ಶಿಗ್ಗಾವ್

ಕಲ್ಮೇಶ್ವರ ಸಭಾಭವನದ ಉದ್ಘಾಟನಾ ಕಾರ್ಯಕ್ರಮ

ಕಲ್ಮೇಶ್ವರ ಸಭಾಭವನದ ಉದ್ಘಾಟನಾ ಕಾರ್ಯಕ್ರಮ

ಶಿಗ್ಗಾವಿ 29: ಮುತ್ತಳ್ಳಿಯ ಜನತೆಯು ಮುತ್ತಿನಂತವರಾಗಿದ್ದು, ಅವರು ತೋರಿಸಿದ ಪ್ರೀತಿ ವಿಶ್ವಾಸ ನಾನು ಕೆಲಸ ಮಾಡಲು ಸ್ಪೂರ್ತಿಯಾಗಿದ್ದು ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಬಾಕಿ ಇದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಪೂರ್ಣಗೊಳಿಸಿಕೊಡುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. 

ತಾಲೂಕಿನ ಮುತ್ತಳ್ಳಿ ಗ್ರಾಮದಲ್ಲಿ 2021-22ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಬಿವೃದ್ದಿ ಯೋಜನೆಯಡಿ ನಿರ್ಮಿಸಿ ಕಲ್ಮೇಶ್ವರ ಸಭಾಭವನದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ   ಮಾತನಾಡಿದರು.  

ಕಾರ್ಯಕ್ರಮದ ಸಾನಿಧ್ಯವನ್ನು  ಕುಂದಗೋಳ  ಕಲ್ಯಾಣಪುರದ ಪರಮ ಪೂಜ್ಯ ಬಸವಣ್ಣಜ್ಜನವರು ಕ್ಷೇತ್ರದ 500 ಕ್ಕಿಂತ ಹೆಚ್ಚಿನ ದೇವಸ್ಥಾನಗಳನ್ನು ಅಭಿವೃದ್ದಿಗೊಳಿಸುವುದರೊಂದಿಗೆ ಸಮಗ್ರ ಅಭಿವೃದ್ದಿಗೆ ಹೆಚ್ಚು ಒತ್ತುಕೊಟ್ಟು ಆಡಳಿತ ಮಾಡಿದ ಕೀರ್ತಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು. 

 ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯವರು ಮುತ್ತಳಿಯ ಮೈಲಾರ ಲಿಂಗೇಶ್ವರ ಸಭಾಭವನಕ್ಕೆ ಗುದ್ದಲಿ ಪೂಜೆ, ತಡಸ ಗ್ರಾಮದ ಸ್ಮಶಾನ, ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಅರ್ಜುನ ಹಂಚಿನಮನಿ, ನರಹರಿ ಕಟ್ಟಿ, ಗ್ರಾ.ಪಂ.ಅಧ್ಯಕ್ಷೆ ರಜಿಯಾ ಅರಳಿಕಟ್ಟಿ, ಉಪಾಧ್ಯಕ್ಷ ಪ್ರಭು ನಂಜಪ್ಪನವರ, ಈಶ್ವರ ಹರಿಜನ, ಗುರುಶಿದ್ದಯ್ಯ  ಹಿರೇಮಠ, ಮೀರಾ ರಾಜೇಶಭಾವ, ದಯಾನಂದ ಚಂದ್ರಮಟ್ಟಿ, ಹನುಮಂತಪ್ಪಾ ಬಂಡಿವಡ್ಡರ, ಕಲ್ಲಪ್ಪಾ ಅರಳಿಕಟ್ಟಿ, ಮಾಲತೇಶ ಹೊನ್ನಾಳಿ, ಶಂಕ್ರಾ​‍್ಪ ಮಲ್ಲೂರ ಸೇರಿದಂತೆ ಮತ್ತಿತರಿದ್ದರು. 


ಸುದ್ದಿ ಓದಿ