ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಮತ್ತು ಭರಮದೇವರ ಕಳಸಾರೋಹಣ
ರಾಣೆಬೆನ್ನೂರ 03: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನ. 6ರಿಂದ ನ.9ರವರೆಗೆ ಆಂಜನೇಯ ಸ್ವಾಮಿಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಆಂಜನೇಯ ಸ್ವಾಮಿ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭರಮದೇವರ ಕಳಸಾರೋಹಣ ಕಾರ್ಯಕ್ರಮಗಳು ಜರುಗಲಿವೆ. ನ. 6 ರಂದು ಮಧ್ಯಾಹ್ನ 2 ಗಂಟೆಗೆ ಸ್ಥಳೀಯ ಕೆಇಬಿ ಗ್ರಿಡ್ ಬಳಿಯಿಂದ ಆಂಜನೇಯ ಸ್ವಾಮಿಯ ಶಿಲಾಮೂರ್ತಿಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆದು ಮುಷ್ಟೂರ್ಗ್ರಾಮವನ್ನುತಲುಪಲಿದೆ. ನ. 7ರಂದು ಬೆಳಗ್ಗೆ 7 ಗಂಟೆಗೆಕರಗಲು ಸ್ಥಾಪನೆ, ಸಂಜೆ ಶಿಲಾಮೂರ್ತಿಯ ಧಾನ್ಯದಿವಾಸ ನಡೆಯಲಿದೆ.ನ. 8ರಂದು ಮೂರ್ತಿಗೆ ಮಂಗಳ, ಬೆಳ್ಳಿ ಬಂಗಾರ, ಹವಳ, ಮುತ್ತು, ರತ್ನಗಳು ಧನದೊಂದಿಗೆಗದ್ದುಗೆ ಸ್ಥಾಪನೆ ಮಾಡಲಾಗುವುದು.ಅಂಗನ್ಯಾಸ ಹವನ್ಯಾಸ, ಮಹಾ ನ್ಯಾಸ, ತತ್ವದ್ವನ್ಯಾಸ, ರುದ್ರಾಭಿಷೇಕ, ಕಲ ಹೋಮ ನಡೆಯಲಿದೆ.
ಅನಂತರ ನೂತನದೇವಸ್ಥಾನದಉದ್ಘಾಟನೆ, ಮೂರ್ತಿಯ ಪ್ರತಿಷ್ಠಾಪನೆ ಜರುಗುವುದು. ಜೊತೆಗೆ ಭರಮದೇವರ ಕಳಸಾರೋಹಣ ನಡೆಯುವುದು. ಅನಂತರ ಮದ್ಯಾಹ್ನ 12ಗಂಟೆಗೆ ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿಧರ್ಮಸಭೆ ಹಾಗೂ ಸನ್ಮಾನ ಸಮಾರಂಭವುಜರುಗಲಿದೆ. ದೇವಸ್ಥಾನ ಸಮಿತಿಯಅಧ್ಯಕ್ಷಚಂದ್ರಗೌಡ ಸಿ ಪಾಟೀಲ್ಅಧ್ಯಕ್ಷತೆ ವಹಿಸುವರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಸಚಿವಆರ್. ಶಂಕರ್ ಸೇರಿದಂತೆ ಮಂಜುನಾಥ್ಓಲೆಕಾರ್, ಎಸ್ಎಸ್ರಾಮಲಿಂಗಣ್ಣನವರ, ಸಂತೋಷ್ಕುಮಾರ್ ಪಾಟೀಲ, ಪರಮೇಶಪ್ಪ ಗೂಳಣ್ಣನವರ, ಮಂಜುನಾಥ ಹಲ್ಡಲ್ಡರ, ರಾಜುಗೌಡ ಪಾಟೀಲ್, ಬಸಮ್ಮ ತಳವಾರ, ಚಂದ್ರವ್ವ ಹಿರೇಮರದ ಮತ್ತಿತರರುಆಗಮಿಸುವರು. ಆನಂತರಅನ್ನ ಸಂತರೆ್ಣ ನಡೆಯುವುದು. ನ.6 ರಿಂದ ನ. 9ರವರೆಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ 7ಘಂಟೆಯಿಂದ ಪುಟ್ಟರಾಜ್ ಗವಾಯಿಗಳವರ ಶಿಷ್ಯ ಬಸವ ಶಾಸ್ತ್ರಿ ಇರಕಲ್ರವರಿಂದಕೀರ್ತನಕಾರ್ಯಕ್ರಮವುಜರುಗಲಿದೆಎಂದುದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.