ಅಥಣಿ

ಪೃಥ್ವಿ ಗಾರ್ಡನ್ ರೆಸ್ಟಾರಂಟ್ ಸವದಿ ಉದ್ಘಾಟನೆ

ಪೃಥ್ವಿ ಗಾರ್ಡನ್ ರೆಸ್ಟಾರಂಟ್ ಸವದಿ ಉದ್ಘಾಟನೆ

ಲೋಕದರ್ಶನ ವರದಿ 

ಅಥಣಿ 26: ಕರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಹೊಟೇಲ್ ಉದ್ಯಮ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದರೂ ಕೂಡ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಉದ್ಯಮಿಗಳು ಎದೆಗುಂದದೆ ಹೊಸ ಹೊಸ ಹೊಟೇಲ್ ಉದ್ಯಮಗಳನ್ನು ಪ್ರಾರಂಭೀಸುವ ಮೂಲಕ ಉದ್ಯೋಗ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.  

ಅವರು ಅಥಣಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪೃಥ್ವಿ ಗಾರ್ಡನ್ ರೆಸ್ಟಾರೆಂಟ್ ಉದ್ಘಾಟಿಸಿ ಮಾತನಾಡುತ್ತಿದ್ದರು.  

ಒಳ್ಳೆಯ ಗುಣಮಟ್ಟದ ಸಸ್ಯಾಹಾರಿ, ಮಾಂಸಾಹಾರಿ ಆಹಾರವನ್ನು ಸ್ಪರ್ಧಾತ್ಮಕ  ದರದಲ್ಲಿ ನೀಡಲಿ ಎಂದರು. ಕರೋನಾ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ನಿಯಮಾವಳಿಗಳನ್ನು ಪಾಲಿಸಿಕೊಂಡು ತಾಲೂಕಿನ ಜನತೆಗೆ ಒಳ್ಳೆಯ ಸೇವೆ ಒದಗಿಸಿ ಎಂದು ಸಲಹೆ ನೀಡಿದರು.  

ಈ ವೇಳೆ ಅಶೋಕ ಶೆಟ್ಟಿ, ಪ್ರಕಾಶಚಂದ್ರ ಶೆಟ್ಟಿ, ಸುಜನ್ ಶೆಟ್ಟಿ, ಸತೀಶ ಶೆಟ್ಟಿ, ವಿಜಯೇಂದ್ರ ಶೆಟ್ಟಿ, ಸುರೇಶ ಶೆಟ್ಟಿ, ಶರದ ಶೆಟ್ಟಿ, ರವೀಂದ್ರ ಶೆಟ್ಟಿ, ಸುಭಾಷ ಶೆಟ್ಟಿ, ಭರತ ಶೆಟ್ಟಿ, ಬೈಂದೂರು ತಾ.ಪಂ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಸ್ಥಳೀಯ ಉದ್ಯಮಿಗಳಾದ ಮನಮೋಹನ ಶೆಟ್ಟಿ, ವಿನೋದ ಶೆಟ್ಟಿ, ಪ್ರಶಾಂತ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸುಧಾಕರ ಶೆಟ್ಟಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ