“ಮಕ್ಕಳ ದಿನಾಚರಣೆ” ನಿಮಿತ್ತ “ಕಲಿಯೋಣ ಬಾರಾ ಕಲಿಯೋಣ” ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟನೆ
“ಮಕ್ಕಳ ದಿನಾಚರಣೆ” ನಿಮಿತ್ತ “ಕಲಿಯೋಣ ಬಾರಾ ಕಲಿಯೋಣ” ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟನೆ
ಧಾರವಾಡ 14:ನಾವು ಮೊದಲು ಕಲಿಯೋಣ ವಯಸ್ಸಿನ ನಂತರ ದುಡಿಯೋಣ ಎಂದು ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಮಲ್ಲವ್ವ ಕುರಬರ ಹೇಳಿದರು.
ದೇವಿಕೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ “ಮಕ್ಕಳ ದಿನಾಚರಣೆ” ನಿಮಿತ್ತ “ಕಲಿಯೋಣ ಬಾರಾ ಕಲಿಯೋಣ” ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡತ್ತಾ, ನಾವು ಶಾಲೆ ಬಿಟ್ಟು ಕೂಲಿ, ಹೊಲ, ಗದ್ದೆ, ಕುರಿ, ಎಮ್ಮೆ, ದನ ಕಾಯೋಕೆ ಹೋದರೆ, “ಶಿಕ್ಷಣ” ವಿಲ್ಲದೆ ಗ್ಯಾರೇಜ್, ಹೋಟೆಲ್, ಕಾರ್ಖಾನೆ, ಅಂಗಡಿಗಳ ಕೆಲಸದಲ್ಲಿ ತೊಡಗಿದರೆ, ನಮಗೆ ಶಿಕ್ಷಣ ಲಭಿಸದೇ ಕೃಷಿ, ವ್ಯವಸಾಯ ದೂಡಲ್ಪಟ್ಟರೆ,ನಮ್ಮ ಬಾಲ್ಯದ ಆಟ ಹಾಗೂ ಕಲಿಕೆ ಕಳೆದು ಹೊಗಿ ವಂಚಿತರಾಗಿ ಅನಾರೋಗ್ಯಕ್ಕೆ ಹಾಗೂ ಜೀವನದಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಕಾರಣ ಮೊದಲು ಕಲಿಯೋಣ ದೊಡ್ಡವರಾದ ನಂತರ ದುಡಿಯೊಣ್ಣ ಎಂದರು.
ಶಿಕ್ಷಕರಾದ ಶೈಲಜಾ ಕುಲಕರ್ಣಿ ಮಾತನಾಡಿ ಮಕ್ಕಳು ನಾಳಿನ ಪ್ರಜೆಗಳು.ಹಾಗಾಗಿ ನಮ್ಮ ಭಾರತ ದೇಶದ ಯಾವುದೇ ಮಕ್ಕಳನ್ನು ವಿದ್ಯಾಭ್ಯಾಸ ದಿಂದ ವಂಚಿತರನ್ನಾಗಿ ಮಾಡಬಾರದು, ಇಂದು ನಾವು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಆಗಲಿದ್ದಾರೆ. ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ.
ಮುಖ್ಯೋಪಾಧ್ಯಾಯರಾದ ಕುಮಾರ ಕೆ ಎಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶೈಲಜಾ ಕುಲಕರ್ಣಿ, ನಾಗರಾಜ ದೀಕ್ಷಿತ್, ಲೋಹಿತ್ ಡಿ ಕೆ, ಎಸ್ ವಿ ಡೊಂಕನವರ,ನಾಗಪ್ಪ ಮನ್ನಿಕೇರಿ, ಸಿಕಂದರ ಹೊಸಳಿ,್ಳ ಮಲ್ಲಪ್ಪ ಬಬಲೆಣ್ಣವರ, ಶಮೀನಾ ಮಕಾನದಾರ, ಭಾಗಿ ಅಡೋಳಕರ, ಸಚಿನ ಕಾಂಬಳೆ, ಮಲ್ಲಮ್ಮ ಸನ್ನಾಯ್ಕ, ಶ್ವೇತಾ ಲಮಾಣಿ, ಉಪಸ್ಥಿತರಿದ್ದರು.
ಇಡೀ ದಿನ ಮಕ್ಕಳಿಂದ ಪಾಠ ಬೋಧನೆ, ಶಾಲಾ ಸಂಸತ್ತು ಸಭೆ, ಮಕ್ಕಳೇ ಮುಖ್ಯಾಧ್ಯಾಪಕರಾಗಿ, ಶಿಕ್ಷಕರಾಗಿ, ಮ್ಯೂಸಿಕಲ್ ಚೇರ್,ಲಗೋರಿ, ಡೋಸ್ ಬಾಲ್ ಆಟಗಳನ್ನು ಆಡಿ, ಕೇಕ್ ಕತ್ತರಿಸಿ, ಮಕ್ಕಳ ವೈವಿವಿಧ್ಯಮಯ ಕಲರ್ ಡ್ರೇಸ್, ಊಟ, ಇಡೀ ದಿನ ಮಕ್ಕಳ ಹಬ್ಬದಂತೆ ವಿಶೇಷವಾಗಿತ್ತು.ಮಲ್ಲಪ್ಪ ಬಬಲೆಣ್ಣವರ ಸ್ವಾಗತಿಸಿದರೆ, ,ನಾಗಪ್ಪ ಮನ್ನಿಕೇರಿ ನಿರೂಪಿಸಿದರು. ಶಮೀನಾ ಮಕಾನದಾರ ಕೊನೆಯಲ್ಲಿ ವಂದಿಸಿದರು.
ವಿಮೋಚನಾ ಸಂಸ್ಥೆಯ ವಿಶೇಷ ಚೇತನ ಮಕ್ಕಳ ಜೊತೆ ವೀರಶೈವ ಮಹಾ ಸಭಾ ನಗರ ಘಟಕದ ಸದಸ್ಯರು ಮಕ್ಕಳ ದಿನಾಚರಣೆ ಆಚರಿಸಿದರು. ಮಕ್ಕಳಿಗೆ ವಿವಿಧ ಆಟ ಆಡಿಸಿ ಬಹುಮಾನ ಕೊಡುವುದರ ಜೊತೆಗೆ ವಿಶೇಷ ಚೇತನ ಮಕ್ಕಳ ಕೈಯಲ್ಲಿ ಕೇಕ್ ಕಟ್ ಮಾಡಿಸಿದರು. ಈ ಸಂದರ್ಭದಲ್ಲಿ ನಂದಿನಿ ಗಂಗಾಧರ್, ಸೌಮ್ಯ ಸತೀಶ್, ನಾಗಶ್ರೀ ಗೀರೀಶ್, ರೇಣುಕಾ, ಶೃತಿ, ನಾಗವೇಣಿ ಉಪಸ್ಥಿತರಿದ್ದರು.