ಧಾರವಾಡ - ಹುಬ್ಬಳ್ಳಿ

ಸರಕಾರವೇ ಪಂ. ಪುಟ್ಟರಾಜರ ಸಮಗ್ರ ಸಾಹಿತ್ಯ ಸಂಪುಟ ಹೊರತರಲಿ: ಚನ್ನವೀರಶ್ರೀ

ಸರಕಾರವೇ ಪಂ. ಪುಟ್ಟರಾಜರ ಸಮಗ್ರ ಸಾಹಿತ್ಯ ಸಂಪುಟ ಹೊರತರಲಿ: ಚನ್ನವೀರಶ್ರೀ

ಧಾರವಾಡದಲ್ಲಿ ಪಂ. ಪುಟ್ಟರಾಜ ಸಾಹಿತ್ಯೋತ್ಸವ-2024 

ಧಾರವಾಡ 21: ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ- ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದು, ಸರಕಾರವೇ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿ ಅವರ ಸಾಹಿತ್ಯ, ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಕಡಣಿ ಸಂಸ್ಥಾನ ಹಿರೇಮಠದ ವೇ. ಚನ್ನವೀರ ಸ್ವಾಮಿಗಳು ಗದಗ ಇವರು ಸರಕಾರಕ್ಕೆ ಒತ್ತಾಯಿಸಿದರು.  

ಅವರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು 20 ಅಕ್ಟೋಬರ್ 2024 ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಪಂ. ಪುಟ್ಟರಾಜ ಸಾಹಿತ್ಯೋತ್ಸವ-24 ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಗಳು, ಮುಂದುವರೆದು ಮಾತನಾಡುತ್ತ, ಪಂ. ಪುಟ್ಟರಾಜರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಸರಕಾರ ಸ್ಪಂದಿಸಿ ಪೂಜ್ಯರ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಲಿ ಎಂದು ಹೇಳಿದರು.  

ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ, ಸಾಹಿತಿ ಡಾ, ಎ. ಎಲ್‌. ದೇಸಾಯಿ, ದಾರವಾಡ ಇವರು ಪೂಜ್ಯರ ಸಮಗ್ರ ಸಾಹಿತ್ಯ ಸೇವೆಯ ಕುರಿತು ಮಾತನಾಡಿ ಪಂ. ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು ಈ ಕೆಲಸ ಧಾರವಾಡದ ರಂಗಾಯಣದ ನಿರ್ದೇಶಕರರಾದ ರಾಜು ತಾಳಿಕೋಟಿ ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡರು. 

ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೊಟಿಯವರು ಪೂಜ್ಯ ಗುರು ಪುಟ್ಟರಾಜ ಕವಿಗವಾಯಿಗಳವರೊಂದಿಗಿನ ಒಡನಾಟ ಮತ್ತು ಪೂಜ್ಯರ ವೃತ್ತಿರಂಗಭೂಮಿಯ ಕುರಿತಾದ ಕಾಳಜಿ ಮತ್ತು ತಮ್ಮ ವೃತ್ತಿ ಬದುಕಿನಲ್ಲಿ ಪೂಜ್ಯರ ಆರ್ಶೀವಾದ ಕುರಿತಾಗಿ ಭಾವತುಂಬಿ ಪೂಜ್ಯರನ್ನು ಸ್ಮರಸಿಕೊಂಡರು. ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಮಾತನಾಡಿ ಪೂಜ್ಯ ಗುರು ಪುಟ್ಟರಾಜರ ಒಡನಾಟದ ಸವಿ ನೆನಪು ಹಂಚಿಕೊಂಡರು. 

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ‘ರಾಜ್ಯ ಸಂಗೀತ ವಿದ್ವಾನ’ ಪಂ. ಬಸವರಾಜ ಹೆಡಿಗ್ಗೊಂಡ, ರಂಗಾಯಣದ ನೂತನ ನಿರ್ದೇಶಕರರಾದ ರಾಜು ತಾಳಿಕೋಟಿ ಇವರುಗಳಿಗೆ ಸನ್ಮಾನಿಸಲಾಯಿತು.   

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ 2024 ನೆಯ ‘ವರ್ಷದ ಶೇಷ್ಠ ಕೃತಿ ರತ್ನ ಪ್ರಶಸ್ತಿ’ ಗೆ ಭಾಜನ ಕೃತಿ ಕರ್ತರಾದ ಭಾತ್ರಂಬದ ಪೂಜ್ಯ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳ ಬೆಳಗಾವಿಯ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಸುರೇಶ ಕಳಸನ್ನವರ ಸ್ವಾಗತಿಸಿದರು, ಬಸವರಾಜ ಹಡಪದ ಕಾರ್ಯಕ್ರಮ ನಿರೂಪಣೆ ಮಾಡಿದರು.  

ಮಧ್ಯಾಹ್ನದ ಭೋಜನದ ವಿರಾಮದ ನಂತರ ಶ್ರೀ ಎಂ. ಪಿ. ಎಂ. ಕೊಟ್ರಯ್ಯ ನಿವೃತ್ತ ಪ್ರಾಧ್ಯಾಪಕರು, ಹೂವಿನ ಹಡಗಲಿ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ಎರಿ​‍್ಡಸಲಾಗಿತ್ತು. 

ಇದೇ ಸಂದರ್ಭದಲ್ಲಿ ತೀರ​‍್ುಗಾರರ ಮೆಚ್ಚಿನ ಕೃತಿ ಅಭಿನಂದನಾ ಪ್ರಶಸ್ತಿ’ಗೆ ಭಾಜನರಾದ ಮಹಾಂತೇಶ ಕುಂಬಾರ (ಎಮ್ಮಾರ್ಕೆ) ರನ್ನ ಬೆಳಗಲಿ, ಎ. ಆರ್‌. ಪಂಪಣ್ಣ, ವಟ್ಟಮ್ಮನಹಳ್ಳಿ, ರೂಪಾದೇವಿ ಬಂಗಾರ, ಸೇಡಂ, ಮಾಲತೇಶ ಅಂಗೂರ, ಹಾವೇರಿ, ರಂಜಿತಾ ಮಹಾಜನ ಮತ್ತು ವಿನುತ ಹಂಚಿನಮನಿ ಧಾರವಾಡ, ಇವರುಗಳಿಗೆ ಅಭಿನಂದಿಸಲಾಯಿತು.  

‘ವಿದುಷಿ’ ರೋಹಿಣಿ ಇಮಾರತಿ ಧಾರವಾಡ, ‘ವಿದುಷಿ’ ಡಾ. ಸುಮಾ ಹಡಪದ ಹಳಿಯಾಳ, ಧಾರವಾಡ ‘ವಿದುಷಿ’ ವಿಜಯಲಕ್ಷ್ಮಿ ಬಸಯ್ಯ ಬನ್ನಿಗೋಳಮಠ, ಹುಬ್ಬಳ್ಳಿ ಇವರುಗಳಿಗೆ ಪುಟ್ಟರಾಜ ಸಂಗೀತ/ನೃತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ