ಕಾಗವಾಡ

ಮಂಗಸೂಳಿಯಲ್ಲಿ ಸಿದ್ಧ ಸೋನುದೇವ ಮಠದ ಉದ್ಘಾಟನೆ ಸಮಾರಂಭ

ಮಂಗಸೂಳಿಯಲ್ಲಿ ಸಿದ್ಧ ಸೋನುದೇವ ಮಠದ ಉದ್ಘಾಟನೆ ಸಮಾರಂಭ

ಕಾಗವಾಡ27 : ಮಹಾರಾಷ್ಟ್ರದ ಶಿರೋಳ ತಾಲೂಕಿನ ಜಾಂಬಳಿಯಲ್ಲಿರುವ ಸಿದ್ಧ ಸೋನುದೇವ ಮಠವು ಧಾರ್ಮಿಕ ಪರಂಪರೆಯನ್ನು ಪೋಷಿಸುವ ಕಾರ್ಯ ಮಾಡುತ್ತಿದ್ದು ಕರ್ನಾಟಕದ ಭಕ್ತರ ಆಗ್ರಹದ ಮೇರೆಗೆ ಕರ್ನಾಟಕದಲ್ಲಿಯೇ ನೂತನ ಮಠವನ್ನು ಪ್ರಾರಂಭಿಸಲಾಗಿದೆ.  

ರವಿವಾರ ದಿ. 27 ರಂದು ತಾಲೂಕಿನ ಮಂಗಸೂಳಿ ಗ್ರಾಮದ ಪರಿಸರದಲ್ಲಿ ಉಗಾರ ಖುರ್ದನ ತ್ರಿವಿದ ದಾಸೋಹ ಸೇವ ಸಂಘದ ವತಿಯಿಂದ ನೂತನ ಸಿದ್ಧ ಸೋನುದೇವ ಮಠದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಮ್ಮ ಮಠದಿಂದ ಅನ್ನದಾಸೋಹ, ಗೋಶಾಲೆ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಕುರಿ ಸಾಕಾಣಿಕೆ, ಸಾವಯವ ಗೊಬ್ಬರ ನಿರ್ಮಾಣ, ಆರೋಗ್ಯ ಚಿಕಿತ್ಸಾ ಮತ್ತು ಯೋಗ ಶಿಬಿರಗಳು, ವ್ಯಸನಮುಕ್ತಿ ಮತ್ತು ಮಾರ್ಗದರ್ಶನ, ಸಂಸ್ಕೃತಿ ಪ್ರಚಾರ, ಮೂಡನಂಬಿಕೆ ನಿರ್ಮೂಲನೆ, ರಾಷ್ಟ್ರೀಯ ಏಕೀಕರಣ ಅಭಿಯಾನದ ಜೊತೆಗೆ ಹಾಲಮತ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕರ್ನಾಟಕದ ಭಕ್ತರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು. 

ಸಮಾರಂಭದಲ್ಲಿ ಶಾಸಕ ರಾಜು ಕಾಗೆ ಮಠದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಸಿದ್ಧ ಸೋನುದೇವ ಮಹಾರಾಜರು ಜಾತಿ-ಮತ-ಪಂಥಗಳನ್ನು ಮೀರಿ ನಮ್ಮ ಕ್ಷೇತ್ರದಲ್ಲಿ ಮಠವನ್ನು ಸ್ಥಾಪಿಸಿ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರವೃತ್ತಿಯನ್ನು ಜಾಗೃತಗೊಳಿಸಲಿದ್ದಾರೆ. ಈ ಕಾರ್ಯಕ್ಕೆ ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದ ಸಾನಿಧ್ಯವನ್ನು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಪ.ಪೂ. ಶ್ರೀ ಡಾ. ಅಭಿನವ ಬ್ರಹ್ಮಾನಂದ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು. ಈ ಸಮಯದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಂಕರ ವಾಘಮೋಡೆ, ಮಾಜಿ ಜಿ.ಪಂ. ಸದಸ್ಯ ರವೀಂದ್ರ ಪೂಜಾರಿ ಮಂಗಸೂಳಿ ಗ್ರಾ.ಪಂ. ಅಧ್ಯಕ್ಷ ಬಾಳು ಬಜಂತ್ರಿ, ದಲಿತ ಮುಖಂಡ ಸಂಜಯ ತಳವಳಕರ, ಸಂಜಯ ಸಲಗರೆ, ಬಾಳಾಸಾಹೇಬ ಪಾಟೀಲ ಸೇರಿದಂತೆ ಉಗಾರ ಖುರ್ದ ಪಟ್ಟಣದ ತ್ರಿವಿದ ದಾಸೋಹ ಸೇವಾ ಸಂಘದ ಪದಾಧೀಕಾರಿಗಳು ಸಿದ್ಧ ಸೋನುದೇವ ಮಠದ ಭಕ್ತರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ