ಕಾಗವಾಡ

ಓಸಾಟ ಸಂಸ್ಥೆಯಿಂದ ನಿರ್ಮಿತ ಶಾಲಾ ಕೊಠಡಿಗಳ ಉದ್ಘಾಟನೆ

ಓಸಾಟ ಸಂಸ್ಥೆಯಿಂದ ನಿರ್ಮಿತ ಶಾಲಾ ಕೊಠಡಿಗಳ ಉದ್ಘಾಟನೆ

ಕಾಗವಾಡ 09: ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಓಸಾಟ ಸಂಸ್ಥೆ ವತಿಯಿಂದ ಕಟ್ಟಿಸಲಾದ ನೂತನ 3 ಶಾಲಾ ಕೊಠಡಿಗಳನ್ನು ಕಾಗವಾಡ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಅವರು ಪೂಜೆ ಸಲ್ಲಿಸಿ ಉದ್ಘಾಟನೆ ನೆರವೇರಿಸಿದರು. 

ಶಾಸಕರು ಮಾತನಾಡಿ ಓಸಾಟ ಸಂಸ್ಥೆಯವರು ಶಾಲಾ ಕೋಣೆ ನಿರ್ಮಿಸಲು ಸಹಕಾರ ನೀಡಿ, ಉತ್ತಮ ಗುಣಮಟ್ಟದ ಕೋಣೆಗಳನ್ನು ನಿರ್ಮಿಸಿದಕ್ಕೆ ಈ ಸಂಸ್ಥೆಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. 

ಅಂಗನವಾಡಿ ಅವರಣದಲ್ಲಿ  ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂಜೆ ನೆರವೇರಿಸಿ ಚಾಲನೆ ನೀಡಿದರು. 

ಗ್ರಾಮ ಪಂಚಾಯತ ಅಧ್ಯಕ್ಷ ಭೂತಾಳಿ ಥರಥರೆ, ಉಪಾಧ್ಯಕ್ಷ ಮನಿಷಾ ರಾಮು ಮುಂಜೆ, ಕಾಗವಾಡ ಬಿಇಒ ಎಮ್ ಆರ್ ಮುಂಜೆ, ತಾಲೂಕ ಎಇಒ ವೀರನಗೌಡ ಎಗನಗೌಡರ, ಶಕ್ಷಕರ ಸಂಘದ ತಾಲುಕಾ ಅಧ್ಯಕ್ಷ ಗೌಡಪ್ಪಾ ಸಡ್ಡಿ, ಮಲ್ಲಿಕಾರ್ಜುನ ಮಗದುಮ್, ದೀಪಕ ಪಾಟೀಲ, ಸಂಜಯ ತೇಲಸಂಗ, ಸಹ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ