ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ಶೇ. 44 ವೇತನ ಹೆಚ್ಚಳ
ಶೇಡಬಾಳ 19: ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಬೀರೇಶ್ವರ್ ಕೋ-ಆರ್ ಸೊಸೈಟಿ ಶಾಖೆಗಳು ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ತಲೆಯೆತ್ತಿ ನಿಂತಿದೆ. ಸಾವಿರಾರು ಕುಟುಂಬಗಳಿಗೆ ಆಸರೆ ಆಗಿದೆ. ಸೊಸೈಟಿಯ ಸಿಬ್ಬಂದಿಗೆ ಶೇಕಡಾ 44 ರಷ್ಟು ವೇತನ ಹೆಚ್ಚಳ ಮಾಡಿ ಸಿಬ್ಬಂದಿ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಎಂದು ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಮಂಗಸೂಳಿ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ಮಲ್ಲಪ್ಪಾ ಪೂಜಾರಿ ಹೇಳಿದರು.
ಅವರು ಶನಿವಾರ ದಿ. 18 ರಂದು ಮಂಗಸೂಳಿ ಗ್ರಾಮದ ಬೀರೇಶ್ವರ ಸೊಸೈಟಿ ಶಾಖೆಯ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಮತ್ತು ಪ್ರವಾಹ ಬಂದಂಥ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಬಡವರಿಗೆ ಸಾಕಷ್ಟು ಸಹಾಯ ಮಾಡಿ ಮತ್ತು ಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಸೊಸೈಟಿ ಸದಸ್ಯರಾದ ಸಂಜಯ ಶೆಟ್ಟಿ, ಮಾರುತಿ ಖೋತ, ಮಹಾದೇವ ಮಾಳಿ, ಶಾಖಾ ವ್ಯವಸ್ಥಾಪಕ ಸಂಜೀವ ಪಲ್ಲಕ್ಕಿ, ಹಿರಿಯ ಮುಖಂಡರಾದ ರವೀಂದ್ರ ಪೂಜಾರಿ ಸೇರಿದಂತೆ ಅನೇಕರು ಇದ್ದರು.