ನೂತನ ಎಸ್ಕೆಡಿಆರ್ಡಿಪಿ ಯೋಜನಾ ಕಚೇರಿ ಉದ್ಘಾಟನೆ
ರಾಣೇಬೆನ್ನೂರು 28: ನಾಡಿನ ಸಮಗ್ರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಧರ್ಮಾಧಿಕಾರಿಗಳಾದ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಕ್ಷೇತ್ರದ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು ಬುಧವಾರ ಇಲ್ಲಿನ ಮೇಡ್ಲೆರಿ ರಸ್ತೆಯ, ಕೆಬಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಿಸಲಾದ ಯೋಜನಾ ಕಚೇರಿ-2 ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತಾಲೂಕಿನಲ್ಲಿ, ತನ್ನ ಉದ್ದೇಶಿತ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ, ಕೆಲಸ ನಿರ್ವಹಿಸುತ್ತಿರುವುದು, ಕ್ಷೇತ್ರದ ಶಾಸಕರಾದ ತಮಗೆ ಅತ್ಯಂತ ಸಂತೋಷ ನೀಡಿದೆ ಎಂದರು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾದರೆ, ಸಮಗ್ರ ಕುಟುಂಬವೇ ಸಭಲೀಕರಣವಾದಂತೆ, ಎನ್ನುವ ತತ್ವದಲ್ಲಿ ಧರ್ಮಾಧಿಕಾರಿಗಳು ಯೋಜನೆ ರೂಪಿಸಿರುವುದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ತಾವು ಸಹ ತಮ್ಮ ಪಿಕೆಕೆ ಸಂಸ್ಥೆಯ ಅಡಿಯಲ್ಲಿ, ಉದ್ಯೋಗ, ಕೌಶಲ್ಯ ತರಬೇತಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ಭಾಗದಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಮತ್ತಷ್ಟು ಯೋಜನೆಯನ್ನು ಜಾರಿಗೆ ತರುವ ಸಂಕಲ್ಪ ತಮ್ಮದಾಗಿದೆ. ಅದಕ್ಕಾಗಿ ಬೃಹತ್ ಗಾರ್ಮೆಂಟ್ ಫ್ಯಾಕ್ಟರಿ ನಿರ್ಮಾಣವಾಗಬೇಕಾಗಿದೆ. ಧರ್ಮಾಧಿಕಾರಗಳೊಂದಿಗೆ, ಚರ್ಚಿಸಿದರೆ ಅದಕ್ಕೆ ಬೇಕಾಗುವ ಮೂಲ ಜಮೀನು ದೊರಕಿಸುವ ಭರವಸೆ ನೀಡಿದರು. ನೂತನ ಕಚೇರಿಯ ನಾಮಫಲಕ ಅನಾವರಣಗೊಳಿ, ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಎಲ್. ಹೆಚ್. ಮಂಜುನಾಥ ಅವರು, ಯೋಜನೆಯು ಅತ್ಯಂತ ಪರಿಣಾಮಕಾರಿಯಾಗಿ ತನ್ನ ಸೇವೆ ಸಲ್ಲಿಸುತ್ತಲಿದೆ, ಉತ್ತರ ಕರ್ನಾಟಕದ ಹೆಬ್ಬಾಗಿಲು,ಜಿಲ್ಲೆಯ ತಾಲೂಕಿನಲ್ಲಿ, ಸಾಲ ಸೌಲಭ್ಯಗಳ ಮೂಲಕ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ. ಎಂದರು. 12 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಆರಂಭವಾದ ಈ ಸಂಸ್ಥೆ ಅಧಿಕ ಪ್ರಮಾಣದಲ್ಲಿ ಪ್ರಗತಿ ಸಾಧಿಸಿರುವುದು ಇಲ್ಲಿನ ಜನರ, ಪ್ರೀತಿ ವಿಶ್ವಾಸ ಮತ್ತು ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಇಟ್ಟಿರುವ ಭಕ್ತಿ, ನಂಬಿಕೆಯೇ ಮುಖ್ಯ ಕಾರಣವಾಗಿದೆ. ಆರ್ಥಿಕ ಸಹಾಯದಿಂದಾಗಿ ಓದ್ಯಮಿಕ ಕ್ಷೇತ್ರವು ಚೇತರಿಸಿಕೊಂಡಿದೆ. ಈ ಯೋಜನೆಯಿಂದ ಉದ್ಯಮಶೀಲರಿಗೆ ತುಂಬಾ ಪ್ರಯೋಜನವಾಗಿದೆ ಎಂದು ವಿವರಿಸಿದರು. ನಗರ ಮತ್ತು ಗ್ರಾಮಾಂತರದಲ್ಲಿ 20,000, ಸ್ವಸಹಾಯ ಸಂಘ,3600 ಸಂಘಗಳು ಇಲ್ಲಿವೆ. 33 ಸಾವಿರ ಕುಟುಂಬಗಳು ಅವಲಂಬಿತರಾಗಿದ್ದಾರೆ ಎಂದರು.
ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2012ರ ನಂತರ, ಐಡಿಬಿಐ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಅತ್ಯುತ್ತಮವಾಗಿ ಸಾಲ ಸೌಲಭ್ಯ ಲಭ್ಯವಾಗುತ್ತಲ್ಲಿದೆ. ಕೌಶಲ್ಯ ಚಟುವಟಿಕೆಗಳಿಗೆ ಹೆರಳವಾಗಿ ಸಾಲ ಸಿಗುತ್ತಲ್ಲಿದೆ. ಎಂದರು. ಅಂದು ಕೇವಲ 10 ರಿಂದ 20 ಸಾವಿರ ರೂಗಳ ಸಾಲ ನೀಡುವಿಕೆಯಿಂದ ಆರಂಭವಾದ ಯೋಜನೆ ಇಂದು, ಕನಿಷ್ಠ 5 ಲಕ್ಷ ಗರಿಷ್ಟ 25 ಲಕ್ಷದವರೆಗೆ ಸಾಲ ದೊರೆಯುತ್ತಲ್ಲಿದೆ. ಉಳಿತಾಯ ಯೋಜನೆಯಿಂದ ಅನೇಕ ರೀತಿಯ ಸವಲತ್ತು ಸಿಗುತ್ತಲ್ಲಿದೆ. ಉಳಿಯುವ ಸ್ವಲ್ಪ ಹಣದಿಂದ, ಸಮುದಾಯದ ನಡೆಯುತ್ತಲ್ಲಿದೆ. ಎಂದು ಮಂಜುನಾಥ್ ಅವರು ಸಮಗ್ರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬುಳ್ಳಪ್ಪ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಸ್ವಾತಿ ಮಂಗಳಾ ಸಗಡಿಗರು ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ರು ಸ್ವಾಗತಿಸಿದರು. ಅನಂತ್ ನಿರೂಪಿಸಿ, ತಾಲೂಕ ಯೋಜನಾಧಿಕಾರಿ ಎಂ.ಪಿ. ಮಂಜುನಾಥ್ ವಂದಿಸಿದರು.ಕಾರ್ಯಕ್ರಮದಲ್ಲಿ ಸಂಘದ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು.