ರಾಣೆಬೆನ್ನೂರ

ನೀಟ್ ಪರೀಕ್ಷೆ ಅವ್ಯವಹಾರ ತನಿಖೆಗಾಗಿ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ

ನೀಟ್ ಪರೀಕ್ಷೆ ಅವ್ಯವಹಾರ ತನಿಖೆಗಾಗಿ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ

ರಾಣೇಬೆನ್ನೂರು: ಜು 10ಎನ್‌. ಟಿ. ಎ ರದ್ದು ಹಾಗೂ ನೀಟ್ ಪರೀಕ್ಷೆಯ ಅವ್ಯವಹಾರದ ಕುರಿತು ಪಾರದರ್ಶಕತೆ ನಿಷ್ಪಕ್ಷಪಾತದಿಂದ ತನಿಖೆಗಾಗಿ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಮುಂದಾಗಬೇಕೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು, ಮಂಗಳವಾರ ನಗರದಲ್ಲಿ ಬಾರಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.      

ಇಲ್ಲಿನ ಬಸ್ಟ್ಯಾಂಡ್ ಬಳಿ ಮುಂಜಾನೆಯಿಂದಲೇ, ನಗರ ಮತ್ತು ತಾಲೂಕಿನ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿ ಮುಖ್ಯ ನ್ಯಾಯಾಧೀಶರ ನೇತ್ರತ್ವದ ಸಮಿತಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.     

ಭಾರತ್ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು, ಆಯೋಜಿಸಿದ್ದ ಈ ಪ್ರತಿಭಟನೆಗೆ, ಧಾವಿಸಿ  ಬಂದ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ, ಪ್ರಕಾಶ್ ಕೋಳಿವಾಡ  ಅವರು, ಹೋರಾಟಕ್ಕೆ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿ, ಧರಣಿ ನಡೆಸಿದ ವಿದ್ಯಾರ್ಥಿಗಳ ಜೊತೆಗೆ, ಕುಳಿತು ಸಾತ್ ನೀಡಿದರು.   

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಘಟಕದ ಅಧ್ಯಕ್ಷ ಅರುಣ ಕುಮಾರ್ ಹೆಚ್, ಅವರು ಕಳೆದ ತಿಂಗಳು ಜೂನ್ 4ರಂದು ನೀಟ್‌-  ಯುಜಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ನಂತರ ಎನ್ಟಿಏ ಪರೀಕ್ಷೆಯ ಫಲಿತಾಂಶದಲ್ಲಿನ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರ ದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ಜ ಬರುತ್ತಿವೆ. ಎಂದರು. ಎನ್‌ಟಿಎ ಜಾರಿಗೆ ಬಂದಾಗಿನಿಂದ ಪ್ರಮುಖ ಪರೀಕ್ಷೆಗಳ ಗಂಭೀರ ಅವ್ಯವಹಾರಗಳ ಮುಂದುವರಿಕೆಯಾಗಿ ಸಂಭವಿಸಿದ ಪರಿಣಾಮವಾಗಿ ಅಂತಹ ಎನ್ಟಿಎ ಸಂಸ್ಥೆಯು ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು  ಅನರ್ಹವಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಲವಾಗಿ ಆರೋಪಿಸಿದರು. ಎಂಬಿಬಿಎಸ್ ಮತ್ತು ಬಿಡಿಎಸ್ ಪದವಿ ಹಂತದ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು ಅಂಕಗಳು 720 ಸರಿಯಾದ ಪ್ರತಿ ಉತ್ತರಕ್ಕೆ ಕೇವಲ 4 ಅಂಕಗಳನ್ನು ನೀಡಲಾಗುತ್ತಿದೆ. ಆದರೆ ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಉತ್ತರಿಸದ ಪ್ರಶ್ನೆಗಳನ್ನು ಗುರುತಿಸಿಲ್ಲ. ಆ ಸಂದರ್ಭದಲ್ಲಿ ಗಣಿತದ  ಪ್ರಕಾರ 719 ಮತ್ತು 718 ನಂತಹ ಅಂಕಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸಾಧ್ಯಂತವಾಗಿ ವಿವರಿಸಿ ಮಾತನಾಡಿದರು. ಪ್ರತಿಭಟನೆಯ ಮುಂಚೂಣಿಯಲ್ಲಿ, ಸಂಘಟನೆಯ ಉಪಾಧ್ಯಕ್ಷ ರಾಘವೇಂದ್ರ ಎಸ್ ಎಲ್, ಭರತರೆಡ್ಡಿ, ಬೀರ​‍್ಪ ಲಮಾಣಿ, ಇರ್ಫಾನ್ ದಿಡಗೊರ್, ನಾಗರಾಜ್ ಮರಿಯಮ್ಮನವರ್, ಬೀರೇಶ್ ಬುಳ್ಳಪ್ಪನವರ್, ಆನಂದ್ ಹುಲ ಬನ್ನಿ, ರಾಜು ಮಾದಮ್ಮ ನವರ, ಸೇರಿದಂತೆ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ