ಇಂಡಿ

ಆ. 30 ರಂದು ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟನೆ

ಆ. 30 ರಂದು ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟನೆ

ಇಂಡಿ: ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಹತ್ತಿರ ಬಿಜೆಪಿ ನೂತನ ಕಾರ್ಯಾಲಯ ಮಂಗಳವಾರ ಆ. 30 ಬೆಳಗ್ಗೆ 10.30  ಉದ್ಘಾಟನೆ ನಡೆಯಲಿದೆ.  

ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕಾರ್ಯಾಲಯ ಉದ್ಘಾಟಿಸುವರು. 

ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ  ಬಾಗಲಕೋಟ್ ಮಂಡಲ ಪ್ರಭಾರಿ ರಾಜು ಪೂಜಾರಿ ಭಾಗವಹಿಸುವರು.  

ಕಾರಣ ಬಿಜೆಪಿ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಇಂಡಿ ಜಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ತಿಳಿಸಿದ್ದಾರೆ.  

ಸುದ್ದಿ ಓದಿ