ಅವಘಡಗಳು ಸಂಭವಿಸಿದಾಗ ತುರ್ತು ಸಹಾಯಕ್ಕೆ ಧಾವಿಸಲಿದೆ 112
ಕಾಗವಾಡ 22: ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಜಿಲ್ಲಾ ಪೊಲೀಸ್ ಪ್ರಮುಖರು ನೀಡಿರುವ ಸಂದೇಶದಂತೆ ಪೊಲೀಸ್ ಇಲಾಖೆಯಿಂದ ಸೇವೆಯ ಅವಶ್ಯಕತೆ ಇದ್ದಾಗ 112 ಸಂಖ್ಯೆಗೆ ಕರೆ ಮಾಡಿ ತುರ್ತ ಸಹಾಯ ಪಡೆದುಕೊಳ್ಳಬಹುದೆಂದು ಅಥಣಿ ಸಿಪಿಐ ಶಂಕರಗೌಡಾ ಪಾಟೀಲ ಅಹ್ವಾನಿಸಿದ್ದಾರೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ಎಂಥದೆ ತುರ್ತು ಪರಿಸ್ಥಿತಿ ಎದುರಾದಾಗ ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದು.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಕಾಗವಾಡ, ಶಿರಗುಪ್ಪಿ, ಉಗಾರ ಬುದ್ರುಕ, ಉಗಾರ ಖುರ್ದ, ಐನಾಪುರ, ಮಂಗಸೂಳಿ ಈ 6 ಪಟ್ಟಣಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು 24*7 ಪೊಲೀಸ್‍ರು ಸೇವೆಯಲ್ಲಿದ್ದು, “ತುರ್ತು ಪರಿಸ್ಥಿತಿ ಯಾವುದೇ ಇರಲಿ, ಪೊಲೀಸ್ ಅಗ್ನಿ, ವಿಪತ್ತು 24*7 ಒಂದೇ ನಂಬರ್ ಡಯಲ್ ಮಾಡಿ 112. ಬೆಳಗಾವಿ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ” ಎಂಬ ನಾಮಫಲಕ ಅಳವಡಿಸಲಾಗಿದೆಯೆಂದು ಕಾಗವಾಡ ಪಿಎಸ್‍ಐ ಹನುಮಂತ ಧರ್ಮಟ್ಟಿ ತಿಳಿಸಿದರು.