ಧಾರವಾಡ - ಹುಬ್ಬಳ್ಳಿ

ಭಾರತ ಮಾತೆಗೆ ಸ್ವಾತಂತ್ರ್ಯದಾರತಿ ಕಾರ್ಯಕ್ರಮ

ಭಾರತ ಮಾತೆಗೆ ಸ್ವಾತಂತ್ರ್ಯದಾರತಿ ಕಾರ್ಯಕ್ರಮ

ಧಾರವಾಡ 02:  ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ನೀಡಿದ ಮಹನೀಯರನ್ನು ನೆನೆಯುವುದು  ಮತ್ತು ಅವರ ಬಲಿದಾನದ ಇತಿಹಾಸದ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯ ಅಧಿಕಾರಿ ಮಂಜುನಾಥ ಅಡವೇರ ಅಭಿಪ್ರಾಯ ಪಟ್ಟರು. 

ದಿ. 01ರಂದು ನಗರದ ಬೇಂದ್ರೆ ಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಹೊಂಬೆಳಕು ಪ್ರತಿಷ್ಠಾನ ಹಾಗೂ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಶ್ರಾವಣೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಅಂಗವಾಗಿ ಏರಿ​‍್ಡಸಿದ್ದ ಭಾರತ ಮಾತೆಗೆ ಸ್ವಾತಂತ್ರ್ಯದಾರತಿ” ಕಾರ್ಯಕ್ರಮ ಉದ್ಘಾಟಿಸಿದ ಮಂಜುನಾಥ ಅಡವೇರ ಅವರು ಮುಂದುವರೆದು ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥಗೊಳಿಸದೇ, ಉನ್ನತ ಗುರಿಯನ್ನಿಟ್ಟುಕೊಂಡು ಅಧ್ಯಯನದಲ್ಲಿ ತೊಡಗಿ, ಗುರಿ ಸಾಧನೆಯೆಡೆಗೆ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನಾಡಿದರು.   

ಶ್ರೀ ಸಾಯಿ ಪಿ.ಯು.ಕಾಲೇಜಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವೀಣಾ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕ್ರಾಂತಿಕಾರಿಗಳ, ಮಹಾನ್ ಹೋರಾಟಗಾರರ, ದೇಶ ಸೇವೆಯನ್ನು, ಅವರ ಆದರ್ಶಗಳನ್ನು ಮಕ್ಕಳಿಗೆ ಪುನಃರ್ಹಮನನ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಪ್ರತಿವರ್ಷ”ಭಾರತ ಮಾತೆಗೆ ಸ್ವಾತಂತ್ರ್ಯದಾರತಿ” ಕಾರ್ಯಕ್ರಮ ಏರಿ​‍್ಡಸುತ್ತ ಬರಲಾಗಿದೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀನಿವಾಸ ಸವಣೂರ ಮಾತನಾಡುತ್ತ ದೇಶಭಕ್ತಿಗೀತೆಗಳನ್ನು ಕೇವಲ ಬಹುಮಾನಕ್ಕಾಗಿ ಹಾಡುವುದಲ್ಲ, ಹಾಡಿದಾಗ ಶ್ರೋತೃಗಳಿಗೆ, ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಅಭಿಮಾನ ಮೂಡುವಂತಿರಬೇಕು. ಲತಾ ಮಂಗೇಶ್ಕರ ಅವರು ಹಾಡಿದ ‘ಏ ಮೇರೆ ವತನಕೆ ಲೋಗೋ ದಂತಹ ಹಾಡುಗಳು ಪ್ರಧಾನಿ ಆದಿಯಾಗಿ ನಮ್ಮೆಲ್ಲರ ಕಣ್ಣಂಚಿನಲ್ಲಿ ನೀರು ಬರುತ್ತವೆ.  ಇಂಥ ದೇಶಭಕ್ತಿಯು ನಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನದ ಭಾವನೆಯನ್ನು ಬಿತ್ತುವ ಇಂತಹ ಸ್ಪರ್ಧೆಗಳನ್ನು ಪ್ರತಿ ವರ್ಷ ಏರಿ​‍್ಡಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು. 

ಜಾಯ್ ಪ್ರಕಾಶ ಭಾಸ್ಕರ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ನಮ್ಮ ಭಾರತ ದೇಶದ ಭೂಮಿಯ ಲವಣಾಂಶಗಳು ಸಸ್ಯರಾಶಿಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿರುವುದರಿಂದ ನಮ್ಮ ಭಾರತ ಭೂಮಿಗೆ ಪ್ರತಿಯೊಬ್ಬರೂ ಋಣಿಯಾಗುವ ಮೂಲಕ ದೇಶಭಕ್ತಿಯನ್ನು ತೋರಬೇಕು ಎಂದರು.   

ಅಧ್ಯಕ್ಷತೆ ವಹಿಸಿದ್ದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಮಾತನಾಡುತ್ತ ಬೇಂದ್ರೆಯವರ ನೆಲದಲ್ಲಿ ಈ ಕಾರ್ಯಕ್ರಮ ಏರಿ​‍್ಡಸಿರುವುದು ಓಚಿತ್ಯಪೂರ್ಣವಾದುದು, ಬೇಂದ್ರೆಯವರು ಕೂಡ ‘ನರಬಲಿ’ ಎಂಬ ಕವನ ಬರೆದಿದ್ದಕ್ಕೆ ಬ್ರಿಟೀಷ್‌ರಿಂದ ರಾಜದ್ರೋಹದ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ಅನುಭವಿಸಿದರು ಎಂದರು. ವೇದಿಕೆಯಲ್ಲಿ ಬೇಂದ್ರೆ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಡಾ.ಎಸ್‌.ಬಿ.ಗಾಡಿ ಉಪಸ್ಥಿತರಿದ್ದರು. 

ಮೌನೇಶ ಬಡಿಗೇರ ನಿರೂಪಿಸಿದರು. ಸುಷ್ಮಿತಾ ಪ್ರಾರ್ಥಿಸಿದರು, ಪ್ರಾಚಾರ್ಯರು ನಾಗರಾಜ ಶಿರೂರ ವಂದಿಸಿದರು.   

ನಂತರ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ನೃತ್ಯ ರೂಪಕ ಹಾಗೂ ವೇಷಭೂಷಣ ಸ್ಪರ್ಧೆಗಳು ಜರುಗಿದವು.   ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ-ರಾಜೀವ ಗಾಂಧಿ ಸಿ.ಬಿ.ಎಸ್‌.ಇ ಶಾಲೆ, ದ್ವಿತೀಯ-ಹಂಚಿನಮನಿ ಪ್ರೌಢ ಶಾಲೆ, ತೃತೀಯ-ಕೆ.ಇ.ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆ, ಸಮಾಧಾನಕರ-ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆ, ನೃತ್ಯ ರೂಪಕ ಸ್ಪರ್ಧೆಯಲ್ಲಿ ಪ್ರಥಮ- ಹಂಚಿನಮನಿ ಶಾಲೆ, ದ್ವಿತೀಯ-ರಾಜೀವ ಗಾಂಧಿ ಸಿ.ಬಿ.ಎಸ್‌.ಇ ಶಾಲೆ, ತೃತೀಯ-ರಾಜೀವ ಗಾಂಧಿ ಸ್ಟೇಟ್ ಶಾಲೆ, ಸಮಾಧಾನಕರ-ಆರ್‌.ಎಲ್‌.ಎಸ್‌.ಶಾಲೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಪ್ರಥಮ-ಫರ್ನಾಝ ಜಮಖಂಡಿ-ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಪಾವನಿ ಜೋಶಿ, ಕೆ.ಇ.ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆ, ತೃತೀಯ-ಸಮೃದ್ಧಿ ಬಿ. ಪ್ರಸೆಂಟೇಶನ್ ಶಾಲೆ, ಸಮಾಧಾನಕರ- ರಮ್ಯಾ ಪೂಜಾರ, ಶಾಂತೇಶ್ವರ ಪ್ರೌಢಶಾಲೆ, ಅಮ್ಮಿನಭಾವಿ, ಕಾರ್ತಿಕ ಪೂಜಾರ, ರಾಜೀವ ಗಾಂಧಿ ಸಿ.ಬಿ.ಎಸ್‌.ಇ ಶಾಲೆ ಇವರು ಬಹುಮಾನಗಳನ್ನು ಪಡೆದರು.  ನಿರ್ಣಾಯಕರಾಗಿ ಆಶಾ ಜೋಶಿ ಮತ್ತು ಅನನ್ಯಾ ದತ್ತವಾಡ ಭಾಗವಹಿಸಿದ್ದರು. 


ಸುದ್ದಿ ಓದಿ