ಕಾಗವಾಡ

ದಿ. 11 ರಂದು ಕಾಗವಾಡ ನೂತನ ನ್ಯಾಯಾಲಯದ ಉದ್ಘಾಟನೆ: ಜೋಷಿ

ದಿ. 11 ರಂದು  ಕಾಗವಾಡ ನೂತನ ನ್ಯಾಯಾಲಯದ ಉದ್ಘಾಟನೆ: ಜೋಷಿ

ಶೇಡಬಾಳ 09; ಕಾಗವಾಡ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಬರುವ ರವಿವಾರ ದಿ. 11 ರಂದು ಜರುಗಲಿದ್ದು, ಉದ್ಘಾಟನಾ ಸಮಾರಂಭಕ್ಕೆ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ, ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ. ಇದೇ ಜಿಲ್ಲೆಯ ನ್ಯಾಯಮೂರ್ತಿಗಳಾದ ಸಚೀನ ಮಗದುಮ ಸೇರಿದಂತೆ ಅನೇಕರು ನೂತನ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಜೋಷಿಯವರು ಹೇಳಿದರು.ಅವರು ಗುರುವಾರ ದಿ. 8 ರಂದು ಕಾಗವಾಡ ಪಟ್ಟಣದ ಎಪಿಎಂಸಿ ಆವರಣದಲ್ಲಿ ಲೀಜ್ ಆಧಾರಿತ ಕಟ್ಟಡದಲ್ಲಿ ರವಿವಾರ ದಿ. 11 ರಂದು ಉದ್ಘಾಟನೆಗೊಳ್ಳಲಿರುವ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.  

 ಕಳೆದ ಹಲವಾರು ವರ್ಷಗಳಿಂದ ನ್ಯಾಯಾಲಯ ಸ್ಥಾಪನೆ ಮಾಡಬೇಕೆಂಬ ಅನೇಕರ ಕೂಗಾಗಿತ್ತು. ಸಾರ್ವಜನಿಕರ ಹಿತಾಸಕ್ತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯ ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ. ಈ ನ್ಯಾಯಾಲಯ ಪ್ರಾರಂಭವಾಗುವುದರಿಂದ ಈ ಭಾಗದ ಸಾರ್ವಜನಿಕರಿಗೆ ಅನೂಕೂಲವಾಗಲಿದೆ. ಇಲ್ಲಿ ನ್ಯಾಯಾಲಯ ಪ್ರಾರಂಭವಾಗುವುದರಿಂದ ಸಾರ್ವಜನಿಕರ ವ್ಯಾಜ್ಯಗಳು ಆದಷ್ಟು ಬೇಗನೆ ಬಗೆಹರೆಯಲಿವೆ. ಅದರ ಜತೆಗೆ ಲೋಕ ಅದಾಲತ್ ರಾಜಿ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.ಉದ್ಘಾಟನೆಗೊಳ್ಳಲಿರುವ ನ್ಯಾಯಾಲಯದ ಕಟ್ಟಡವನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ನ್ಯಾಯಾಧೀಶರು ಚಂದ್ರಶೇಖರ ಜೋಷಿಯವರು ವಿಕ್ಷೀಸಿ ಸ್ಥಳೀಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.ಕಾಗವಾಡ ನ್ಯಾಯಾಲಯದ ನ್ಯಾಯಾಧೀಶರಾದ ಚನ್ನಬಸಪ್ಪ ಕುಡಿ, ಅಥಣಿ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರ​‍್ಪ ಹೊನ್ನುರ, ಅಥಣಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶಾಂತ ನಾಗಲಕೋರ, ಬೆಳಗಾವಿ ನ್ಯಾಯಾಧೀಶರಾದ ಗುರುರಾಜ ಶಿರೋಳ, ಕಾಗವಾಡ ತಹಸೀಲ್ದಾರ ಪರಿಮಳಾ ದೇಶಪಾಂಡೆ, ಸಿಪಿಐ ಶಂಕರಗೌಡ ಬಸಗೌಡರ, ಕಾಗವಾಡ ಪಿಎಸ್‌ಐ ಜಹೀರ ಮೋಕಾಸಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಜೆ.ಎ. ಹಿರೇಮಠ, ಆರ್‌.ಪಿ. ಅವತಾಡೆ, ಎಂ.ಎಸ್‌. ಮಗದುಮ, ವಕೀಲರ ಸಂಘದ ಅಧ್ಯಕ್ಷ ಕೆ.ಎ.ವನಜೋಳೆ, ಕಾಗವಾಡ ಸಂಘದ ಅಧ್ಯಕ್ಷ ಬಿ.ಎಂ.ಪಾಟೀಲ, ಉಪಾಧ್ಯಕ್ಷ ಶಿವಾನಂದ ಮಗದುಮ್, ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ, ಪಿ.ಎಸ್‌.ಸಿದ್ನಾಳೆ, ಎಸ್‌.ಆರ್‌.ನಿಂಬಾಳಕರ, ಪಿ.ಜೆ.ಮೋಳೆ, ಪಿ.ಎಸ್‌.ಕನಾಳ, ಶಿವಾಜಿ ಕಾಂಬಳೆ, ಎ.ಬಿ.ದೀಕ್ಷಾಂತ, ಎ.ಸಿ.ಪಾಟೀಲ, ಎಸ್‌.ಎ.ಪಾಟೀಲ, ವ್ಹಿ.ಜಿ. ಛಲವಾದಿ, ಎ.ಬಿ. ಭಂಡಾರೆ ಸೇರಿದಂತೆ ಅನೇಕ ವಕೀಲರು ಇದ್ದರು. 


ಸುದ್ದಿ ಓದಿ