ಕಾಗವಾಡ

ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಪ್ರಾರಂಭಿಸಿರುವ ಡಾ. ನ್ಯಾಮಗೌಡರ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ

ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಪ್ರಾರಂಭಿಸಿರುವ ಡಾ. ನ್ಯಾಮಗೌಡರ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ

ಶೇಡಬಾಳದಲ್ಲಿ ಆಶಾಪ್ರಭು ಆಸ್ಪತ್ರೆ ಉದ್ಘಾಟನೆ 

ಶೇಡಬಾಳ 18: ನುರಿತ ವೈದ್ಯರು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ದೊಡ್ಡ-ದೊಡ್ಡ ಆಸ್ಪತ್ರೆಗಳನ್ನು ಪ್ರಾರಂಭಿಸುವ ಇಂದಿನ ದಿನಮಾನಗಳಲ್ಲಿ ಸುಸಜ್ಜಿತವಾಗ ಆಧುಕಿನ ಆಸ್ಪತ್ರೆಯನ್ನು ಶೇಡಬಾಳದಂತಹ ಗ್ರಾಮೀಣ ಪ್ರದೇಶದಲ್ಲೊ ಪ್ರಾರಂಭಿಸಿರುವ ಡಾ. ಎಸ್‌.ಪಿ. ನ್ಯಾಮಗೌಡರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಸೇವೆ ಗ್ರಾಮೀಣ ಪ್ರದೇಶದ ರೋಗಿಗಳಿಗೆ ವರದಾನವಾಗಲಿ ಎಂದು ಕಾಗವಾಡ ಶಾಸಕರು ಹಾಗೂ ವಾಯ್ಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ರಾಜು ಕಾಗೆ ಹೇಳಿದ್ದಾರೆ. 

ಅವರು ರವಿವಾರ ದಿ. 18 ರಂದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಎಸ್‌.ಪಿ. ನ್ಯಾಮಗೌಡರ ಅವರ ನೂತನ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. 

ಅತಿಥಿಗಳಾಗಿ ಆಗಮಿಸಿದ್ದ ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡಾ ಮಾತನಾಡಿ, ಡಾ. ನ್ಯಾಮಗೌಡರ ಅವರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಇನ್ನೂ ಮಿರಜ್ ಹೆಸರಂತಾ ವೈದ್ಯರಾದ ಡಾ. ಶೀರಿಷ್ ಚೌವ್ಹಾನ, ಡಾ. ಸೋಮಶೇಖರ ಪಾಟೀಲ ಮತ್ತು ಡಾ. ಜೆ.ಎನ್‌. ಭೋಮಾಜ ಉಪಸ್ಥಿತರಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

ಇನ್ನೂ ಡಾ. ಎಸ್‌.ಪಿ. ನ್ಯಾಮಗೌಡರ ಮಾತನಾಡಿ, ತಮ್ಮ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. 

ಡಾ. ಎಸ್‌.ಬಿ. ಪಾಟೀಲ (ಮುನ್ನೋಳ್ಳಿ), ಎಸ್‌ಎಸ್‌ಎಸ್ ಸಮಿತಿಯ ಅಧ್ಯಕ್ಷರಾದ ವಿನೋದ ಬರಗಾಲೆ, ಮುಖಂಡರಾದ ಸುನೀಲ ಪಾಟೀಲ, ಬಾಬಾಸಾಬ ಸೌಂದತ್ತಿ, ಅಜೀತ ನರಸಗೌಡರ, ನೇಮಿನಾಥ ನರಸಗೌಡರ, ನೇಮಿನಾಥ ಘೇನಪ್ಪಗೋಳ, ಮಹಾವೀರ ಸಾಬನ್ನವರ, ರಾಜು ಘೇನಪ್ಪಗೋಳ, ಬಿ.ಜೆ. ಕುರುಂದವಾಡೆ, ರಾಹುಲ್ ಸವದತ್ತಿ ಸೇರಿದಂತೆ ಸುತ್ತಮುತ್ತಲಿನ ಎಲ್ಲ ವೈದ್ಯರು, ಮುಖಂಡರು, ಶೇಡಬಾಳ, ಟಕ್ಕೂಡ್, ಸಾವಳಗಿ, ಜಮಖಂಡಿ ಗ್ರಾಮಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು. ಶೀತಲ ಮಾಲಗಾಂವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಒಟ್ಟಿನಲ್ಲಿ ಡಾ. ಎಸ್‌. ಪಿ. ನ್ಯಾಮಗೌಡರ ಅವರ ಸುಸಜ್ಜಿತ ಆಸ್ಪತ್ರೆ ಗ್ರಾಮೀನ ಭಾಗದ ರೋಗಿಗಳಿಗೆ ವರದಾನವಾಗಲಿ ಎಂಬುದೇ ನಮ್ಮ-ನಿಮ್ಮೆಲ್ಲರ ಹಾರೈಕೆ. 


ಸುದ್ದಿ ಓದಿ