ರಾಣೆಬೆನ್ನೂರ

ಸೆಪ್ಟೆಂಬರ್ 21ರಂದು ಡಿಜಿಟಲ್ ಮೀಡಿಯಾ, ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನೆ

ಸೆಪ್ಟೆಂಬರ್ 21ರಂದು ಡಿಜಿಟಲ್ ಮೀಡಿಯಾ, ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನೆ

ರಾಣೆಬೆನ್ನೂರು 20:  ಸೆಪ್ಟೆಂಬರ್ 21ರಂದು ಬುಧವಾರ ಮುಂಜಾನೆ 11ಗಂಟೆಗೆ, ನಗರ ಹೊರವಲಯದ ಲಲಿತ ಭವನದಲ್ಲಿ ನೂತನ ಡಿಜಿಟಲ್ ಮೀಡಿಯಾ ಮತ್ತು ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಅರುಣಕುಮಾರ್ ಪೂಜಾರ್ ಅವರು, ನೂತನ ಸಂಘದ ಉದ್ಘಾಟನೆ ನೆರವೇರಿಸುವರು. ಗಂಗಾಪುರ ಸಿದ್ಧಾರೂಢ ಆಶ್ರಮದ, ಶ್ರೀ ಸದ್ಗುರು ಮರುಳಶಂಕರ ಸ್ವಾಮೀಜಿದಿವ್ಯ ಸಾನಿಧ್ಯ ವಹಿಸುವರು. ಸಂಘದ ಅಧ್ಯಕ್ಷ ಬೀ ರೇಶ್ ಪೂಜಾರ್ ಅವರು, ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ, ಕೆ. ಬಿ. ಕೋಳಿವಾಡ, ಆರ್ ಶಂಕರ್, ಡಾ :ಬಸವರಾಜ ಕೇಲಗಾರ, ಸಂಜಯ್ ಶೆಟ್ಟಣ್ಣನವರ್, ರೂಪಾ ಚಿನ್ನಿಕಟ್ಟೆ, ಪ್ರಭಾವತಿ ತಿಳುವಳ್ಳಿ, ಸಿದ್ದಪ್ಪ ಬಾಗಲರ, ಶಿವಕುಮಾರ್ ನರಸ ಗೊಂಡರ, ಮಂಜುನಾಥ ಗೌಡ ಶಿವಣ್ಣನವರ, ಪ್ರಕಾಶ ಬುರಡಿಕಟ್ಟಿ, ಸೇರಿದಂತೆ ಮತ್ತಿತರ ಗಣ್ಯರು  ಪಾಲ್ಗೊಳ್ಳುವರು. ಗಣೇಶ ನಂದಿಗಾವಿ, ರಾಜು ತಳವಾರ, ಅನಿಲ್ ಶಾಸ್ತ್ರಿ, ಮಾರುತಿ ಮುಂಡರಗಿ, ನಿಂಗಪ್ಪ ಗುದಗೇರ, ಮಾಲತೇಶ ಕನಕಪ್ಪನವರ್, ರುದ್ರಗೌಡ ಪಾಟೀಲ್, ರಮೇಶ್ ಮಲ್ಲಾಡದ, ನಾಗರಾಜ ಪಾಟೀಲ್ ಸಂಘಟನೆಯ ಇತರೆ ಪದಾಧಿಕಾರಿಗಳು, ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ ಗಣ್ಯರ ಅಭಿನಂದನಾ ಸನ್ಮಾನ ನಡೆಯಲಿದೆ. 


ಸುದ್ದಿ ಓದಿ