ಕಾಗವಾಡ

ಮಹಾವೀರ ಪಡನಾಡ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸದಾಶಿವ ಮುತ್ಯಾನ ಮಠ ದಿ.8 ರಂದು ಲೋಕಾರ್ಪಣೆ

ಮಹಾವೀರ ಪಡನಾಡ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ  ಸದಾಶಿವ ಮುತ್ಯಾನ ಮಠ ದಿ.8 ರಂದು ಲೋಕಾರ್ಪಣೆ

ಲೋಕದರ್ಶನ ವರದಿ 

ಕಾಗವಾಡ 07: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ದಾನಸೂರ, ಕಲಿಯುಗದ ಕರ್ಣನೆಂದೇ ಹೆಸರುವಾಸಿಯಾಗಿರುವ ಮಹಾವೀರ ಪಡನಾಡ ಅವರು ಸರಕಾರದಿಂದಾಗದ ಕಾರ್ಯಗಳನ್ನು ತಮ್ಮ ಸ್ವಂತ ಹಣ ಖರ್ಚುಮಾಡಿ ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇವರಿಗೆ ಈ ಭಾಗದಲ್ಲಿ ಕಲಿಯುಗದ ಕರ್ಣ ಎಂದೇ ಕರೆಯುತ್ತಾರೆ. 

 ಸಂಕೋನಟ್ಟಿ ಗ್ರಾಮದಲ್ಲಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಹಲವಾರು ದೇವಾಲಯಗಳನ್ನು ನಿರ್ಮಿಸಿರುವ ಖ್ಯಾತಿ ಮಹಾವೀರ ಪಡನಾಡ ಅವರಿಗೆ ಸಲ್ಲುತ್ತದೆ. ಅಷ್ಟೇ ಏಕೆ ಪ್ರತಿ ವರ್ಷ ದೀಪಾವಳಿಗೆ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಪ್ರತಿವರ್ಷ ಬೆಳ್ಳಿ, ಬಂಗಾರದ ಆಭರಣ, ಬಟ್ಟೆ, ಸೀರೆ, ರವಿಕೆ, ಮಕ್ಕಳಿಗೆ ಪ್ಯಾಂಟ್ ,ಶರ್ಟ, ಧೋತಿ, ಕಾಲುಂಗುರ, ಕಿವಿಯೋಲೆ ಶಾಲಾ ಮಕ್ಕಳಿಗೆ ಚುಡಿದಾರ ಸೇರಿದಂತೆ ಹಲವಾರು ಆಭರಣಗಳನ್ನು ದಾನವಾಗಿ ವಿತರಿಸುತ್ತಾರೆ. 

 ಅವರು ತಮ್ಮ 18 ಲಕ್ಷ ರೂ ಸ್ವಂತ ಹಣದಿಂದ ನೂತನವಾಗಿ ಸದಾಶಿವ ಮುತ್ಯಾನ ಮಠವನ್ನು ನಿರ್ಮಿಸಿದ್ದು ಅದರ ಉದ್ಘಾಟನೆ, ಹಾಗೂ ಲೋಕಾರೆ​‍್ಣ ಸಮಾರಂಭ, ಸದಾಶಿವ ಮುತ್ಯಾ ಮತ್ತು ಚಂದ್ರವ್ವಾ ತಾಯಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ರವಿವಾರ ದಿ. 8 ರಂದು ಜರುಗಲಿದೆ. ಅದರ ನಿಮಿತ್ಯವಾಗಿ ಶನಿವಾರ ದಿ.7ರಂದು ಹೋಮ, ಹವಣ, ವಾಸ್ತು ವಿಧಿ ವಿಧಾನ ಪೂಜಾ ಕಾರ್ಯಕ್ರಮಗಳು ಜರುಗಿದವು. 

  ರವಿವಾರ ದಿ.8 ರಂದು ಮುಂಜಾನೆ ರುದ್ರಾಭಿಷೇಕ, ಸದಾಶಿವ ಮುತ್ಯಾ ಹಾಗೂ ಚಂದ್ರವ್ವಾತಾಯಿಯವರ ಮೂರ್ತಿ ಪ್ರತಿಷ್ಠಾಪನೆ ಪರಮಾನಂದ ದೇವಸ್ಥಾನದಿಂದ ಭವ್ಯ ಕುಂಬಮೇಳ, ಮಠದ ಜರುಗಕಲಿದೆ. ಉದ್ಘಾಟನೆಯನ್ನು ಅಥಣಿ ಶಾಸಕ ಮಹೇಶ ಕುಮಠಳ್ಳಿ ಉದ್ಘಾಟಿಸಲಿದ್ದಾರೆ, 

 ಅತಿಥಿಗಳಾಗಿ ತುಂಗಳ ಮಠದ ಮಾತಾಜಿ ಅನುಷಯಾದೇವಿ, ಗೋಕಾಕದ ಸುವರ್ಣ ಹೊಸಮಠ, ಅಮರ ದುರ್ಗನ್ನವರ, ರವಿ ಬನಜವಾಡ, ಬಸವರಾಜ ದೇವರು, ಸುರೇಶ ಪಡನಾಡ,ರಾಜು ಟೋಪಗಿ ಉಪಸ್ಥಿತರಿರುವರು. ನಂತರ  ಆಶೀರ್ವಚನ ಜರುಗಲಿದೆ,  ಮಹಾಪ್ರಸಾದ ಏರಿ​‍್ಡಸಲಾಗಿದೆ ಎಂದು ಮಹಾವೀರ ಪಡನಾಡ ತಿಳಿಸಿದರು. 


ಸುದ್ದಿ ಓದಿ