ರಾಣೆಬೆನ್ನೂರ

ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ ಉದ್ಘಾಟನೆ

ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ ಉದ್ಘಾಟನೆ

ರಾಣಿಬೆನ್ನೂರು 18:  ಎಲೆಕ್ಟ್ರಾನಿಕ್ಸ್‌ ಮಿನಿಯೇಟರೈಸೇಶನ್ ಕ್ಷೇತ್ರದಲ್ಲಿನ ಗಮನಾರ್ಹ ಪ್ರಗತಿಗಳು ವೈಜ್ಞಾನಿಕ ಆಸಕ್ತಿಯನ್ನು ಹೊಸ ವರ್ಗದ ನಿಖರ ಸಾಧನಗಳ ಕಡೆಗೆ ಬದಲಾಯಿಸಿವೆ. ಇದು ಬಯೋಮೆಡಿಕಲ್ ಸೆನ್ಸಿಂಗ್, ಮೆಕ್ಯಾನಿಕ್ಸ್‌, ಮೆಟೀರಿಯಲ್ಸ್‌,  ಸ್ಟ್ರಕ್ಚರ್ಸ್‌, ಎಲೆಕ್ಟ್ರಾನಿಕ್ ಸಿಸ್ಟಮ್ಸ್‌, ಮೈಕ್ರೋ ಮತ್ತು ನ್ಯಾನೋ ಫ್ಯಾಬ್ರಿಕೇಶನ್ ವಿಭಾಗಗಳನ್ನು ಸಂಯೋಜಿಸುವ ಇಂಟರ್ಡಿಸಿಪ್ಲೆನರಿ ಕೋರ್ಸ್‌ ಆಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧನಾ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಹೆಗಡೆ ಹೇಳಿದರು. 

ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ್ದ  ಬಯೋಮೆಡಿಕಲ್ ಅಪ್ಲಿಕೇಶನ್‌ಗಳಿಗಾಗಿ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್‌ ಮತ್ತು ನ್ಯಾನೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಬಗ್ಗೆ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಮೈಕ್ರೋ ಮತ್ತು ನ್ಯಾನೊ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ ತಂತ್ರಜ್ಞಾನವು ವಿವಿಧ ಸೂಕ್ಷ್ಮ ನ್ಯಾನೊ ಮಾರಾಟ ಸಂವೇದಕಗಳು ಮತ್ತು ಒಂದೇ ಚಿಪ್‌ನಲ್ಲಿ ಆಕ್ಟಿವೇಟರ್‌ಗಳನ್ನು ಸಂಯೋಜಿಸುತ್ತದೆ ಎಂದು ತಿಳಿಸಿದರು. 

ಪ್ರಾಚಾರ್ಯ ಡಾ. ಶಿವಕುಮಾರ ಬಿ  ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಬಿ.ಮಹೇಶ್ವರ​‍್ಪ, ಕಾರ್ಯಾಗಾರದ ಸಂಚಾಲಕ ಡಾ. ಶ್ರೀನಿವಾಸರಾವ್ ಉದಾರ, ಪ್ರೊ. ಬಿ.ಜಿ. ಚಂದ್ರಶೇಖರ ಮತ್ತು ಪ್ರೊ. ಸಿ.ಎಂ. ಶ್ವೇತಾ ಇದ್ದರು. 


ಸುದ್ದಿ ಓದಿ