ಕಲಾಮರು ಧನಾತ್ಮಕ ವಿಚಾರಗಳಿಂದ ಯಶಸ್ಸು ಸಾಧಿಸಿದ್ದಾರೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಪ್ರಾಚಾರ್ಯ ಪರವೀನ ಜಮಾದಾರ, ಸವಿತಾ ಕೋಳುರ, ಪ್ರಮೋದ ಮಾತನಾಡಿದರು.
ಸ್ಕಾಟ್ಸ ಮತ್ತು ಗೈಡ್ಸನಲ್ಲಿ ರಾಜ್ಯ ಪುರಸ್ಕಾರ ಪಡೆದ ಸೃಷ್ಠಿ ಶಿವೂರ, ಅನ್ನಪೂರ್ಣ ಪಾಟೀಲ, ಪ್ರೀತಿ ತೋರಾಟ, ಶಿವಶಂಕರ ಗಳೇದ, ಸಂದೇಶ ಪವಾರ, ಮೇಘರಾಜ ಡಾಂಗಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಧನ್ಯಕುಮಾರ ಶಹಾ, ಕಲ್ಪನಾ ಶಹಾ, ರಾಣಿ ಚೆನ್ನಮ್ಮ ವಿವಿ ಸಿನೆಟ ಸದಸ್ಯ ಸಂದೀಪ ಬೆಳಗಲಿ, ರಮೇಶ ಅವದಿ, ಸುನೀಲ ಕುಲಕರ್ಣಿ,ಸೊಹಲ್ ಅಹಮದ, ವೀರಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅನಂತ ಜೈನ ಸೇರಿದಂತೆ ಅನೇಕರು ಇದ್ದರು.