ಇಂಡಿ ತಾಲೂಕು ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಪುಣ್ಯ ಭೂಮಿ: ಸಂಸದ ರಮೇಶ್ ಜಿಗಜಿಣಗಿ
ಇಂಡಿ 18: ನಾನು ರಾಜಕಿಯವಾಗಿ ಬೆಳೆಯಲು ಇಂಡಿ ತಾಲೂಕಿನ ಜನರ ಕೊಡಿಗೆ ಅಪಾರವಾದದ್ದು ಎಂದು ವಿಜಯಪೂರ ಲೋಕಸಭಾ ಸದಸ್ಯರಾದ ಶ್ರೀ ರಮೇಶ ಜಿಗಜಿಣಗಿ ಹೇಳಿದರು. ಬುಧುವಾರ ಇಂಡಿ ನಗರದ ಶಾಂತೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿ ಮನುಷ್ಯ, ನನ್ನನು ಈ ತಾಲ್ಲೂಕಿನ ಜನರು ಮೊದಲು ಟಿಡಿಪಿ ಸದಸ್ಯರನ್ನಾಗಿ ಮಾಡಿ ನಂತರ ಅಂದಿನ ಬಳ್ಳೊಳ್ಳಿ ಮೀಸಲು ಮತಕ್ಷದಿಂದ ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಇಂಡಿ ತಾಲ್ಲೂಕಿನ ಮತದಾರರು ಹಾಗೂ ನನ್ನ ರಾಜಕೀಯ ಗುರುಗಳಾದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನ ಪ್ರಾಮಾಣಿಕತೆಯನ್ನು ಗುರುತಿಸಿ ನನಗೆ ಅಂದು ಗೃಹಮಂತ್ರಿ ಆದೆ ನಂತರ ಕಂದಾಯ, ಸಮಾಜ ಕಲ್ಯಾಣ, ಅಬಕಾರಿ ಸಚಿವನಾಗಿದ್ದು ನಾನು ಎಂದು ಮರೆಯಲಾರೆ.
ನಂತರ ವಿಜಯಪೂರ ಜಿಲ್ಲೆಯನ್ನು ಬಿಟ್ಟು ಚಿಕ್ಕೋಡಿಗೆ ಹೋಗಿ ಅಲ್ಲಿ ಕೂಡಾ ಮೂರು ಬಾರಿ ಸಂಸದನಾದೆ. ನಂತರ ನಾನು ತವರು ಜಿಲ್ಲೆಗೆ ವಾಪಸ್ ಬಂದು ವಿಜಯಪೂರ ಮೀಸಲು ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದನಾದೆ, ಒಂದು ಬಾರಿ ಕೇಂದ್ರ ಮಂತ್ರಿಯಾದೆ ಹಾಗೂ ನಾಲ್ಕು ಬಾರಿ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರ ಬಾರಿ ಲೀಡ್ ನೀಡುತ್ತಾ ಬಂದಿದೆ. ಈ ಬಾರಿ ಕೂಡಾ ಜಿಲ್ಲೆಯಲ್ಲೆ ಅತಿ ಹೆಚ್ಚು ಇಪ್ಪತ್ತು ಏಳು ಸಾವಿರ ಮತುಗಳು ಲೀಡ್ ಇಂಡಿ ಕ್ಷೇತ್ರದಿಂದ ಬಂದಿದೆ. ನಾನು ಇಂಡಿ ತಾಲೂಕಿನ ಜನರ ರೋಣ ಎಂದು ಮರೆಯಲಾರೆ. ಹಾಗೂ ಕಾರ್ಯಕರ್ತೆಯರ ಜೊತೆ ಸದಾ ಸಂಪರ್ಕ ಇರುವುದಾಗಿ ಹೇಳಿದರು.
ಇಂಡಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಕ್ಕಲಕೋಟ -ಇಂಡಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಮಾಜಿ ವಿಧಾನಪರಿಷತ್ ಸದಸ್ಯರಾದ ಅರುಣ ಶಹಾಪುರ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ, ಬಿಜೆಪಿ ಇಂಡಿ ತಾಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶಂಕರಗೌಡ ಪಾಟೀಲ (ಡೋಮನಾಳ), ಶೀಲವಂತ ಉಮರಾಣಿ, ಮರೆಪ್ಪ ಗಿರಣಿವಡ್ಡರ, ಅಣ್ಣಪ್ಪ ಖೈನೂರ, ಅಶೋಕಗೌಡ ಪಾಟೀಲ, ಶ್ರೀಕಾಂತ ದೇವರ, ಶ್ರೀಶೈಲಗೌಡ ಪಾಟೀಲ, ಚನ್ನುಗೌಡ ಪಾಟೀಲ, ಸುನಂದಾ ವಾಲಿಕಾರ ದೇವಿಂದ್ರ ಕುಂಬಾರ, ದತ್ತಾ ಬಂಡೆನವರ, ಶಿವು ಬಗಲಿ, ಎಸ್ ಎಸ್ ಮಜ್ಜಗಿ, ಅಯ್ಯೂಬ್ ನಾಟಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.