ರಾಣೇಬೆನ್ನೂರಲ್ಲಿ ಶಿವಾನಂದ ತಪೋ ಮಂದಿರ ಲೋಕಾರ್ಪಣೆ
ರಾಣೇಬೆನ್ನೂರು 17: ದೇವರು, ಧರ್ಮ ಆಧ್ಯಾತ್ಮ, ಧಾನ,ಧರ್ಮ ಪರೋಪಕಾರ ಇವುಗಳು ಭಾರತೀಯ ಪರಂಪರೆಯಲ್ಲಿ ನಿತ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ ಇದರಿಂದಲೇ, ಭರತ ಭೂಮಿಯಲ್ಲಿ ಪ್ರತಿಯೊಬ್ಬ ನಾಗರಿಕರು ಸದಾ ಕಾಲ ಶಾಂತಿ, ನೆಮ್ಮದಿಯಿಂದ ಬದುಕಿ,ಬಾಳಲು ಸಾಧ್ಯವಾಗಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು.
ವಾಣಿಜ್ಯ ನಗರದ, ಮೆಡ್ಲೇರಿ ರಸ್ತೆಯ, ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ, ದಿಂಡದಹಳ್ಳಿ ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಅನುಗ್ರಹದ ಶಿವಾನಂದ ತಪೋಮಂದಿರ ಲೋಕಾರೆ್ಣ ಮತ್ತು ಉಜ್ಜಯನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ತುಲಾ ಭಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವೃತ್ತಿಯಿಂದ ಶಿಕ್ಷಕರಾಗಿದ್ದ ಲಿಂಗೈಕ್ಯ ಶಿವಾನಂದ ಶ್ರೀಗಳು ಪ್ರವರ್ತಿಯಿಂದ ಭಗವಂತನ ಸಾಕ್ಷಾತ್ ಅಪರಾವತರಾಗಿದ್ದರು.ಓಂ ನಮಃ ಶಿವಾಯ, ನಾಮ ಮಂತ್ರದಿಂದಲೇ, ಭಗವಂತನ ಸಾಕ್ಷಾತ್ಕಾರ ಪಡೆದವರು. ಪ್ರೀತಿ, ವಿಶ್ವಾಸ, ಮತ್ತು ನಂಬಿಕೆ ಅಚಲವಾಗಿದ್ದರೆ ಸಾಕ್ಷತ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಲಿಂ, ಶಿವಾನಂದ ಶಿವಾಚಾರ್ಯರ ತಪಸ್ಸಿದ್ದಿ ನಮ್ಮೆಲ್ಲರಲ್ಲಿ ಇಂದು ಕಾಣಬಹುದಾಗಿದೆ ಎಂದರು.
ವ್ಯಾಪಾರಿ ಕೇಂದ್ರ ರಾಣೇ ಬೆನ್ನೂರ ವಾಣಿಜ್ಯ ವ್ಯವಹಾರಿಕ ಕೇಂದ್ರ. ಇಲ್ಲಿನ ಭಕ್ತರು ಗುರುಗಳು, ಮಠ ಪೀಠಗಳು ಮತ್ತು ಧರ್ಮದ ಕೆಲಸ ಕಾರ್ಯಗಳಲ್ಲಿ ಸದಾ ಕಾಲ ಮುಂದಿರುವುದು ಈ ಮಣ್ಣಿನ ಗುಣ ಧರ್ಮ. ಇಲ್ಲಿನ ನಾಗರಿಕರು ಯಾವುದಕ್ಕೂ ಹಿಂಜರಿಯುವುದಿಲ್ಲ ಧರ್ಮ ಜಾಗೃತಿಯ ಕಾರ್ಯಗಳಿಗೆ ಸದಾ ಮುಂದೆ ಎನ್ನುವ ವಾಣಿಯಂತೆ ಯಾವುದೇ ಜಾತಿ,ಮತ ಭೇದ, ಭಾವ ಇಲ್ಲಿಲ್ಲ. ಈ ತಾಲೂಕಿನಿಂದಲೇ ಪಂಚಪೀಠಗಳಿಗೆ ಅನೇಕ ಜಗದ್ಗುರುಗಳನ್ನು ಕೊಡುಗೆಯಾಗಿ ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ವಾಣಿಜ್ಯ ನಗರದ ಈಶಾನ್ಯ ಭಾಗದಲ್ಲಿ ತಪೋ ಮಂದಿರ ನಿರ್ಮಾಣವಾಗಿರುವುದು, ವಾಸ್ತುದೋಷ ಸರಿಪಡಿಸಿದಂತಾಗಿದೆ ಎಂದು ವಿಶ್ಲೇಷಿಸಿದ ಜಗದ್ಗುರುಗಳು, ಮಾನವನ ಜೀವನ ಮತ್ತಷ್ಟು ಕಲ್ಯಾಣವಾಗಬೇಕು ಅದುವೇ ಉಜ್ಜಯಿನಿ ಜಗದ್ಗುರುಗಳ ಪರಂಪರೆ, ಮತ್ತು ಸದಾಶಯವಾಗಿದೆ ಎಂದ ಶ್ರೀಗಳು ಶಿವಾನಂದ ಶಿವಾಚಾರ್ಯರ, ಆಶಯದಂತೆ ಮಠದಲ್ಲಿ ಮನಸುಗಳನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆಯಲಿ ಎಂದು ತಮ್ಮ ಸದಾಸಯ ವ್ಯಕ್ತಪಡಿಸಿದರು.
ಧರ್ಮಸಭೆಯನ್ನು ಉದ್ಘಾಟಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು, ಮಾನವ ಜನ್ಮ ಪಡೆದ ನಾವೆಲ್ಲರೂ, ನ್ಯಾಯ, ನೀತಿ,,ಧರ್ಮ, ಅಳವಡಿಸಿಕೊಂಡು, ಸಮಗ್ರ ಮಾನವನ ಕಲ್ಯಾಣಕ್ಕಾಗಿ ಶ್ರಮಿಸುವುದರ ಮೂಲಕ, ಸಮಾಜ ಸೇವೆಗೆ ಸನ್ನದ್ದರಾಗಬೇಕು. ಉತ್ತರ ಕರ್ನಾಟಕ, ಮಲೆನಾಡು ಮಧ್ಯೆ ಸಂಪರ್ಕ ಸೇತುವೆಯಾಗಿ, ಸ್ವಾತಂತ್ರ್ಯ ನಂತರ, ನಿರಂತರ ಪ್ರಯತ್ನದಿಂದ ಇಂದು ರಾಣೇಬೆನ್ನೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದರು.
ಇದಕ್ಕಾಗಿ ರೈಲ್ವೆ ಇಲಾಖೆ 200 ಕೋಟಿ, ಭೂಮಿ ಖರೀದಿಗೆ 100 ಕೋಟಿ ಯಡಿಯೂರ್ಪನವರು ನೀಡಿದ್ದಾರೆ. ಇದರ ನಿರ್ಮಾಣದಿಂದ, ಈ ಭಾಗದ ಯುವಕ ಯುವತಿಯರಿಗೆ ಮಿಪುಲ ಉದ್ಯೋಗ ಸೃಷ್ಟಿಯಾಗಲಿದೆ. ಇಚ್ಛಾಶಕ್ತಿ ಕನಸು, ಸಂಕಲ್ಪ,ತಪಸ್ಸಿದ್ದಿ ಇಂದ ಇಂದು ಭವ್ಯ ತಪೋ ಮಂದಿರ ನಿರ್ಮಾಣವಾಗಿದೆ, ಗುಡಿ, ಗೋಪುರಗಳು, ಮಠ,ಮಂದಿರಗಳು, ಮತ್ತು ಧರ್ಮ ಕ್ಷೇತ್ರಗಳು ನಿರ್ಮಾಣದಿಂದ ಮಾತ್ರ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕಲು ಸಾಧ್ಯ, ನಗರ ಪ್ರದೇಶಗಳಲ್ಲಿ, ಯಾಂತ್ರಿಕ ಬದುಕಿನಿಂದಾಗಿ ಶಾಂತಿ ನೆಮ್ಮದಿ ಇಲ್ಲದಂತಾಗಿದೆ ಧರ್ಮ ಜಾಗೃತಿಯ ಕೇಂದ್ರಗಳ ಸ್ಥಾಪನೆಯಿಂದ ಮಾತ್ರ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯವಾಗುವುದು ಎಂದರು. ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರ್ಪನವರು ಜಾರಿಗೆ ತಂದ ಭಾಗ್ಯಲಕ್ಷ್ಮಿ ಗ್ಯಾರೆಂಟಿ ಯೋಜನೆಗೆ 18 ವರ್ಷದ ಕಳೆದವು. ಇನ್ನಾರು ತಿಂಗಳು ಕಳೆದರೆ ಭಾಗ್ಯಲಕ್ಷ್ಮಿಗೆ ಬಲ ಬರುತ್ತದೆ. ಇದರಿಂದ ಅಂದಿನ ಆ ಮಗುವಿಗೆ ಇಂದು ಬಹು ನಗು. ದೂರ ದೃಷ್ಟಿಯ ಫಲ ಇದಾಗಿದೆ ಎಂದು ವಿಶ್ಲೇಷಿಸಿದ ಅವರು, ಗ್ಯಾರೆಂಟಿಗಳು ಬೇಕು ಅವುಗಳು ವೈಜ್ಞಾನಿಕ, ವಾಸ್ತವಿಕ ನೆಲಗಟ್ಟಿನಲ್ಲಿ ಇರಬೇಕಾದ ಅಗತ್ಯವಿದೆ ಎಂದರು.
ನೇತೃತ್ವ ವಹಿಸಿದ್ದ ದಿಂಡದ ಹಳ್ಳಿ ಪಂಚಮಠಾಧ್ಯಕ್ಷ ಪಶುಪತಿ ಶಿವಾನಂದ ಶಿವಾಚಾರ್ಯರು ಮಹಾಸ್ವಾಮಿಗಳು, ಮಾನವ ಜೀವನ ಸಾರ್ಥಕತೆ ಹೊಂದಬೇಕಾದರೆ, ಭಗವಂತನ ಸಾಕ್ಷಾತ್ಕಾರ ಪಡೆಯಬೇಕು. ತಮ್ಮ ಕನಸು ಮತ್ತು ಸಂಕಲ್ಪ ಇಂದು ಈಡೇರಿದೆ. ಪರಮಾತ್ಮ ಲಿಂಗ ಸ್ವರೂಪನಾಗಿದ್ದಾನೆ. ಇತಿಹಾಸದಲ್ಲಿ ರಾಜರು ಮಣ್ಣನ್ನು ಆಳಿ ಮಣ್ಣಾಗಿ ಹೋಗಿದ್ದಾರೆ. ಆದರೆ ಮಹಾತ್ಮರು ಇಂದಿಗೂ ಮಹಾತ್ಮರೆ. ಅಂತಹ ಮಹಾತ್ಮರ ಜೀವನ ದರ್ಶನ ನಮ್ಮದಾಗಬೇಕು ಎಂದರು. ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಸಿದ್ದನಂದಿಶ್ವರ ಶಿವಾಚಾರ್ಯರು, ವೀರಭದ್ರ ಶಿವಾಚಾರ್ಯರು, ಚನ್ನವೀರ ಸ್ವಾಮಿಗಳು, ಸೇರಿದಂತೆ ನಾಡಿನ ಅನೇಕ ಮಠ ಪೀಠಗಳ ಶಿವಾಚಾರ್ಯರು ಮಾತನಾಡಿದರು. ವೇದಿಕೆಯಲ್ಲಿ, ಗಣ್ಯರಾದ ಸಿದ್ದಣ್ಣ ಚಿಕ್ಕಬಿದರಿ, ಕೆ. ಶಿವಲಿಂಗಪ್ಪ, ಶೇಕಪ್ಪ ಹೊಸಗೌಡ್ರ, ಪರಮೆಶ್ವರ್ಪ ಮಠದ ,ಹಾಲಸಿದ್ದಯ್ಯ್ ಶಾಸ್ತ್ರೀ, ರಮೇಶ್ ನಾಯಕ,ಜಗಧೀಶ್ ಮಳಿಮಠ,ಪ್ರಭಾವತಿ ತಿಳುವಳ್ಳಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ,ಗುತ್ತೆಪ್ಪ ಹಳೇಮನಿ,ಬಸವರಾಜ ಪಾಟೀಲ್, ಎಸ್ಎಸ್ ರಾಮಲಿಂಗಣ್ಣನವರ, ಸಂತೋಷ್ ಕುಮಾರ್ ಪಾಟೀಲ್, ಮಲ್ಲಣ್ಣ ಅಂಗಡಿ,ಬಸವರಾಜ ತಳವಾರ, ರಾಜಣ್ಣ ಮೋಟಗಿ ಸೇರಿದಂತೆ ಮತ್ತಿತರ ಗಣ್ಯರು, ಬೇಲೂರು, ದಿಂಡದಹಳ್ಳಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಲಾವಿದ ಗುಡ್ಡಪ್ಪ ಹಿಂದಿನಮನಿ ಸಂಗಡಿಗರು ಪ್ರಾರ್ಥಿಸಿದರು. ಬಿಜೆಪಿ ಯುವ ನಾಯಕ, ಸಿದ್ದಣ್ಣ ಚಿಕ್ಕಬಿದರಿ ಸ್ವಾಗತಿಸಿದರು. ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗುರುರಾಜ್ ಹುಲ್ಲಿನಕೊಪ್ಪ ನಿರೂಪಿಸಿ, ವಂದಿಸಿದರು