ರಾಣೆಬೆನ್ನೂರ

ಅಗ್ನಿ ದುರಂತದ ಘಟನೆ: ಓರ್ವ ಸಾವು

ಅಗ್ನಿ ದುರಂತದ ಘಟನೆ: ಓರ್ವ ಸಾವು

ಲೋಕದರ್ಶನ ವರದಿ

ರಾಣಿಬೆನ್ನೂರ 06:  ನಗರದಲ್ಲಿ ಮಂಗಳವಾರ ನಡೆದ ಬರ್ತಡೇ ಸ್ಪಾರ್ಕ್  ಕ್ಯಾಂಡಲ್ ತಯಾರಿಕೆ ಘಟಕದ ಅಗ್ನಿ ದುರಂತದ ಘಟನೆಯಲ್ಲಿ ಗಂಭೀರ ಗಾಯಗೊಂಡು ಡಾವಣಗೇರಿಯ ಸಾರ್ವಜನಿಕ ಆಸ್ಪತ್ರೆಗೆ ಸೇರಿದ್ದ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ಶಂಭುಲಿಂಗನಗೌಡ ದ್ಯಾವನಗೌಡ್ರ (33) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಒಟ್ಟು 7 ಜನ ಗಾಯಾಳುಗಳಲ್ಲಿ ಇರ್ವರು  ಬೆಂಗಳೂರಿನ ಹಾಗೂ ನಾಲ್ವರು ಡಾವಣಗೇರಿ ಆಸ್ಪತ್ರೆಯಲ್ಲಿ  ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ 

ಸುದ್ದಿ ಓದಿ