ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ: ಪಾಟೀಲ
ಇಂಡಿ: ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅದರಲ್ಲೂ ಕರ್ನಾಟಕ ಪಾಲು ಅಪಾರವಾಗಿದೆ ಎಂದು ಯೋಗಗುರು ಬಿ.ಎಸ್.ಪಾಟೀಲ ಹೇಳಿದರು.
ಗುರವಾರ ಪಟ್ಟಣದ ಸಿದ್ದಾರೂಢ ಮಠದಲ್ಲಿ ಸಿದ್ಧಾರೂಢ ಜಾತ್ರೆಯ ನಿಮಿತ್ಯ ಹಮ್ಮಿಕೊಂಡ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಡಿ ವಿಶ್ವ ಕೊರೊನಾದಿಂದ ತತ್ತರಿಸುತ್ತಿರುವಾಗ ಕೊರೊನಾಗೆ ಪ್ರಾಥಮಿಕ ಮದ್ದಾಗಿ ಭಾರತೀಯ ವೈದ್ಯ ಪದ್ಧತಿ ಮತ್ತು ಯೋಗ ತನ್ನದೆ ಆದ ದೊಡ್ಡ ಪಾತ್ರವಹಿಸುತ್ತಿವೆ ಎಂದರು.
ಡಾ. ಸ್ವರೂಪಾನಂದ ಶ್ರೀಗಳು, ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಲಾಯನ್ಸ ಸಂಸ್ಥೆಯ ಎಮ್.ಎಸ್.ಬಿರಾದಾರ ಯೋಗ ಕುರಿತು ಮಾತನಾಡಿದರು.
ಅಶೋಕ ಜಂಬಗಿ, ಕೆ.ಜಿ.ಮೇತ್ರಿ, ಸನತ.ಕೆ, ಸಿ.ಟಿ.ತಳವಾರ, ಭೂಮಿಕಾ ಪಾಟೀಲ, ಪೂಜಾ ಪಾಸೋಡಿ ಮತ್ತಿತರಿದ್ದರು.