ಕಾಗವಾಡ

ಮೋಳವಾಡ ಕೃಷಿ ಪತ್ತಿನ ಸಂಘದ ಕಟ್ಟಡ ಉದ್ಘಾಟನೆ

ಮೋಳವಾಡ ಕೃಷಿ ಪತ್ತಿನ ಸಂಘದ ಕಟ್ಟಡ ಉದ್ಘಾಟನೆ

ಕಾಗವಾಡ 12: ಗ್ರಾಮೀಣ ಭಾಗದ ರೈತರು ಬಡ ಜನರ, ಸಾಮಾನ್ಯ ಜನರ ಕಲ್ಯಾಣವಾಗಬೇಕಾದರೇ ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು. 

ಅವರು ಸಮೀಪದ ಮೋಳವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು 25ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿದ ನೂತನ ಕಟ್ಟಡವನ್ನು ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು 

ಸಾನಿಧ್ಯವನ್ನು ಯತೀಶ್ವರಾನಂದ ಸ್ವಾಮೀಜಿ, ಜ್ಞಾನದೇವ ಮಹಾರಾಜರು ವಹಿಸಿದ್ದರು. ಬಿಜೆಪಿ ಯುವ ಮಖಂಡ ಶ್ರೀನಿವಾಸ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

 ಮಾಜಿ ಶಾಸಕ ರಾಜು ಕಾಗೆ, ಕಲ್ಲಪ್ಪಾ ನಾಂದಣಿ, ಗುಲಾಬ ಸೈಯದ, ಅಕ್ಕಾತಾಯಿ ಬೋಲವಾಡೆ ಸುಭಾಷ ಅಥಣಿ, ಸಾಗರ ದುಗ್ಗೆ ಸನ್ಮತಿ ಗಡೆನ್ನವರ ಇತರರು ಇದ್ದರು. ಸಾತಪ್ಪ ಅಥಣಿ ಸ್ವಾಗತಿಸಿದರು. ಸುಭಾಷ ಶೇವಾಳೆ ವಂದಿಸಿದರು 

ಸುದ್ದಿ ಓದಿ