ಕಾಗವಾಡ

ಭಾರತ ಸ್ಕೌಟ್ಸ ಮತ್ತು ಗೈಡ್ಸ ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಉದ್ಘಾಟನೆ

ಭಾರತ ಸ್ಕೌಟ್ಸ ಮತ್ತು ಗೈಡ್ಸ ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಉದ್ಘಾಟನೆ

ಶೇಡಬಾಳ 09: ಕರ್ನಾಟಕ ಸರಕಾರದ ಆದೇಶದಂತೆ ಭಾರತ ಸ್ಕೌಟ್ಸ ಮತ್ತು ಗೈಡ್ಸನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳ 7 ದಿನಗಳ  “ಬೇಸಿಗೆ ಶಿಬಿರ” ದ ಉದ್ಘಾಟನಾ ಸಮಾರಂಭ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದಲ್ಲಿ ಶನಿವಾರ ದಿ. 9 ರಂದು ಜರುಗಿತು.  

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನ್ಮತಿ ವಿದ್ಯಾಲಯದ ಮುಖ್ಯಾದ್ಯಾಪಕಿ ಎಮ್‌. ಎನ್‌. ಕಾಳೆನೆಟ್ಟಿ, ಆರೋಗ್ಯ ಇಲಾಖೆಯ ಎಸ್‌.ವಾಯ.ಕಿಳ್ಳಿಕೇತರ, ಹಾಗೂ ಇನ್ನಿತರ ಗಣ್ಯರು ಲಾರ್ಡ ಬೇಡನ ಪವೇಲ ಹಾಗೂ ಲೇಡಿ ಬೇಡನ ಪವೇಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರು ಹಾಕುವುದರ ಮೂಲಕ  “ಬೇಸಿಗೆ ಶಿಬಿರ” ವನ್ನು ಉದ್ಘಾಟಿಸಿದರು. 

ಸಂಪನ್ಮೂಲ ವ್ಯಕ್ತಿಗಳಾದ ಆರ್‌.ಡಿ.ಮುತಾಲಿಕ, ವಿ.ಕೆ.ಪಾಟೀಲ, ಎಮ್‌.ಕೆ.ಕಾಂಬಳೆ, ವಿ.ಕೆ.ಕಾಂಬಳೆ, ಎ.ಜಿ.ಚೌಗಲೆ, ಎಮ್‌.ಎಮ್‌.ಮಾನಕಾಪೂರೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.  

ಸಂಪನ್ಮೂಲ ವ್ಯಕ್ತಿಗಳಾದ ಆರ್‌.ಡಿ.ಮುತಾಲಿಕ, ವಿ.ಕೆ.ಪಾಟೀಲ, ಎಮ್‌.ಕೆ.ಕಾಂಬಳೆ, ಮಾತನಾಡುತ್ತಾ  ಸ್ಕೌಟ್ಸ ಮತ್ತು ಗೈಡ್ಸ ಪುಸ್ತಕದಲ್ಲಿ ಸಿಗದೆ ಇರುವಂತಹ ಜ್ಞಾನವನ್ನು ನೀಡುತ್ತದೆ. ಚಾರಿತ್ರ್ಯ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ನಮ್ಮ ಕೆಲಸಗಳನ್ನು ನಾವೇ ಮಾಡಿಕೋಳ್ಳಲು ಪ್ರೇರಿಪಿಸುತ್ತದೆ.  ವಿದ್ಯಾರ್ಥಿಗಳಲ್ಲಿ ಶಿಸ್ತು,  ಸ್ವಚ್ಛತೆ, ಆರೋಗ್ಯ ಹಾಗೂ ಸಮಾಜದಲ್ಲಿ ಸಮಾನತೆ ಭಾವನೆ ಮೂಡಿಸಲು ಅನುಕೂಲ ಮಾಡಿಕೋಡುತ್ತದೆ ಎಂದು ಹೇಳಿದರು. 

7 ದಿನಗಳ ಶಿಬಿರದಲ್ಲಿ ಚಾರಿತ್ರ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸದೃಡತೆ, ಜ್ಞಾನಾಭಿವೃದ್ದಿ, ಕೌಶಲ್ಯಾತ್ಮಕ ತರಬೇತಿ, ಪ್ರಾವಿಣ್ಯತೆ ಪರಿಣಿತಿ, ಜೀವನದ ಬೆಲೆ, ಸರ್ವಧರ್ಮ ಸಮನ್ವಯತೆ ವಿಷಯಗಳ ಕುರಿತು ಸಂಪನ್ಮೂಲ ಶಿಕ್ಷಕರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಸನ್ಮತಿ ವಿದ್ಯಾಲಯದ ಸ್ಕೌಟ್ಸ ಕಾರ್ಯದರ್ಶಿ ಎಮ್‌.ಕೆ.ಕಾಂಬಳೆ ಹೇಳಿದರು.  

ಸನ್ಮತಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಎಮ್‌. ಎನ್‌. ಕಾಳೆನೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಆರ್‌.ಡಿ.ಮುತಾಲಿಕ, ವಿ.ಕೆ.ಪಾಟೀಲ, ಎಮ್‌.ಕೆ.ಕಾಂಬಳೆ,  ಆರೋಗ್ಯ ಇಲಾಖೆಯ ಎಸ್‌.ವಾಯ.ಕಿಳ್ಳಿಕೇತರ, ಕನ್ನಡ ಗಂಡು ಮಕ್ಕಳ ಶಾಲೆಯ ಗೈಡ್ಸ ಲೀಡರ ಎಮ್‌. ಎಮ್‌. ಮಾನಕಾಪೂರೆ, ಕನ್ನಡ ಹೆಣ್ಣು ಮಕ್ಕಳ ಶಾಲೆಯ ಗೈಡ್ಸ ಲೀಡರ ಎ.ಜಿ.ಚೌಗಲೆ ಸೇರಿದಂತೆ ಶಿಬಿರದಲ್ಲಿ ಭಾಗವಹಿಸಿದ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. 


ಸುದ್ದಿ ಓದಿ