ದಿ. 03ರಂದು “ಮೈಸೂರು ಚಲೋ” ಪಾದಯಾತ್ರೆಯ ಉದ್ಘಾಟನೆ
ಇಂಡಿ 02 : ಕಾಂಗ್ರೇಸ್ ಸರಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ 187 ಕೋಟಿ ಹಗರಣದ ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷರು ವಿಜಯೇಂದ್ರ ಅವರ ಕರೆಯ ನಿಮಿತ್ಯ, ನಮ್ಮ ವಿಜಯಪುರ ಜಿಲ್ಲೆಯ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಗುರಲಿಂಗಪ್ಪ ಅಂಗಡಿ ಅವರ ಆದೇಶದ ನಿಮಿತ್ಯ ನಮ್ಮ ಜಿಲ್ಲೆಯ ಎಲ್ಲ ಮಂಡಲದ ಪದಾಧಿಕಾರಿಗಳು ಭಾಗವಹಿಸಿ. ಹಾಗೆಯೇ ಎಲ್ಲ ರೈತ ಮೋರ್ಚಾ ಸದಸ್ಯರು ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕು ಎಂದು ವಿಜಯಪೂರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಶಿವರಾಜ್ ಕೆಂಗನಾಳ ಕರೆ ನೀಡಿದರು.ಅವರು ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಇದೆ ದಿನಾಂಕ: 03.08.2024ರಂದು ಬೆಳಿಗ್ಗೆ 08.00ಗಂಟೆಗೆ “ಮೈಸೂರು ಚಲೋ” ಪಾದಯಾತ್ರೆಯ ಉದ್ಘಾಟನೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಕೆಂಪಮ್ಮ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು ಹಾಗೂ ಈ ಯಾತ್ರೆ ಇದೆ ತಿಂಗಳು 10-08-2024 ರಂದು ಈ ಪಾದಯಾತ್ರೆ ಮೈಸೂರಿನಲ್ಲಿ ಸಮಾರೋಪಗೊಳ್ಳುವುದು ಎಂದು ವಿಜಯಪೂರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.