ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆ
ರಾಣಿಬೆನ್ನೂರು 08: ವಿದ್ಯಾರ್ಥಿಗಳು ತರಗತಿಗಳಿಗೆ ತಪ್ಪದೆ ಹಾಜರಾಗಬೇಕು ಹಾಗೂ ಗ್ರಂಥಾಲಯದಲ್ಲಿರುವ ಅಮೂಲ್ಯ ಗ್ರಂಥಗಳಿವೆ ಅವುಗಳ ಅಧ್ಯಯ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾವುಕಾರ ಹೇಳಿದರು.
ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಎರಿ್ಡಸಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಪಠ್ಯೇತರ ಚಟುವಟಿಕೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಕೆರೂರಿನ ಪ್ರಾಚಾರ್ಯ ಡಾ.ಸುರೇಶ ಗೌಡರ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಸಂವಹನವನ ಕಲೆ ಬೆಳೆಸಿಕೊಳ್ಳಬೇಕು ಅಂದರೆ ಸಮಾಜದಲ್ಲಿ ಸಾಧಕರು ಹೊರಹೊಮ್ಮಲು ಸಾಧ್ಯ, ಅಲ್ಲದೆ ಮಹಾವಿದ್ಯಾಲಯದಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಸಿದ್ದರಾಗಿರಬೇಕು ಎಂದರು.
ಪ್ರಾಚಾರ್ಯ ಪ್ರೊ.ಸಿ.ಎ. ಹರಿಹರ, ಸಂಸ್ಥೆಯ ಕಾರ್ಯದರ್ಶಿ ಪ್ರೊ. ಸೀತಾ ಕೊಟಿ, ತರುಣ ಪೂಜಾರ, ವಿದ್ಯಾಶ್ರೀ ಗುರ್ಜೆರ, ಪ್ರೊ.ಎಲ್.ಎಮ್ ಮಾವಿನತೋಪ, ಕುಮಾರ ಸುಮುಖ, ಲಕ್ಮೀ, ಪ್ರೊ.ಸಿ.ಎನ್. ಪೂಜಾರ, ಚೈತ್ರಾ ಇನಾಮತಿ ಇದ್ದರು.