ಕಾಗವಾಡ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಸಂಸ್ಥೆಯ ಪ್ರಗತಿಯ ದಿಕ್ಸೂಚಿ: ಸಂಗೋರಾವ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಸಂಸ್ಥೆಯ ಪ್ರಗತಿಯ ದಿಕ್ಸೂಚಿ: ಸಂಗೋರಾವ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಸಂಸ್ಥೆಯ ಪ್ರಗತಿಯ ದಿಕ್ಸೂಚಿ: ಸಂಗೋರಾವ  

ಶೇಡಬಾಳ 18: ನಮ್ಮ ಸಂಸ್ಥೆಯ ವಿದ್ಯಾಲಯಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ನಮ್ಮ ಸಂಸ್ಥೆಯ ಪ್ರಗತಿಯ ದಿಕ್ಸೂಚಿಯಾಗಿದೆ ಎಂದು ಶೇಡಬಾಳ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಉಪಾಧ್ಯಕ್ಷ ಆರ್‌.ವ್ಹಿ. ಸಂಗೋರಾವ ಹೇಳಿದರು. 

ಅವರು ಶನಿವಾರ ದಿ. 17ರಂದು ಶೇಡಬಾಳ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸಭಾಂಗಣದಲ್ಲಿ ಜುರುಗಿದ 2021-22 ನೇ ಸಾಲಿನ ವಾರ್ಷಿಕ ಸರ್ವ ಸಾಧರಣ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತ, ನಮ್ಮ ಸಂಸ್ಥೆಯ ಅಡಿಯಲ್ಲಿ ಶೇಡಬಾಳ ಸನ್ಮತಿ ಪ್ರೌಢ ವಿದ್ಯಾಲಯ, ಪಿಯು ಕಾಲೇಜ್, ಪದವಿ ಕಾಲೇಜ, ಉಗಾರ ಬುದ್ರಕ್ ಪದ್ಮಾವತಿ ವಿದ್ಯಾಲಯ, ಬೆಳಗಾವಿಯಲ್ಲಿರುವ ಕಾಲೇಜುಗಳು ಮತ್ತು ಅಂಗ ಸಂಸ್ಥೆಗಳು ಪ್ರಗತಿ ಪಥದತ್ತ ಸಾಗುತ್ತಿರುವುದು ಹೆಮ್ಮಯ ವಿಷಯವಾಗಿದೆ ಎಂದು ಹೇಳಿದರು. ಇದೇ ವೇಳೆ ಸಂಸ್ಥೆಯ ಪ್ರಗತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಕಳೆದ ವರ್ಷ ನಮ್ಮನ್ನಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ವಾರ್ಷಿಕ ವರದಿಯನ್ನು ಓದಿದರು. ಈ ಸಮಯದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಆರ್‌.ವ್ಹಿ. ಸಂಗೋರಾವ, ಆಡಳಿತ ಮಂಡಳಿಯ ಸದಸ್ಯರಾದ ವಿನೋದ ಬರಗಾಲೆ, ವಿನೋದ ಎಸ್‌. ಪಾಟೀಲ, ಡಾ. ಅಶೋಕ ಪಾಟೀಲ, ಭರತ ಕುಸನಾಳೆ, ಎಸ್‌.ಎನ್‌. ಕುಸನಾಳೆ, ಅಣ್ಣಾಸಾಬ ಪಾಟೀಲ, ಮಹಾವೀರ ಪಾಟೀಲ, ಅಜೀತ ನಾಂದ್ರೆ, ಸನ್ಮತಿ ಎಸ್‌. ಪಾಟೀಲ, ಸುಭಾಷ ಕುಸನಾಳೆ, ಅಕ್ಕಾತಾಯಿ ಮುಜಾವರ, ಡಾ. ಭರತ ಅಳಸಂದಿ, ಎಂ.ಎನ್‌. ಕಾಳೆನಟ್ಟಿ, ಕೆ.ಟಿ. ಪಾಟೀಲ, ಸತೀಶ ಪಾಟೀಲ, ಬಾಹುಬಲಿ ಬನಜವಾಡ, ಎಸ್‌.ಪಿ. ಕಾಂಬಳೆ, ಎ.ಕೆ. ಪಾಟೀಲ, ಶ್ರೀಕಾಂತ ಮಾಲಗಾಂವೆ, ಕುಮಾರ ಮಾಲಗಾಂವೆ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ