ಕಾಗವಾಡ

ಮೋಳೆ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ

ಮೋಳೆ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ

ಕಾಗವಾಡ 08: ತಾಲುಕಿನ ಮೋಳೆ ಗ್ರಾಮದ ಪಶ್ಚಿಮ ತೋಟದಲ್ಲಿ 2019- 20 ನೇ ಸಾಲಿನ ಮೂಲಭೂತ  ಸೌಲಭ್ಯ ಯೋಜನೆಯಡಿ, ಲೋಕೋಪಯೋಗಿ ಇಲಾಖೆ ವತಿಯಿಂದ 10.60 ಲಕ್ಷ ರೂ. ವೆಚ್ಚದ ನಿರ್ಮಾಣವಾದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1 ನೂತನ ಕೊಠಡಿಯ ಉದ್ಘಾಟನೆ, ಕಾಗವಾಡ ಶಾಸಕರಾದ ಶ್ರೀಮಂತ (ತಾತ್ಯಾ) ಪಾಟೀಲ ನೆರವೇರಿಸಿದರು. 

ಮಂಗಳವಾರ ರಂದು ಮೋಳೆ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧಕುಡಿಯುವ ನೀರಿನ ಘಟಕವನ್ನು, ನೀಡಿ ಅದರ ಪೂಜೆಯನ್ನು ಶಾಸಕರು ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಭೂತಾಳಿ ಥರಥರೆ, ಉಪಾಧ್ಯಕ್ಷ ಮನಿಷಾ ರಾಮು ಮುಂಜೆ, ಕಾಗವಾಡ ಬಿಇಒ ಎಮ್ ಆರ್ ಮುಂಜೆ, ತಾಲೂಕ ಎಇಒ ವೀರನಗೌಡ ಎಗನಗೌಡರ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆರ್ ಪಿ ಅವತಾಡೆ, ಮಲ್ಲಿಕಾರ್ಜುನ ಮಗದುಮ್, ಬಿಜೆಪಿ ಚಿಕ್ಕೋಡಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ, ಪಿಡಿಒ ಶ್ರಿಮತಿ ಸಜ್ಜನ, ಸಂಜಯ ತೇಲಸಂಗ, ಸಂದೀಪ ನಲವಡೆ,  ಲಕ್ಷ್ಮಣ ಹಳಮನಿ, ಬಿಲ್ಯಾಣಿ ಪೂಜಾರಿ, ದುಂಡಪ್ಪ ತುಗಶೆಟ್ಟಿ , ಎಚ.ಎಂ ಹವಳೆ ಸಹ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ