ರಾಣೆಬೆನ್ನೂರ

ನಿರಂತರ ಮಳೆ: ಜನರಿಗೆ ಮೂಲಸೌಕರ್ಯ ತೊಂದರೆ ನಾಗರಿಕರ ಆಕ್ರೋಶ

ನಿರಂತರ ಮಳೆ: ಜನರಿಗೆ ಮೂಲಸೌಕರ್ಯ ತೊಂದರೆ ನಾಗರಿಕರ ಆಕ್ರೋಶ

ನಿರಂತರ ಮಳೆ: ಜನರಿಗೆ ಮೂಲಸೌಕರ್ಯ ತೊಂದರೆ ನಾಗರಿಕರ ಆಕ್ರೋಶ  

ರಾಣೆಬೆನ್ನೂರು 23: ನಗರವು ಸ್ಮಾರ್ಟ್‌ ಸಿಟಿಯಾಗಿ ಘೋಷಣೆಯಾದರೂ ಇಲ್ಲಿನ ಅನೇಕ ಹೊಸ ಬಡಾವಣೆಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ.ಪಟ್ಟಣದಿಂದ 2 ಕಿಮೀ ಅಂತರದಲ್ಲಿರುವ ಇಲ್ಲಿನ ಹುಣಸೀಕಟ್ಟಿ ರಸ್ತೆಯ ಪಾರ್ವತಿ ಲೇ ಓಟ್ ಅಭಿವೃದ್ಧಿ ಕಂಡಿಲ್ಲ. ಇಲ್ಲಿನ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಎಲ್ಲ ಕಡೆಗೆ ನೀರು ತುಂಬಿದೆ. ವಾಹನಗಳು ಹಾಗೂ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿನ ನಿವಾಸಿಗಳು ಬೀದಿ ದೀಪ, ಚರಂಡಿ, ರಸ್ತೆ ಅಭಿವೃದ್ಧಿ ಇಲ್ಲದ್ದಕ್ಕಾಗಿ ಕತ್ತಲಿನಲ್ಲಿಯೇ ಜೀವನ ಸಾಗಿಸುವಂತಾಗಿದೆ. ಕುಡಿಯುವ ನೀರು ಬಿಟ್ಟರೆ ಯಾವುದೇ ಮೂಲಸೌಲಭ್ಯ ಒದಗಿಸಿಲ್ಲ. ಈಚೆಗೆ ಇಲ್ಲಿನ ಕೃಷ್ಣ ದೇವಸ್ಥಾನದಲ್ಲಿ ಕಳವಾಗಿದೆ. ಬೀದಿ ದೀಪ ಇಲ್ಲದ್ದಕ್ಕೆ ರಾತ್ರಿ ಹೊತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತವೆ.ಹೊಸ ಬಡಾವಣೆಯಾಗಿ ಹತ್ತಾರು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ.  

ಪಾರ್ವತಿ ಲೇ ಓಟ್‌ಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಇಲ್ಲಿನ ನಿವಾಸಿಗಳು ನಗರ ಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ದೂರಾಗಿದೆ.ಸತತ ಮಳೆಗೆ ಪಾರ್ವತಿ ಲೇಓಟ್ ಎರಡನೇ ಕ್ರಾಸ್ ರಸ್ತೆಯು ಹಗಲೆಲ್ಲ ಬಂದ್ ಆಗುತ್ತದೆ. ಮಳೆ ನೀರು ಹರಿದು ಹೋಗುವವರೆಗೆ ವಾಹನಗಳನ್ನು ಹೊರಗೆ ತೆಗೆಯುವಂತಿಲ್ಲ. ರಸ್ತೆ ಬದಿಗೆ ನಿಲ್ಲಿಸಿ ಹೋಗಬೇಕು. ಬೈಕ್ ಕಳ್ಳತನವಾಗುವ ಭಯ ಕಾಡುತ್ತಿದೆ. ಆಗಾಗ ವಿದ್ಯುತ್ ಸಮಸ್ಯೆಯೂ ಕಾಡುತ್ತಿದೆ. ಕೆಲವೊಮ್ಮೆ ವಿದ್ಯುತ್ ಲೋಡ್ ಹೆಚ್ಚಳದಿಂದಾಗಿ ಇಲ್ಲಿನ ಜಯಮ್ಮ ಎಂಬುವರ ಮನೆಯಲ್ಲಿ 3 ಫ್ಯಾನ್‌ಗಳು ಸುಟ್ಟಿವೆ.ಇಲ್ಲಿನ ಖಾಲಿ ನಿವೇಶನಗಳಲ್ಲಿ ಹುಳ-ಹುಪ್ಪಡಿಗಳ ಕಾಟ ಹೇಳತೀರದು. ಹಗಲಿನಲ್ಲಿಯೇ ಹಾವು, ಚೇಳು ರಸ್ತೆ ಮೇಲೆ ಹರಿದಾಡುತ್ತವೆ. ಚರಂಡಿ ನೀರು ಸರಾಗವಾಗಿ ಮುಂದೆ ಹರಿದು ಹೋಗದೇ ಎಲ್ಲಿ ಬೇಕಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.  

ಇಲ್ಲಿನ ಜನತೆ ಡೆಂಗಿ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂಬುದು ಇಲ್ಲಿನ ನಿವಾಸಿಗಳು ದೂರಾಗಿದೆ.’ಮಳೆ ನೀರು ಹರಿಯಲು ಸಿಡಿ ನಿರ್ಮಿಸಬೇಕು. ಬೀದಿ ದೀಪ, ರಸ್ತೆ ದುರಸ್ತಿ, ಚರಂಡಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಚಂದ್ರ​‍್ಪ ಅಂಗಡಿ, ರಾಜಪ್ಪ, ಬಸವರಾಜ, ಅಭಿಷೇಕ ಆಗ್ರಹಿಸಿದ್ದಾರೆ.ಖಾಲಿ ನಿವೇಶನಗಳಲ್ಲಿ ನೀರು ಸಂಗ್ರಹಮಳೆ ನೀರಿನಿಂದಾಗಿ ಇಲ್ಲಿನ ಮನೆಗಳ ಸುತ್ತ ಖಾಲಿ ನಿವೇಶನಗಳು ಹೊಂಡವಾಗಿ ಮಾರ​‍್ಪಟಟಿವೆ. ಮಳೆ ನೀರು ರಸ್ತೆ ಮೇಲೆ ಹರಿದು ನಿವೇಶನ ಮತ್ತು ಮನೆಗಳು ಜಲಾವೃತಗೊಳ್ಳುತ್ತವೆ. ರಸ್ತೆ ಕಾಣದೇ ಬೈಕ್‌ನಿಂದ ಬಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮಕ್ಕಳು ವೃದ್ಧರು ಓಡಾಡಲು ಭಯಪಡುತ್ತಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ರಸ್ತೆ ಸಮಸ್ಯೆಯಿಂದಾಗಿ ಆಟೊ ಚಾಲಕರು ಬಡಾವಣೆಯ ಒಳಗೆ ಬರುವುದಿಲ್ಲ. ಮುಖ್ಯ ರಸ್ತೆಯಲ್ಲಿಯೇ ಜನರನ್ನು ಇಳಿಸುತ್ತಾರೆ. ಪ್ರತಿ ಬಾರಿ ಮಳೆಗಾಲದಲ್ಲಿ ಬಡಾವಣೆಯ ಮನೆಗಳ ಸುತ್ತ ನೀರು ನಿಲ್ಲುತ್ತದೆ. ಸ್ಥಳೀಯರು ರಸ್ತೆ ಅಗೆದು ನೀರು ಬೇರೆಡೆಗೆ ಸರಗವಾಗಿ ಹರಿಯುವಂತೆ ಮಾಡುತ್ತಾರೆ.  

ಸತತವಾಗಿ ಸುರಿದ ಮಳೆಗೆ ರಸ್ತೆ ಬಂದಾಗಿದ್ದರಿಂದ ನಗರಸಭೆಯಿಂದ ಕಚ್ಚಾ ಕಾಲುವೆ ಮಾಡಿದ್ದಾರೆ. ಮಳೆ ನೀರು ಮುಂದೆ ಹರಿದು ಹೋಗಲು ಪಕ್ಕಾ ಗಟಾರ ನಿರ್ಮಿಸಬೇಕು. ಪಂಪಾನಗರದ ಬಿ ಬ್ಲಾಕ್‌ನಿಂದ ಸೇಂಟ್ ಲಾರೆನ್ಸ್‌ ಸ್ಕೂಲ್ ವರೆಗಿನ ಹುಣಸೀಕಟ್ಟಿ ರಸ್ತೆಗೆ ಬೀದಿ ದೀಪ ಅಳವಡಿಸಬೇಕು ಎಂದು ಇಲ್ಲಿನ ನಿವಾಸಿ ಪೊಲೀಸ್ ಕಾನ್‌ಸ್ಟೆಬಲ್ ಸನದಿ ಒತ್ತಾಯಿಸಿದರು.ಕೋಟ್ಹೊಸ ಬಡಾವಣೆಯಾಗಿ ಹತ್ತಾರು ವರ್ಷ ಕಳೆದರೂ ಅಭಿವೃದ್ಧಿ ಕಂಡಿಲ್ಲ.  

ರಾತ್ರಿ ಹೊತ್ತು ಬೀದಿ ದೀಪ ಇಲ್ಲ. ಮುಖ್ಯ ರಸ್ತೆಯಿಂದ ಮನೆಗೆ ಮೊಬೈಲ್ ಟಾರ್ಚ್‌ ಹಿಡಿದೇ ಹೋಗಬೇಕು.ಶಿವು ರೊಡ್ಡನವರ ಸ್ಥಳೀಯ ನಿವಾಸಿ ರಾಣೆಬೆನ್ನೂರಿನ ಹುಣಸಿಕಟ್ಟಿ ರಸ್ತೆಯ ಪಾರ್ವತಿ ಲೇ ಓಟ್ ರಸ್ತೆ ಬದಿಯಲ್ಲಿ ಮಳೆ ನೀರು ನಿಂತಿರುವುದು. ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯ ಪಾರ್ವತಿ ಲೇ ಓಟ್‌ನ ಮನೆಗಳ ಸುತ್ತ ಮಳೆ ನೀರು ಸಂಗ್ರಹವಾಗಿರುವುದು.ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯ ಸೇಂಟ್ ಲಾರೆನ್ಸ್‌ ಸ್ಕೂಲ್ ಸಮೀಪದ ಪಾರ್ವತಿ ಲೇ ಓಟ್ ಸತತವಾಗಿ ಸುರಿಯುತ್ತಿರುವ ಮಳೆ ನೀರು ರಸ್ತೆ ತುಂಬಿ ಹರಿದು ಮನೆಗಳು ಸಂಪೂರ್ಣ ಜಲಾವೃತ ಗೊಂಡಿರುವುದು. 


ಸುದ್ದಿ ಓದಿ