ಕಾಗವಾಡ

ರಾಜ್ಯ ಸರ್ಕಾರಿ ನೌಕರರಿಗೆ ಮುಂಗಡ ಹಣ ಹೆಚ್ಚಳ ಸ್ವಾಗತಾರ್ಹ

ರಾಜ್ಯ ಸರ್ಕಾರಿ ನೌಕರರಿಗೆ ಮುಂಗಡ ಹಣ ಹೆಚ್ಚಳ ಸ್ವಾಗತಾರ್ಹ

ಕಾಗವಾಡ 17: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಶೇ.150ರಷ್ಟು ಹಬ್ಬದ ಮುಂಗಡವನ್ನು ಹೆಚ್ಚಿಸಿ 10 ಸಾವಿರದಿಂದ 25 ಸಾವಿರ ರೂ. ಹೆಚ್ಚಿಸಿ ಆದೇಶ ಮಾಡಿರುವುದು ಸ್ವಾಗತಾರ್ಹ ಎಂದು ಕಾಗವಾಡ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಗೌಡಪ್ಪ ಸಡ್ಡಿ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. 

ಅವರು ಪತ್ರಿಕಾ ಪ್ರಕಟನೆಯಲ್ಲಿ ಈ ವಿಷಯ ತಿಳಿಸಿದ ಅವರು ಸಕಾರದ ಈ ಆದೇಶದಿಂದ ಸಿ, ಮತ್ತು ಡಿ ವರ್ಗದ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಈ ಮೊದಲು ವೇತನ ಪರಿಷ್ಕೃರಣೆ ಸಂದರ್ಭದಲ್ಲಿ ಮಾತ್ರ ಮುಂಗಡ ಹಣ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಈಗ ನಮ್ಮ ಸಂಘದ ರಾಜ್ಯಾಧ್ಯಕ್ಷರ ವಿಶೇಷ ಪ್ರಯತ್ನದಿಂದ ಎರಡು ವರ್ಷಗಳಲ್ಲಿ ಎರಡು ಬಾರಿ ಹೆಚ್ಚಳವಾಗಿದೆ ಎಂದರು. 

 ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರುಗಳಿಗೆ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಅವರ ಕ್ರಮ ಸಂತಸ ತಂದಿದೆ ಎಂದರು. 


ಸುದ್ದಿ ಓದಿ