ರಾಣೆಬೆನ್ನೂರ

ಆಕರ್ಷಕ ಪಥ ಸಂಚಲನ: ಜಗಜ್ಯೋತಿ ಪ್ರೌಢಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

ಆಕರ್ಷಕ ಪಥ ಸಂಚಲನ: ಜಗಜ್ಯೋತಿ ಪ್ರೌಢಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

ರಾಣೇಬೆನ್ನೂರು,22:  ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು, ಇತ್ತೀಚೆಗೆ 78ನೇ ಭಾರತ ಸ್ವಾತಂತ್ರ್ಯೋತ್ಸವ  ದಿನಾಚರಣೆ ಸಮಾರಂಭವು ನಡೆಯಿತು. 

 ಸ್ವಾತಂತ್ರ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ, ಕೊಟ್ಟೂರೇಶ್ವರ ನಗರದ ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲದಲ್ಲಿ ಭಾಗವಹಿಸಿ, ತಾಲೂಕ ಆಡಳಿತ ಮತ್ತು ಸಾರ್ವಜನಿಕರ  ಮೆಚ್ಚುಗೆಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ , ಭಾರತ ಸೇವಾದಳದ ಮಕ್ಕಳು ತಮ್ಮ ಪ್ರತಿಭೆ ಮೆರೆದು ಪಾರಿತೋಷಕ  ಬಹುಮಾನ ಪಡೆದ ಮಕ್ಕಳಿಗೆ,ತಾಲೂಕ ಆಡಳಿತ, ಪ್ರೌಢ ಶಾಲೆಯ ಗುರು ಬಳಗಕ್ಕೆ ಮಧು ಗ್ರಾಮೀಣ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗಿರಿಜಮ್ಮ ಈಶ್ವರ​‍್ಪ ಚವ್ಹಾಣ, ಕಾರ್ಯದರ್ಶಿ ಅನಿಲ ಕುಮಾರ ಈ. ಚವ್ಹಾಣ, ಮುಖ್ಯೋಪಾಧ್ಯಾಯ ಜಿ.ಎಸ್‌. ಸಾರಂಗಮಠ, ದೈಹಿಕ ಶಿಕ್ಷಕ ಎಂ. ಕೆ. ದೊಡ್ಡಮನಿ ಹಾಗೂ ಶಿಕ್ಷಕರು ಹಾರ್ದಿಕವಾಗಿ ಶುಭ ಹಾರೈಸಿದ್ದಾರೆ 


ಸುದ್ದಿ ಓದಿ