ರಾಣೆಬೆನ್ನೂರ

ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ

ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ

ರಾಣಿಬೆನ್ನೂರು 28:  ಗ್ರಾಮದಲ್ಲಿ ದೇವಸ್ಥಾನ ಕಟ್ಟಿಸಿದರೆ ಸಾಲದು, ಆ ದೇವಸ್ಥಾನಕ್ಕೆ ಕಳಸಾರೋಹಣ ಮಾಡಿದರೆ ಅದು ಗ್ರಾಮಕ್ಕೆ ಹೊನ್ನ ಕಳಸವಿಟ್ಟಂತೆ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ಜೊತೆಗೆ ಪ್ರತಿಯೊಂದು ಕುಟುಂಬದ ಆರ್ಥಿಕ ಅಭಿವೃದ್ಧಿಯಾಗಿ ಸಂತಸ ಬೀಡಾಗುತ್ತದೆ ಎಂದು ನಗರದ ಶನೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾ ಸ್ವಾಮಿಜಿ ಹೇಳಿದರು.  

ತಾಲೂಕಿನ ಹೊಸ ಮುಷ್ಟೂರು ಗ್ರಾಮದಲ್ಲಿ ​‍್ರ​‍್ರಥಮವಾಗಿ ಕಟ್ಟಿಸಿದ ಆಂಜನೇಯ, ವಿಘ್ನೇಶ್ವರ ಮತ್ತು ಈಶ್ವರ ದೇವರುಗಳ ಮೂರ್ತಿಗಳ ಪ್ರಾಣ ಪ್ರತಿಷ್ಠ್ಠಾಪನೆ, ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನಗಳು ಮತ್ತು ಮಠ ಮಂದಿರಗಳು ಸರ್ವ ಜನರನ್ನು ಸಾಮರಸ್ಯದ ಜೀವನ ನಡೆಸಲು ಶಾಂತಿಯ ತೋಟವಾಗುವುದು ಎಂದು ನುಡಿದರು.  

ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರ ಮಹಸ್ವಾಮಿಗಳು ಮಾತನಾಡಿ, ಒಂದು ಮನೆಯನ್ನು ಕೆಡವಿ ಇನ್ನೊಂದು ಕಡೆ ಕಟ್ಟುವುದೆ ಬಹಳಷ್ಟು ದುಸ್ತರ ಅಂತದರಲ್ಲಿ ಹೋರಾಟಗಾರ ರವೀಂದ್ರಗೌಡ ಪಾಟೀಲರ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನದಿ ದಡದಲ್ಲಿದ್ದ ಪದೇ ಪದೇ ನೆರೆ ಹಾವಳಿಗೆ ತುತ್ತಾಗುತ್ತಿದ್ದ ಈ ಇಡೀ ಮುಷ್ಟೂರು ಗ್ರಾಮವನ್ನು ಸ್ಥಳಾಂತರಗೊಳಿಸಲು ಸರ್ಕಾರದ ಕಣ್ಣು ತೆರಸುವಲ್ಲಿ ಪ್ರಮುಖ ಪಾತ್ರ ವಹಿಸಿ ಶ್ರಮಿಸಿದ್ದರು.  ಅದರರ ಫಲವಾಗಿ ಇಂದು ಸುಸಜ್ಜಿತ ಗ್ರಾಮವಾಗಿ ದೇವಸ್ಥಾನ ನಿರ್ಮಾಣವಾಗಲು ಕಾರಣವಾಗಿದೆ ಎಂದು ನುಡಿದರು.  

ಇದಕ್ಕೂ ಮುನ್ನ ಹೋಮ ಹವನ,  ನವಗ್ರಹ ಶಾಂತಿ ಪೂಜೆ ಸೇರಿದಂತೆ ವಿದಿವಿಧಾನಗಳು ಶಿಕಾರಿಪುರದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿಗಳು ನೆರವೇರಿಸಿದರು. ನಂತರ ದೇವಸ್ಥಾನಕ್ಕೆ ಹರಗುರು ಚರಮೂರ್ತಿಗಳು ಕಳಸಾರೋಹಣ ನೆರವೇರಿಸಿದರು. 

ಗ್ರಾಪಂ ಉಪಾಧ್ಯಕ್ಷಣಿ ಚಂದ್ರಮ್ಮ ಹಿರೇಮರದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ,  ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಬೇಡರ, ಗಂಗಾಧರ ಕಮ್ಮಾರ, ಬಿ.ಡಿ. ದೇವರಮನಿ, ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಯರೇಕುಪ್ಪಿ, ದಿಳ್ಳೆಪ್ಪ ಗಂಗಣ್ಣನವರ, ಬಸವರಾಜ ಯಲ್ಲಕ್ಕನವರ ಮುಂತಾದವರಿದ್ದರು. 


ಸುದ್ದಿ ಓದಿ