ಮುಂದಿನ ಜನ್ಮದಲ್ಲಿ ದೇವರು ಅವಕಾಶ ಕೊಟ್ಟರೆ ಶಿಗ್ಗಾವಿಯಲ್ಲಿ ಜನಿಸುತ್ತೇನೆ
ಶಿಗ್ಗಾವಿ 11: ಮುಂದಿನ ಜನ್ಮದಲ್ಲಿ ದೇವರು ಅವಕಾಶ ಕೊಟ್ಟರೇ ಶಿಗ್ಗಾವಿಯಲ್ಲಿ ಹುಟ್ಟಬೇಕು ಅಂತ ಬಸವೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ.ಪಿ.ಹೆಚ್ ಹೇಳಿದರು.
ಪಟ್ಟಣದ ಪತ್ರಿಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ನವನಗರ ಏಕದಂತ ಯುವಕ ಮಂಡಳ ನೇತೃತ್ವದಲ್ಲಿ ನಡೆದ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಗ್ಗಾವಿ ಜನತೆಯ ಪ್ರೀತಿ ವಿಶ್ವಾಸದಿಂದ 19 ವರ್ಷ ಕಾಲ ನಿರಂತರ ಜನರ ಸೇವೆ ಮಾಡಲು ಮತ್ತು ಹೊಸ ಜೀವನ ಕೊಟ್ಟಂತಹ ಶಿಗ್ಗಾವಿ ತಾಯಿ ಮನೆ ಇದ್ದ ಹಾಗೆ ಹಾಗೂ ಸೇವೆ ಮಾಡುವ ಮನೋಭಾವ ಎಷ್ಟು ದೊಡ್ಡದೋ ಅಷ್ಟೇ ದೊಡ್ಡದು ಸೇವೆ ತೆಗೆದುಕೊಳ್ಳುವರ ಮನೋಭಾವ ಅಷ್ಟೇ ದೊಡ್ಡದಿರಬೇಕು ಹಾಗೂ ನಮ್ಮ ಹನುಮಂತಪ್ಪ ಡಾಕ್ಟರ್ ಎನ್ನುವ ಪ್ರೀತಿ ವಿಶ್ವಾಸ ಮತ್ತು ಎಲ್ಲಿ ಸಿಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಎಸ್ಎಸ್ಎಲ್ಸಿ ಹೆಚ್ಚು ಅಂಕ ಗಳಿಸಿದ ಅಮಿತ ಕೆಳಗೇರಿ, ಪಿ.ಯು.ಸಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಚೇತನಾ ಗಿರ್ಜಿ, ಸಹನಾ ಪೂಜಾರ ಮತ್ತು ಪತ್ರಿ ಬಸವೇಶ್ವರ ಸಮಿತಿ ಅಧ್ಯಕ್ಷ ಕಾಳಿಂಗಪ್ಪ ಕೋಣಪ್ಪನವರ ಸನ್ಮಾನಿಸಲಾಯಿತು.
ವೀರಭದ್ರಪ್ಪ ಹೊಸಮನಿ, ಶಿವಾನಂದ ತೋಟಪ್ಪನವರ, ನೇಮಣ್ಣನವರ, ಬಸಲಿಂಗಪ್ಪ ಕುನ್ನೂರ, ಮಂಜುನಾಥ ಬ್ಯಾಹಟ್ಟಿ,ರಾಜು ಕೆಂಬಾವಿ, ರವಿ ಕೋಣಪ್ಪನವರ, ಶೈಲಜಾ ಪಾಟೀಲ ಸೇರಿದಂತೆ ನವನಗರ ಯುವಕ ಮಂಡಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಚಿಕ್ಕಮಣಕಟ್ಟಿ ಜೋಡಿ ಬಸವೇಶ್ವರ ಕಲಾ ತಂಡದಿಂದ ಸಂಗೀತ ಸಂಜೆ ನೆರವೇರಿತು.