ಇಂಡಿ

ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಬೈಕ್ ರ್ಯಾಲಿ

ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಬೈಕ್ ರ್ಯಾಲಿ

ಇಂಡಿ12:  ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಇಂಡಿ ಮಂಡಲ ವತಿಯಿಂದ  75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ತಿರಂಗಾ ಬೈಕ್ ರಾ​‍್ಯಲಿ ಶುಕ್ರವಾರ ಹಮ್ಮಿಕೊಳ್ಳಲಾಯಿತು. 

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಿಂದ ಆರಂಭವಾದ ಬೈಕ್‌ರಾ​‍್ಯಲಿ ಸ್ಟೇಶನ್ ರಸ್ತೆ, ಅಗರಖೇಡ ರಸ್ತೆ, ಸಿಂದಗಿ ರಸ್ತೆ ವಿಜಯಪೂರ ರಸ್ತೆ ತಾಲೂಕಿನ ತಡವಲಗಾ,  ರೂಗಿ, ಗಣವಲಗಾ, ಸಾಲೋಟಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೈಕ್ ರಾ​‍್ಯಲಿ ಮಾಡಲಾಯಿತು 

ಒಟ್ಟು 500 ಬೈಕ್‌ಗಳಿಗೆ ತಿರಂಗಾ ಧ್ವಜ ಕಟ್ಟಿಕೊಂಡು ಸರಿಸುಮಾರು 70 ಕಿ.ಮೀವರೆಗೆ ಕಾರ್ಯಕರ್ತರು ಬೈಕ್ ರಾ​‍್ಯಲಿ ನಡೆಸಿ, ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. 

ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಇಂಡಿ ತಾಲೂಕಾ ಯುವಮೋರ್ಚಾ ಅಧ್ಯಕ್ಷ ಅನೀಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಶಿವಯೋಗೆಪ್ಪ ನೇದಲಗಿ, ಶೀಲವಂತ ಉಮರಾಣಿ, ಅನೀಲ ಜಮಾದಾರ, ರಾಚು ಬಡಿಗೇರ, ದೇವೇಂದ್ರ ಕುಂಬಾರ, ರಾಘು ಕಾಪಸೆ, ಅನಸುಯಾ ಮದರಿ, ಮಲ್ಲು ವಾಲೀಕಾರ, ವಿಜಯಕುಮಾರ ಮೂರಮನ್, ವಿಜು ರಾಠೋಡ, ಪ್ರವೀಣ ಮಠ, ತಿಪ್ಪಣ್ಣಾ ಉಟಗಿ, ಸೈಪನ ಪವಾರ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳು ಬೈಕ್ ರಾ​‍್ಯಲಿಯಲ್ಲಿದ್ದರು.   


ಸುದ್ದಿ ಓದಿ