ರಾಣೆಬೆನ್ನೂರ

23ನೇ ವಾರ್ಷಿಕ ಮಹಾಸಭೆ ಉದ್ಘಾಟನೆ: ಏಕಲವ್ಯ ಸಹಕಾರಿ ಬ್ಯಾಂಕ್ 24 ಲಕ್ಷ ರೂ.ಲಾಭ

23ನೇ ವಾರ್ಷಿಕ ಮಹಾಸಭೆ ಉದ್ಘಾಟನೆ: ಏಕಲವ್ಯ ಸಹಕಾರಿ ಬ್ಯಾಂಕ್ 24 ಲಕ್ಷ ರೂ.ಲಾಭ

ರಾಣೇಬೆನ್ನೂರು: ಸೆ 202022-23ನೇ ಸಾಲಿನ ಹೊಸದಾಗಿ 147 ಜನರಿಂದ 14.99 ಲಕ್ಷ ರೂ ಶೇರು ಸಂಗ್ರಹಿಸಲಾಗಿದ್ದು, ಸಂಘದಲ್ಲಿ ಒಟ್ಟು 2818 ಸದಸ್ಯರು ಇದು ಅವರ ಶೇರು ಬಂಡವಾಳ 74.66 ಲಕ್ಷ ರೂ ಆಗಿದ್ದು, ಇದರಲ್ಲಿ 76 ಸಹ ಸದಸ್ಯರು ಇದು ಅವರ ಶೇರು ಬಂಡವಾಳ 1.36 ಲಕ್ಷ ರೂ ಹೊಂದಲಾಗಿದೆ. ಸಂಘದ ಒಟ್ಟು ಶೇರು ಬಂಡವಾಳ 76 ಲಕ್ಷ ರೂ ಆಗಿದ್ದು. 2023-24ನೇ ಸಾಲಿನಲ್ಲಿ ಸಂಘವು ಒಂದು ಕೋಟಿ ಗುರಿ ಹೊಂದಲು ಸಂಘದಿಂದ ಕ್ರಮ ಕೈಗೊಳ್ಳಲಾಗುವುದೆಂದು ಏಕಲವ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಿಂಗಪ್ಪ ಹಳ್ಳಳ್ಳೆಪ್ಪನವರ ಹೇಳಿದರು.ನಗರದ ಪಂಪಾಪತಿ ಸಭಾಭವನದಲ್ಲಿ 23ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಸದಸ್ಯರುಗಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲು ವಿವಿಧ ಉದ್ದೇಶಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗಿದೆ. 2023ನೇ ಸಾಲಿನ ಜಮೀನು ಸಾಲ ಬಾಕಿ 90.12 ಲಕ್ಷ ರೂ ಇದ್ದು, ಅದರಲ್ಲಿ 1.5 ಲಕ್ಷ ರೂ ಸಾಲ ವಿತರಣೆ ಮಾಡಲಾಗಿದೆ. ಜೊತೆಗೆ ವಸೂಲಿ ಮಾಡಿದ ಸಾಲ 1 ಲಕ್ಷ ರೂ ಇರುತ್ತದೆ. ಆಸ್ತಿವತ್ತಿ ಸಾಲ ಬಾಕಿ 2.78 ಲಕ್ಷ ರೂ ಇದ್ದು ಅದರಲ್ಲಿ 2.23 ಲಕ್ಷ ರೂ ಸಾಲವನ್ನು ವಿತರಣೆ ಮಾಡಲಾಗಿದೆ. ಇದರಂತೆ ವಾಹನ ಸಾಲದ ಬಾಕಿ  29.98 ಲಕ್ಷ ರೂ ಇದ್ದು. ಅದರಲ್ಲಿ 22.66 ಲಕ್ಷ ರೂ ವಾಹನ ಸಾಲ ನೀಡಲಾಗಿದೆ. ಇದರಲ್ಲಿ 19.25 ಲಕ್ಷ ರೂ ವಸೂಲು ಮಾಡಲಾಗಿದೆ. ವಾಹನ ಸಾಲದ ಮೊತ್ತ 33.39 ಲಕ್ಷ ರೂ ಇರುತ್ತದೆ. ಮುದ್ದತ್ ಠೇವಿನ ಸಾಲ 14.39 ಲಕ್ಷ ರೂ ಬಾಕಿ ಇದ್ದು. ಈ ವರ್ಷ ಇದರ ಸಾಲವನ್ನು 29.22  ಲಕ್ಷ ರೂ ವಿತರಣೆ ಮಾಡಿದ್ದಾರೆ. ಇದರಲ್ಲಿ 24.66 ಲಕ್ಷ ರೂ ವಸೂಲಾಗಿದೆ. ಸಂಘವು ಈ ವರ್ಷ 24.23 ಲಕ್ಷ ರೂ ನಿವ್ವಳ ಲಾಭವನ್ನು ಹೊಂದಿದೆ. ಸಂಘದ ಸದಸ್ಯರು ಹಾಗೂ ಸೇರುದ್ದಾರರ ಪರವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಸಂಸ್ಥೆಯ ಲಾಭವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರುಏಕಲವ್ಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾದ ರವೀಂದ್ರ ಗೌಡ ಪಾಟೀಲ್ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಸಂಸ್ಥೆಯನ್ನು ಸೇರುದಾರರು, ಸದಸ್ಯರು ಬೆಳೆಸಿಕೊಂಡು ಬಂದಿದ್ದಾರೆ. ಅದರ ಫಲವಾಗಿಯೇ ಇಂದು ಎಮ್ಮೆರವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ. ಸುಮಾರು ವರ್ಷಗಳಿಂದ ಸಂಕಷ್ಟದ ಮಧ್ಯ ಮೇಲಕ್ಕೆ ಬಂದು ಇಂದು ಸ್ವಂತ ಕಟ್ಟಡವನ್ನು ಹೊಂದುತ್ತಿದೆ. ಅಂದರೆ ಅದನ್ನು ಬೆಳೆಸಿದ್ದು ಸೇರದಾರರು ಎಂದು ಹೆಮ್ಮೆಯಿಂದ ಹೇಳಲು ಇಷ್ಟಪಡುತ್ತೇನೆ. ಸಂಘದಲ್ಲಿ ಸೇರುದಾರರು ಕೂಡ ಮಹಾಪ್ರಭುಗಳಿದ್ದಂತೆ.  

ನಗರದ ಹೃದಯ ಭಾಗದಲ್ಲಿ ಜಾಗ ಪಡೆದು ಸ್ವಂತ ಕಟ್ಟಡ ಹೊಂದುವುದು ಅಷ್ಟು ಸುಲಭದ ಮಾತಲ್ಲ, ಅವರನ್ನೆಲ್ಲಾ ಹೊರತುಪಡಿಸಿ ಇಂದು ಹೆಮ್ಮರವಾಗಿ ಬೆಳೆದು ಸ್ವಂತ ಕಟ್ಟಡ ಹೊಂದುತ್ತಿದೆ ಎಂದರೆ ನಮ್ಮೆಲ್ಲರ ಹೆಮ್ಮ ಪಡುವ  ವಿಷಯ. ಸಂಘದ ಸದಸ್ಯರು ಕಳೆದ ವರ್ಷ ಅಂದರೆ 2022ನೇ ವರ್ಷದ ಡಿವ್ಹಿಡೆಂಡನ ಹಣವನ್ನು ಸಂಸ್ಥೆಗೆ ನೀಡಿ ಉದಾರ ಮನಸ್ಸು ತೋರಿಸಿದ್ದಾರೆ. ಅದೇ ರೀತಿ 2023ನೇ ವರ್ಷದ ಡಿವ್ಹಿಡೆಂಡನ ಹಣವನ್ನು ಸದಸ್ಯರು ನೀಡಿ ಸಂಸ್ಥೆಯ ಸ್ವತಃ ಕಟ್ಟಡಕ್ಕೆ ಅನುವು ಮಾಡಿಕೊಟ್ಟಾಗ ಸೊಸೈಟಿ ಬೆಳೆಯಲು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನಿವೃತ್ತ ಅಧಿಕಾರಿಗಳು ನಮ್ಮ ಸಂಸ್ಥೆಯಲ್ಲಿ ಎಫ್ ಡ ಮಾಡುವಂತೆ ನಾವೆಲ್ಲರೂ ಮಾಡಬೇಕಾಗಿದೆ ಎಂದರು.ಏಕಲವ್ಯ ಸೊಸೈಟಿಯ ವಾರ್ಷಿಕ ವರದಿಯನ್ನು ಬಸವರಾಜ್ ಕನ್ನಾಯ್ಕನವರ ಮಂಡಿಸಿದರು. ಕಾರ್ಯಕ್ರಮದಲ್ಲಿ ಎನ್ ಎಸ್ ಕುಂಬಳೂರು ಆನಂತರವಾರು ಮಾತನಾಡಿದರು.ಸಂಘದ ಪಿಗ್ಮಿ ಏಜೆಂಟರುಗಳಿಗೆ ಸನ್ಮಾನವನ್ನು ಮಾಡಲಾಯಿತು.

ಇದೇ ಸಂದರ್ಭದಲ್ಲಿ ಏಕಲವ್ಯ ಸೊಸೈಟಿಯ ಉಪಾಧ್ಯಕ್ಷರಾದ ಗೌರಮ್ಮ ಕರೇಭಣ್ಣನವರು, ಎ ಕೆ ಮಾಗೋಡ, ಹೆಚ್ ಹೆಚ್ ಮೀನಕಟ್ಟಿ, ಹನುಮಂತಪ್ಪ ಅಮರಾವತಿ, ಚಿಕ್ಕಪ್ಪ ಹುಣಸಿಕಟ್ಟಿ, ಕೆ ಬಿ ಲೆಮನಕಣ್ಣನವರ, ಮಾಲತೇಶ ಕಮ್ಮಾರ, ಕುಮಾರ ಸಣ್ಣಬೊಮ್ಮಜ್ಜಿ, ರಾಮಪ್ಪ ಗೊಂದ್ಯಾಳಿ, ಪುಷ್ಪಲತಾ ದೋಣಗೊಂದಿ, ಸಿ ಕೆ ಪಾರ್ವತೇರ, ಕೆ ಕೆ ಕನ್ನಮ್ಮನವರ, ಗುಡ್ಡಪ್ಪ ಕನ್ನಜ್ಜನವರ, ನಾಗಪ್ಪ ಕಾಡಜ್ಜಿ, ಹೊನ್ನಪ್ಪ ಬಾದಿ, ಲತಾ ಹೊಸಮನಿ, ಎಸ್ ಆರ್ ಸರ​‍್ಪಣಣನವರ, ಬಸವರಾಜ ಮಠದ, ಹನುಮಂತ ಲೆಕ್ಕಿಕೋನಿ, ಎಸ್ ಎಫ್ ಕಾಯಕದ, ಬಿ ಆರ್ ಓಲೆಕಾರ,  ಮಂಜುನಾಥ್ ಗುಡಿಗುಡಿ, ಎಚ್ ಬಿ ತಳವಾರ, ಸುರೇಶ ಹದಗಲ್, ಬಸುವರಾಜ ಸಂಕಮ್ಮನವರ ಹಾಗೂ ಹಿರಿಯ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ