ರಾಣೆಬೆನ್ನೂರ

ಸೆಕ್ಯೂರ- 24 ಆಚರಣೆಯ ಸಮಾರಂಭದ ಉದ್ಘಾಟನೆ

ಸೆಕ್ಯೂರ- 24 ಆಚರಣೆಯ  ಸಮಾರಂಭದ ಉದ್ಘಾಟನೆ

ರಾಣಿಬೆನ್ನೂರು 13: ಜಗತ್ತಿನ ಬೇರೆ ಬೇರೆ ದೇಶದ ವಿದ್ಯಾರ್ಥಿಗಳಿಗಿಂತ ಭಾರತ ದೇಶದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಮತ್ತು ಬುದ್ಧಿ ಸಾಮರ್ಥ್ಯ ಅಧಿಕವಾಗಿದ್ದರೂ,  ಶಿಕ್ಷಣವನ್ನು ಪರೀಕ್ಷೆಗಷ್ಟೇ ಸೀಮಿತಗೊಳಿಸಿ,  ಅಂಕಗಳಿಕೆ ಬಗ್ಗೆ ತೋರಿದಷ್ಟು ಆಸಕ್ತಿಯನ್ನು ನಿಜ ಜೀವನದ ಸಾಧನೆಗೆ ಬಳಸಿಕೊಳ್ಳುವಲ್ಲಿ ಅಷ್ಟಾಗಿ ಗಮನ ಕೊಡುತ್ತಿಲ್ಲ. ಅದಕ್ಕಾಗಿ ನಮ್ಮ ವಿದ್ಯಾರ್ಥಿಗಳು ಪಡೆದ ಶಿಕ್ಷಣವನ್ನು ಜ್ಞಾನವನ್ನಾಗಿಯೂ, ಜ್ಞಾನವನ್ನು ಕೌಶಲ್ಯವನ್ನಾಗಿಯೂ ಪರಿವರ್ತಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಹೆಚ್‌.ಎ. ಭಿಕ್ಷಾವರ್ತಿಮಠ ಹೇಳಿದರು. 

ನಗರದ ಹೊರವಲಯದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ  ಸೆಕ್ಯೂರ - 24 ಆಚರಣೆಯ  ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಗೆ ಭಾರವಾಗದೆ ಬದುಕುವವ ನಿಜವಾದ ಭಾರತೀಯ ಎಂದು ಕಿವಿಮಾತು ಹೇಳಿದರು.     

ಪುನಾದ ಮಿಲ್ಟ್ರಿ ಇಂಜಿನಿಯರಿಂಗ್ ಕಾಲೇಜ್ನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಸಿ.ಎಚ್‌. ವಿನಯಕುಮಾರ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ  ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಇದನ್ನು ಸದ್ಭಳಕೆ ಮಾಡಿಕೊಂಡು ದೇಶಕ್ಕೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಬೇಕು. ಬರೀ ಪದವಿ ಪಡೆಯುವುದು ಮುಖ್ಯವಲ್ಲ, ಪದವಿ ಜೊತೆಗೆ  ಸೃಜನಶೀಲತೆ, ಉದ್ಯಮಶೀಲತೆ ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಪ್ರಾಚಾರ್ಯ ಡಾ. ಶಿವಕುಮಾರ ಬಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಯೂರ - 24 ರ ಚೇರ್ಮನ್ ಡಾ. ಬಿ. ಮಹೇಶ್ವರ​‍್ಪ, ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಚೂರಿ,  ಸಜಿದ ಖಾಝಿ,  ಪ್ರತಿಕ್ಷಾ ಕೋರಿ, ಸುಪ್ರಿಯಾ ಪಾಟೀಲ, ರಕ್ಷಿತಾ ಗ್ಪಡಾಸ,  ಪ್ರಜ್ವಲ್ ಎಸ್ ಮತ್ತಿತರರು ಇದ್ದರು. 


ಸುದ್ದಿ ಓದಿ