ಕಾಗವಾಡ

ಭಗವಾನ ನೇಮಿನಾಥ ಸೌಹಾರ್ದ ಸಂಸ್ಥೆ ಉದ್ಘಾಟನೆ

ಭಗವಾನ ನೇಮಿನಾಥ ಸೌಹಾರ್ದ ಸಂಸ್ಥೆ ಉದ್ಘಾಟನೆ

ಕಾಗವಾಡ 13: ಉಗಾರ ಬುದ್ರುಕ ಗ್ರಾಮದ ಯುವಕರು ಒಂದುಗೂಡಿ ಸ್ಥಾಪಿಸಿದ ​‍್ರ​‍್ರಥಮ ಸಹಕಾರಿ ಸಂಸ್ಥೆಯಾಗಿರುವ ಭಗವಾನ ನೇಮಿನಾಥ ಸೌಹಾರ್ದ ಸಂಸ್ಥೆ ಉದ್ಘಾಟನೆ ಗುರುವಾರ ದಿ. 12ರಂದು ಸಿದ್ಧಸಂಸ್ಥಾನ ಜೈನ ಮಠ ನಾಂದಣಿ, ಜಿನಸೇನ ಭಟ್ಟಾರಕ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಜರುಗಿತು. 

ಯುವಕರು ನಿಸ್ವಾರ್ಥ ಭಾವನೆಯಿಂದ ಸಂಸ್ಥೆ ಹುಟ್ಟುಹಾಕಿ, ಅದನ್ನು ಬೆಳೆಸಲು ಮುಂದಾದರೆ ಸಂಸ್ಥೆಗೆ ಉರ್ಜಿತ ಅವಸ್ಥೆಯಿದೆ. ಭಗವಾನ ನೇಮಿನಾಥ ಇವರ ಹೆಸರಿನಿಂದ ಪ್ರಾರಂಭಿಸಿದ ಈ ಸಂಸ್ಥೆ ಅನೇಕರಿಗೆ ಆರ್ಥಿಕ ನೆರವು ನೀಡಲಿದೆಯೆಂದು ಸ್ವಾಮೀಜಿ ಆಶೀರ್ವದಿಸಿದರು. 

ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮೋಹನರಾವ ಶಹಾ ಉಗಾರ ಬುದ್ರುಕ ಗ್ರಾಮದ ಯುವಕರು ಸ್ಥಾಪಿಸಿದ ಇದು ಮೊದಲನೇ ಸಂಸ್ಥೆಯಾಗಿದೆ. ಆರ್ಥಿಕ ನೆರವು ಪಡೆದುಕೊಂಡು ಸಕಾಲದಲ್ಲಿ ಮರುಪಾವತಿ ಮಾಡುವ ಉದ್ದೇಶ ಇಟ್ಟುಕೊಂಡು ಸಂಸ್ಥೆ ಬೆಳೆಸೋಣ ಎಂದರು. 

ಸಮಾರಂಭದಲ್ಲಿ ಉಗಾರ ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಉಗಾರ ಜೈನ ಸಮಾಜದ ಅಧ್ಯಕ್ಷ ಬಾಬುರಾವ ಅಕಿವಾಟೆ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಕುಸನಾಳೆ, ಉಪಾಧ್ಯಕ್ಷ ಚಂದ್ರಕಾಂತ ಅಕಿವಾಟೆ, ಸದಸ್ಯರಾದ ಬಾಹುಬಲಿ ಪಾಟೀಲ, ಸಂದೀಪ ಮಗದುಮ, ಪ್ರಶಾಂತ ಕುಸನಾಳೆ, ರವೀಂದ್ರ ಮುದ್ಯಪ್ಪಗೋಳ, ಬಾಹುಬಲಿ ತಮ್ದಡ್ಡಿ, ಅಣ್ಣಾಸಾಹೇಬ ಖೋತ, ಯೊಗೇಶ ಶಹಾ, ಸ್ವಾತಿ ಖುರಪೆ, ಅರ್ಚನಾ ಸದಲಗೆ, ಅಜೀತ ಟೋನಪೆ, ವಿಶಾಲ ಕುಸನಾಳೆ, ಸೇರಿದಂತೆ ಅನೇಕರು ಇದ್ದರು.  

ಡಾ. ರಾಜೇಂದ್ರ ಸಾಂಗಾವೆ ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ